ಇಂದಿನಿಂದ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ: ಕಣದಲ್ಲಿ ಭಾರತದ ಐವರು
ಮುಕ್ತ (ಪುರುಷ) ವಿಭಾಗದಲ್ಲಿ ಆರ್.ಪ್ರಜ್ಞಾನಂದ, ಡಿ.ಗುಕೇಶ್, ವಿದಿತ್ ಗುಜರಾತಿ ಸ್ಪರ್ಧಿಸಲಿದ್ದು, ಮಹಿಳಾ ವಿಭಾಗದಲ್ಲಿ ಕೊನೆರು ಹಂಪಿ, ಆರ್.ವೈಶಾಲಿ ಆಡಲಿದ್ದಾರೆ. ಏ.22ರ ವರೆಗೂ ನಡೆಯಲಿರುವ ಟೂರ್ನಿಯಲ್ಲಿ ತಲಾ 8 ಪುರುಷ, ಮಹಿಳಾ ಚೆಸ್ ಪಟುಗಳು ಸ್ಪರ್ಧಿಸಲಿದ್ದಾರೆ.
ಟೊರೊಂಟೊ(ಏ.03): 2024ರ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಆಡಲು ಅರ್ಹತೆಗಾಗಿ ನಡೆಯುವ ಕ್ಯಾಂಡಿಡೇಟ್ಸ್ ಟೂರ್ನಿಯು ಬುಧವಾರದಿಂದ ಇಲ್ಲಿ ಆರಂಭಗೊಳ್ಳಲಿದ್ದು, ಇದೇ ಮೊದಲ ಬಾರಿಗೆ ಭಾರತದಿಂದ ಒಂದಕ್ಕಿಂತ ಹೆಚ್ಚಿನ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.
ಮುಕ್ತ (ಪುರುಷ) ವಿಭಾಗದಲ್ಲಿ ಆರ್.ಪ್ರಜ್ಞಾನಂದ, ಡಿ.ಗುಕೇಶ್, ವಿದಿತ್ ಗುಜರಾತಿ ಸ್ಪರ್ಧಿಸಲಿದ್ದು, ಮಹಿಳಾ ವಿಭಾಗದಲ್ಲಿ ಕೊನೆರು ಹಂಪಿ, ಆರ್.ವೈಶಾಲಿ ಆಡಲಿದ್ದಾರೆ. ಏ.22ರ ವರೆಗೂ ನಡೆಯಲಿರುವ ಟೂರ್ನಿಯಲ್ಲಿ ತಲಾ 8 ಪುರುಷ, ಮಹಿಳಾ ಚೆಸ್ ಪಟುಗಳು ಸ್ಪರ್ಧಿಸಲಿದ್ದಾರೆ. ಕಳೆದ ವರ್ಷ ನಡೆದ ವಿವಿಧ ಟೂರ್ನಿಗಳಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದ ಆಟಗಾರರಿಗೆ ಈ ಟೂರ್ನಿಯಲ್ಲಿ ಆಡಲು ಅರ್ಹತೆ ಸಿಕ್ಕಿದೆ.
IPL 2024 : ಮಯಾಂಕ್ ಯಾದವ್ ವೇಗಕ್ಕೆ ತತ್ತರಿಸಿದ ಆರ್‌ಸಿಬಿಗೆ 28 ರನ್ ಸೋಲು
ಪ್ರತಿ ಆಟಗಾರ, ಆಟಗಾರ್ತಿ ಇನ್ನುಳಿದ 7 ಮಂದಿಯ ವಿರುದ್ಧ ತಲಾ 2 ಬಾರಿ ಆಡಲಿದ್ದು, 14 ಸುತ್ತುಗಳ ಮುಕ್ತಾಯಕ್ಕೆ ಅಗ್ರಸ್ಥಾನ ಗಳಿಸುವವರಿಗೆ ವಿಶ್ವ ಚಾಂಪಿಯನ್‌ಶಿಪ್ ಪಂದ್ಯಕ್ಕೆ ಅರ್ಹತೆ ಸಿಗಲಿದೆ.
1950ರಲ್ಲಿ ಆರಂಭಗೊಂಡ ಈ ಟೂರ್ನಿಯಲ್ಲಿ 1991ರಿಂದ 2014 ನಡುವೆ ವಿಶ್ವನಾಥನ್ ಆನಂದ್ ಸ್ಪರ್ಧಿಸಿದ್ದರು. ಈ ಟೂರ್ನಿಯಲ್ಲಿ ಈ ವರೆಗೂ ಆಡಿರುವ ಏಕೈಕ ಭಾರತೀಯ ಆನಂದ್.
ವಿಶ್ವ ವೇಟ್‌ಲಿಫ್ಟಿಂಗ್ ಕಂಚು ಗೆದ್ದ ಬಿಂದ್ಯಾ
ಫುಕೆಟ್(ಥಾಯ್ಲೆಂಡ್): ಭಾರತದ ಬಿಂದ್ಯಾರಾಣಿ ದೇವಿ ಇಲ್ಲಿ ನಡೆಯುತ್ತಿರುವ ವೇಟ್‌ಲಿಫ್ಟಿಂಗ್ ವಿಶ್ವಕಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಒಲಿಂಪಿಕ್ ಸ್ಪರ್ಧೆಯಲ್ಲದ ಮಹಿಳೆಯರ 55 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ 25ರ ಬಿಂದ್ಯಾ, ಒಟ್ಟು 196 ಕೆ.ಜಿ. (ಸ್ನ್ಯಾಚ್‌ನಲ್ಲಿ 83 ಕೆ.ಜಿ. + ಕ್ಲೀನ್ ಅಂಡ್ ಜರ್ಕ್‌ನಲ್ಲಿ 113 ಕೆ.ಜಿ.) ಭಾರ ಎತ್ತಿ 3ನೇ ಸ್ಥಾನ ಪಡೆದರು. 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬಿಂದ್ಯಾ ಒಟ್ಟು 203 ಕೆ.ಜಿ. ಭಾರ ಎತ್ತಿ ಬೆಳ್ಳಿ ಗೆದ್ದಿದ್ದರು.
ಕೇವಲ 60 ನಿಮಿಷದಲ್ಲಿ ರಾಜ್ಯದ ಕ್ರಿಕೆಟಿಗ ಕೆ ಸಿ ಕಾರಿಯಪ್ಪಗೆ ವೀಸಾ ಮಂಜೂರು..!
ಭಾರತ ಪುರುಷರ ಹಾಕಿ ತಂಡ ಆಸ್ಟ್ರೇಲಿಯಾ ಪ್ರವಾಸ
ನವದೆಹಲಿ: ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುವ ಸಲುವಾಗಿ ಭಾರತ ಪುರುಷರ ಹಾಕಿ ತಂಡ ಸೋಮವಾರ ರಾತ್ರಿ ಆಸ್ಟ್ರೇಲಿಯಾಗೆ ಪ್ರಯಾಣಿಸಿದೆ. ಏ.6ರಿಂದ ಆಸ್ಟ್ರೇಲಿಯಾ ವಿರುದ್ಧ ಭಾರತ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇತ್ತೀಚೆಗೆ ಭಾರತ ತಂಡ ಉತ್ತಮ ಲಯದಲ್ಲಿದ್ದು, ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಆಡಿದ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿತ್ತು. 2ನೇ ಪಂದ್ಯ ಏ.7ರಂದು ನಡೆಯಲಿದ್ದು, ಏ.10, 12, 13ರಂದು ಕ್ರಮವಾಗಿ 3, 4 ಹಾಗೂ 5ನೇ ಪಂದ್ಯಗಳು ನಡೆಯಲಿವೆ.