Asianet Suvarna News Asianet Suvarna News

ಶಿವಮೊಗ್ಗದಲ್ಲೇ ನೋಡಿ ಐಪಿಎಲ್ ಮ್ಯಾಚ್- ಅಭಿಮಾನಿಗಳಿಗೆ ಬಿಸಿಸಿಐ ಗಿಫ್ಟ್!

ಶಿವಮೊಗ್ಗ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್.  ಇದೀಗ ಐಪಿಎಲ್ ಕ್ರಿಕೆಟ್ ಶಿವಮೊಗ್ಗಕ್ಕೆ ಕಾಲಿಡುತ್ತಿದೆ. ಎಪ್ರಿಲ್ 13 ಹಾಗೂ 14 ರ ಪಂದ್ಯ ನೋಡಲು ಕಾತರರಾಗಿರುವ ಅಭಿಮಾನಿಗಳಿಗೆ ಬಿಸಿಸಿಐ ಭರ್ಜರಿ ಗಿಫ್ಟ್ ನೀಡಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

Fan parks KSCA Shivamogga will screen live match IPL 2019
Author
Bengaluru, First Published Apr 13, 2019, 2:43 PM IST

ಶಿವಮೊಗ್ಗ(ಏ.13): ನವಲೆ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ವಿವೋ ಐಪಿಎಲ್‌ ಫ್ಯಾನ್‌ ಪಾರ್ಕ್ಸ್‌ನಲ್ಲಿ ಏ. 13 ಮತ್ತು 14ರಂದು ಐಪಿಎಲ್‌ನ ಪಂದ್ಯಾವಳಿಯನ್ನು ದೊಡ್ಡಪರದೆಯಲ್ಲಿ ನೋಡುವ ಅವಕಾಶ ಕಲ್ಪಿಸಲಾಗಿದೆ ಎಂದು ಶಿವಮೊಗ್ಗ ಕೆಎಸ್‌ಸಿಎ ಕ್ರೀಡಾಂಗಣದ ಸಂಚಾಲಕ ಸುಕುಮಾರ್‌ ಪಟೇಲ್‌ ತಿಳಿಸಿದರು.

ಇದನ್ನೂ ಓದಿ: CSK ಗೆಲುವಿನ ಬೆನ್ನಲ್ಲೇ ಧೋನಿಗೆ ಬಿತ್ತು ಬರೆ..!

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಎಲ್ಲಾ ಭಾಗಗಳಲ್ಲು ಐಪಿಎಲ್‌ ಉತ್ಸಾಹ ಹೆಚ್ಚಿಸಲು ಬಿಸಿಸಿಐ ನಿರಂತರ ಪ್ರಯತ್ನ ಮಾಡುತ್ತಿದೆ. ಇದರ ಸಲುವಾಗಿ 2015ರಲ್ಲಿ ಆರಂಭವಾದ ವಿವೋ ಐಪಿಎಲ್‌ ಫ್ಯಾನ್‌ ಪಾರ್ಕ್ಸ್‌ ಕ್ರೀಡಾಂಗಣ ಮಾದರಿಯ ವಾತಾವರಣವನ್ನು ಅಭಿಮಾನಿಗಳಿಗೆ ನೀಡಲಾಗುತ್ತಿದೆ ಎಂದರು.

ಪ್ರಸಕ್ತ ಋುತುವಿನಲ್ಲಿ ವಿವೋ ಐಪಿಎಲ್‌ ಫ್ಯಾನ್‌ ಪಾರ್ಕ್ಸ್‌ ತನ್ನ ಹೆಜ್ಜೆಯನ್ನು ಹೊಸ ಪ್ರದೇಶಗಳಿಗೆ ವಿಸ್ತರಿಸುತ್ತಿದ್ದು, 21ರಾಜ್ಯದ 36 ನಗರಗಳನ್ನು ಒಳಗೊಂಡಿದೆ. ಇದರಿಂದಾಗಿ ಸಮುದಾಯ ವೀಕ್ಷಣೆ ಮೂಲಕ ಸಾಮಾಜಿಕ ಬದಲಾವಣೆ ತರಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಏರ್‌ಪೋರ್ಟ್ ನೆಲದಲ್ಲೇ ಮಲಗಿದ ಧೋನಿ, ಸಾಕ್ಷಿ!

ವಾರಂತ್ಯದಲ್ಲಿ ಐಪಿಎಲ್‌ ಫ್ಯಾನ್‌ ಪಾರ್ಕ್ಸ್‌ ದೇಶದ ಧನ್ಭಾದ್‌, ಗುರ್ಗಾಂವ್‌ ಹಾಗೂ ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿದೆ. ಏ. 13 ರಂದು ಸಂಜೆ 4 ಗಂಟೆಗೆ ಮುಂಬೈ ಇಂಡಿಯನ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌, ರಾತ್ರಿ 8 ಗಂಟೆಗೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ರಾಯಲ್‌ ಚಾಲೆಂಜರ್ಸ್ ಬೆಂಗಳೂರು, ಏ. 14 ರಂದು ಸಂಜೆ 4 ಗಂಟೆಗೆ ಕೊಲ್ಕತ್ತಾ ನೈಟ್‌ ರೈಡ​ರ್ಸ್ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌,ರಾತ್ರಿ 8ಗಂಟೆಗೆ ಸನ್‌ರೈಸರ್ಸ್‌ ಹೈದರಬಾದ್‌ ಮತ್ತು ದೆಹಲಿ ಕ್ಯಾಪಿಟಲ್ಸ್‌ ತಂಡದ ನಡುವೆ ನಡೆಯುವ ಪಂದ್ಯವನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶವಿದ್ದು, ವೀಕ್ಷಿಸುವವರಿಗೆ ಉಚಿತ ಲಕ್ಕಿ ಡಿಪ್‌ಕೂಪನ್‌ ನೀಡಲಾಗುವುದು. ಪ್ರತಿ ಪಂದ್ಯದ ನಂತರ ಡ್ರಾ ನಡೆದು ವಿಜೇತರಿಗೆ ವಿವೋಕಂಪನಿಯ ಮೊಬೈಲ್‌ನ್ನು ಬಹುಮಾನವಾಗಿ ನೀಡಲಾಗುವುದು ಹಾಗೂ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಡಿಸಲಾಗುವುದು. ವಿಜೇತರಿಗೆ ಖ್ಯಾತ ಆಟಗಾರರ ಸಹಿವುಳ್ಳ ಟೀಶರ್ಟ್‌ ನೀಡಲಾಗುವುದು ಎಂದರು.

Follow Us:
Download App:
  • android
  • ios