ಎಬಿ ಡಿವಿಲಿಯರ್ಸ್ ವಿರುದ್ಧ ರೊಚ್ಚಿಗೆದ್ದ ಭಾರತೀಯರು!

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 19, Jul 2018, 9:48 PM IST
Fans lash out at AB de Villiers for promoting wine brand with the Indian flag
Highlights

ಸೌತ್ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ಗೆ ಭಾರತದಲ್ಲಿ ಅತೀ ಹೆಚ್ಚು ಅಭಿಮಾನಿಗಳಿದ್ದಾರೆ. ಆದರೆ ಈ ಬಾರಿ ಎಬಿಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಎಬಿಡಿ ವಿರುದ್ಧ ಭಾರತೀಯರು ತಿರುಗಿ ಬಿದ್ದಿದ್ದೇಕೆ? ಇಲ್ಲಿದೆ ವಿವರ.

ಪ್ರೆಟೋರಿಯಾ(ಜು.19): ಸೌತ್ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಭಾರತದಲ್ಲಿ ಜನಪ್ರೀಯ ಕ್ರಿಕೆಟಿಗ. ಡಿವಿಲಿಯರ್ಸ್ ಬ್ಯಾಟಿಂಗ್, ವ್ಯಕ್ತಿತ್ವಕ್ಕೆ ಭಾರತೀಯರು ಮನಸೋತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿರೋ ಎಬಿಡಿ, ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಎಬಿಡಿ ವಿರುದ್ಧ ಭಾರತೀಯ ಅಭಿಮಾನಿಗಳು ಯಾವುತ್ತು ತಿರುಗಿ ಬಿದ್ದಿಲ್ಲ. ಐಪಿಎಲ್ ಟೂರ್ನಿಯಲ್ಲಿ ಎಬಿಡಿ ವೈಫಲ್ಯ ಅನುಭವಿಸಿದ್ದರೂ, ಯಾವತ್ತೂ ಟೀಕಿಸಿದವರಲ್ಲ. ಆದರೆ ಇದೇ ಮೊದಲ ಬಾರಿಗೆ ಎಬಿ ಡಿವಿಲಿಯರ್ಸ್ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಎಬಿ ಡಿವಿಲಿಯರ್ಸ್ ವಿರುದ್ಧ ಭಾರತೀಯರು ತಿರುಗಿ ಬೀಳಲು ಕಾರಣವೂ ಇದೆ. ಸೌತ್ಆಫ್ರಿಕಾದ ಜನಪ್ರೀಯ ವೈನ್ ಇದೀಗ ಭಾರತದ ಮಾರಕಟ್ಟೆಯಲ್ಲಿ ಲಭ್ಯವಿದೆ. ಇದರ ಜಾಹೀರಾತಿನ ಭಾಗವಾಗಿ ಎಬಿಡಿ, ಇನ್‌ಸ್ಟಾಗ್ರಾಂ ಪೋಸ್ಟ್ ಮಾಡಿದ್ದಾರೆ. 

 

 

ಈ ಪೋಸ್ಟ್‌ನಲ್ಲ ನಮ್ಮ ವೈನ್ ಇದೀಗ ದೆಹಲಿಯಲ್ಲಿ ಲಭ್ಯವಿದೆ ಎಂದು ಬರೆದಿರುವ ಎಬಿಡಿ ಪಕ್ಕದಲ್ಲೇ ಭಾರತದ ಧ್ವಜ ಬಳಸಿದ್ದಾರೆ. ಎಬಿಡಿ ಈ ಪೋಸ್ಟ್‌ಗೆ ಭಾರತೀಯರು ಟೀಕಿಸಿದ್ದಾರೆ. ವೈನ್ ಜೊತೆ ಭಾರತದ ಧ್ವಜ ಬಳಕೆ ಮಾಡಿರೋದು ಸರಿಯಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.

loader