ಲಂಡನ್[ಆ. 18]  ಇಂಗ್ಲೆಂಡ್ ಕ್ರಿಕೆಟ್​ ತಂಡದ ಮಹಿಳಾ ಆಟಗಾರ್ತಿ ಸಾರಾ ಟೇಲರ್​ ನಗ್ನ ಫೋಟೊವೊಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.  ಒಳ್ಳೆಯ ಬ್ಯಾಟ್ಸ್​​ ವುಮನ್​ ಹಾಗೂ ವಿಕೆಟ್​ ಕೀಪರ್​ ಆಗಿರುವ ಸಾರಾ ಕ್ರಿಕೆಟ್ ನಲ್ಲಿ ಸದಾ ಬ್ಯುಸಿ ಇರುತ್ತಾರೆ.

ಪ್ರಸ್ತುತ ಸಾರಾ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಲೀಗ್​ ಪಂದ್ಯಗಳಲ್ಲಿ ಸರ್ರೆ ಸ್ಟಾರ್ಸ್​ ತಂಡದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವಾರು  ಸವಾಲುಗಳನ್ನು ಎದುರಿಸಿ ಬಂದಿದ್ದೇನೆ ಎನ್ನುತ್ತ ನಗ್ನ ಪೋಟೋ ಶೂಟ್ ಮಾಡಿಸಿಕೊಂಡಿದ್ದಕ್ಕೆ ಕಾರಣ ನೀಡಿದ್ದಾರೆ.

ಬೆತ್ತಲೆಯಾಗಿ ಬೈಕ್‌ ಓಡಿ​ಸಿ​ದ ಯುವತಿ ವಿಡಿಯೋ ವೈರಲ್‌!

ನನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಖಿನ್ನತೆ ಬಗ್ಗೆ ಮಾತನಾಡಲು ವಿಚಾರ ಸಂಕಿರಣವೊಂದಕ್ಕೆ ನನ್ನನ್ನು ಆಹ್ವಾನಿಸಿದವರಿಗೂ ಧನ್ಯವಾದ ಸಲ್ಲಿಸುತ್ತೇನೆ. ನೆನಪಿಡಿ ಪ್ರತಿಯೊಬ್ಬ ಮಹಿಳೆಯೂ ಸುಂದರಿಯೇ! ಎಂದು ಬರೆದುಕೊಂಡಿದ್ದು ಖಿನ್ನತೆಯಿಂದ ಹೇಗೆ ಹೊರಬರಬೇಕು ಎಂಬುದಕ್ಕೆ ನಮ್ಮಲ್ಲಿ ನಾವು ತೊಡಗಬೇಕು ಎಂದು ಹೇಳಿದ್ದಾರೆ.