Asianet Suvarna News Asianet Suvarna News

ಜರ್ಮನಿ ಸೋಲನ್ನು ಎಂಜಾಯ್ ಮಾಡಿದ ಫುಟ್ಬಾಲ್ ಅಭಿಮಾನಿಗಳು

ಹಾಲಿ ಚಾಂಪಿಯನ್ ಜರ್ಮನಿ ತಂಡವು ದಕ್ಷಿಣ ಕೋರಿಯಾ ಎದುರು 2-0 ಗೋಲುಗಳ ಅಂತರದ ಹೀನಾಯ ಸೋಲು ಕಂಡಿದೆ. ಈ ಮೂಲಕ ಜರ್ಮನಿ ಗ್ರೂಪ್ ಹಂತದಲ್ಲೇ ಹೊರ ಬಿದ್ದು ನಿರಾಸೆ ಅನುಭವಿಸಿದೆ. ಜರ್ಮನಿ ಸೋಲು ಸ್ವೀಡನ್ ತಂಡಕ್ಕೆ ವರವಾಗಿದ್ದು, ನಾಕೌಟ್ ಪ್ರವೇಶಿಸಲು ಸಾಧ್ಯವಾಗಿದೆ.

ಇದು ಆಘಾತಕಾರಿ ಫಲಿತಾಂಶ ನಿಜ. ಆದರೂ ನಮಗೆ ಸಂತೋಷವಾಗಿದೆ. ನಾವು ಬಸ್’ನಲ್ಲಿಯೇ ಪಂದ್ಯವನ್ನು ಎಂಜಾಯ್ ಮಾಡಿದೆವು. ಈಗ ಸ್ವಿಟ್ಜರ್’ಲ್ಯಾಂಡ್ ಚಾಂಪಿಯನ್ ಆಗಲು ದಾರಿ ಸುಗಮವಾಗಿದೆ ಎಂದು ಸ್ವಿಸ್ ಅಭಿಮಾನಿ ಹರ್ಷ ವ್ಯಕ್ತಪಡಿಸಿದ್ದಾನೆ.
ಖಂಡಿತವಾಗಿಯೂ ನಾವು ನಿರಾಳರಾಗಿದ್ದೇವೆ. ಕಳೆದ ವಿಶ್ವಕಪ್’ನಲ್ಲಿ ನಮಗೆ ಶಾಕ್ ಕೊಟ್ಟ ಜರ್ಮನಿ ಬೈ ಬೈ ಎಂದು ಬ್ರೆಜಿಲ್ ಅಭಿಮಾನಿ ಜರ್ಮನಿ ತಂಡಕ್ಕೆ ಗುಡ್’ಬೈ ಹೇಳಿದ್ದಾನೆ.
ಕಳೆದ ವಿಶ್ವಕಪ್ ಸೆಮಿಫೈನಲ್’ನಲ್ಲಿ 7-1ರಿಂದ ನಮ್ಮನ್ನು ಜರ್ಮನಿ ಸೋಲಿಸಿತ್ತು. ಬ್ರೆಜಿಲ್ ಹಾಗೂ ಬ್ರಿಜಿಲ್ ಅಭಿಮಾನಿಗಳಿಗೆ ಜರ್ಮನಿ ಇನ್ನೊಮ್ಮೆ ನಮ್ಮೆದುರು ಕಾದಾಡಬೇಕಿತ್ತು. ಆದರೆ ಅವರ ಸೋಲು ನಮ್ಮ ತಪ್ಪಲ್ಲ ಎಂದು ಮತ್ತೊಬ್ಬ ಬ್ರೆಜಿಲ್ ಅಭಿಮಾನಿ ವ್ಯಂಗ್ಯದ ವಿದಾಯ ಕೋರಿದ್ದಾನೆ.
ಅವರು ನಮ್ಮನ್ನು ಮಣಿಸಿದ್ದರು. ಇಂದು ನಾವು ಹೀರೋಗಳಾಗಿದ್ದೇವೆ ಎಂದು ಸಂತಸ ಹಂಚಿಕೊಂಡಿದ್ದಾನೆ ಸಾಂಬಾ ನಾಡಿನ ಮತ್ತೊಬ್ಬ ಅಭಿಮಾನಿ.