ಬೆಂಗಳೂರು(ಜು.16): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಫ್ರಾನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ 2018ರ ಫುಟ್ಬಾಲ್ ವಿಶ್ವಕಪ್ ಅದ್ಧೂರಿಯಾಗಿ ತೆರೆಕಂಡಿದೆ. ಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾ ತಂಡವನ್ನ ಮಣಿಸಿದ ಫ್ರಾನ್ಸ್ ತಂಡ ಬರೋಬ್ಬರಿ 260 ಕೋಟಿ ರೂಪಾಯಿ ಬಹುಮಾನ ಮೊತ್ತವನ್ನ ಪಡೆಯಿತು.

ಚಾಂಪಿಯನ್ ಫ್ರಾನ್ಸ್ 260 ಕೋಟಿ ರೂಪಾಯಿ ಪಡೆದರೆ, ರನ್ನರ್ ಅಪ್ ಕ್ರೊವೇಷಿಯಾ 191 ಕೋಟಿ ರೂಪಾಯಿ ಪಡೆದಿದೆ. ಈ ಪ್ರಶಸ್ತಿ ಮೊತ್ತಕ್ಕೆ ಹೊಲಿಸಿದರೆ ಐಪಿಲ್ ಮೊತ್ತ ತೀರಾ ಕಡಿಮೆ. ಇವೆರಡು ಟೂರ್ನಿಗಳನ್ನ ಹೊಲಿಕೆ ಮಾಡುವಂತಿಲ್ಲ.

ವಿಶ್ವದ ಅತೀ ದೊಡ್ಡ ಕ್ರೀಡೆ ಫುಟ್ಬಾಲ್ ಕನಿಷ್ಠ 160 ರಾಷ್ಟ್ರಗಳು ಮುಖ್ಯಭೂಮಿಕೆಯಲ್ಲಿ ಫುಟ್ಬಾಲ್ ಆಡುತ್ತಿದೆ. ಆದರೆ  15 ರಿಂದ 20 ರಾಷ್ಟ್ರಗಳು ಮಾತ್ರ ಕ್ರಿಕೆಟ್ ಆಡುತ್ತಿದೆ. ಅದರಲ್ಲೂ ಟಾಪ್ 10 ತಂಡಗಳು ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಇನ್ನು ಐಪಿಎಲ್ ಟೂರ್ನಿ ಶ್ರೀಮಂತ ಕ್ರಿಕೆಟ್ ಲೀಗ್ ಅನ್ನೋದರಲ್ಲಿ ಎರಡು ಮಾತಿಲ್ಲ. ಇದರಲ್ಲಿ ಗರಿಷ್ಠ 8 ರಾಷ್ಟ್ರಗಳ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಇದರ ಪ್ರಶಸ್ತಿ ಮೊತ್ತ ಫುಟ್ಬಾಲ್‌ಗೆ ಹೋಲಿಕೆ ಮಾಡುವಂತಿಲ್ಲ.

ಫಿಫಾ ವಿಶ್ವಕಪ್ ಗೆದ್ದ ತಂಡ  260 ಕೋಟಿ ರೂಪಾಯಿ ಪ್ರಶಸ್ತಿ ಮೊತ್ತ ಪಡೆದರೆ, ಐಪಿಎಲ್ ಗೆದ್ದ ತಂಡ 20 ಕೋಟಿ ರೂಪಾಯಿ ಪಡೆಯಲಿದೆ.  ಇನ್ನು ಫಿಫಾ ರನ್ನರ್ ಅಪ್ ತಂಡದ ಪ್ರಶಸ್ತಿ ಮೊತ್ತ 191 ಕೋಟಿ, ಐಪಿಲ್ ರನ್ನರ್ ಅಪ್ ತಂಡದ ಪ್ರಶಸ್ತಿ ಮೊತ್ತ 12.5 ಕೋಟಿ.

ಫಿಫಾ ಹಾಗೂ ಐಪಿಎಲ್ ಟೂರ್ನಿಗಳ ಪ್ರಶಸ್ತಿ ಮೊತ್ತದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಬಹುತೇಕ ಕ್ರಿಕೆಟಿಗರು ಕೋಟಿ ಕೋಟಿ ರೂಪಾಯಿ ನೋಡಿದ್ದು ಇದೇ ಐಪಿಎಲ್ ಟೂರ್ನಿಯಿಂದ ಅನ್ನೋದು ಗಮನಾರ್ಹ. ಕ್ರಿಕೆಟಿಗರ ಆರ್ಥಿಕ ಪರಿಸ್ಥಿತಿಯನ್ನ ಉತ್ತಮಗೊಳಿಸಿದ ಹಿರಿಮೆ ಇದೇ ಐಪಿಎಲ್ ಟೂರ್ನಿಗಿದೆ.