ಶೇನ್ ವಾಟ್ಸನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಚೆನ್ನೈ ಸೂಪರ್'ಕಿಂಗ್ಸ್ ಭರ್ಜರಿಯಾಗಿ ರಾಜಸ್ಥಾನ ರಾಯಲ್ಸ್ ವಿರುದ್ಧ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ನಾಯಕ ಧೋನಿ ಬ್ಯಾಟಿಂಗ್'ನಲ್ಲಿ ಅಷ್ಟೇನು ಉತ್ತಮ ಆಟವಾಡಲಿಲ್ಲ. ಆದರೂ ಧೋನಿ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.

ಹೌದು, ಸುರೇಶ್ ರೈನಾ ಔಟ್ ಆದ ಬಳಿಕ ಧೋನಿ ಕ್ರೀಸ್'ಗಿಳಿಯುತ್ತಿದ್ದಂತೆ ಅಭಿಮಾನಿಯೊಬ್ಬ ಧೋನಿ ಕಾಲಿಗೆ ಬಿದ್ದು ನಮಸ್ಕರಿಸುತ್ತಾನೆ. ಜೊತೆಗೆ ಕೆಲ ಮಾತುಗಳನ್ನು ಆಡುತ್ತಾನೆ. ಆ ಸನ್ನಿವೇಶಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅಭಿಮಾನಿಗಳು ಧೋನಿ ಕಾಲಿಗೆ ನಮಸ್ಕರಿಸುವುದು ಇದೇ ಮೊದಲೇನಲ್ಲ. ಈ ಮೊದಲು ಕಳೆದ ವರ್ಷ ಡಿಸೆಂಬರ್'ನಲ್ಲಿ ಭಾರತ-ಶ್ರೀಲಂಕಾ ನಡುವೆ ನಡೆದ ಪಂದ್ಯದಲ್ಲಿ ಹಾಗೆಯೇ ವಿಜಯ್ ಹಜಾರೆ ಟೂರ್ನಿಯಲ್ಲೂ ಅಭಿಮಾನಿಗಳು ಧೋನಿ ಪಾದ ಮುಟ್ಟಿ ನಮಸ್ಕರಿಸಿದ್ದು ಸಾಕಷ್ಟು ಸುದ್ದಿಯಾಗಿತ್ತು.

 

Meanwhile in Mohali #TeamIndia #INDvSL

A post shared by Team India (@indiancricketteam) on Dec 13, 2017 at 4:38am PST