Asianet Suvarna News Asianet Suvarna News

ಸ್ಟಾರ್ ಕ್ರಿಕೆಟಿಗನಿಗೆ ಐಪಿಎಲ್ ಆಡದಂತೆ ನಿರ್ಬಂಧ

ಪ್ರತಿಷ್ಠಿತ ಐಪಿಎಲ್ ಟೂರ್ನಿ ಆಡಲು ಕ್ರಿಕೆಟಿಗರು ಮುಗಿ ಬೀಳುತ್ತಾರೆ. ಐಪಿಎಲ್ ಟೂರ್ನಿ ಆಡಿ ಅಂತಾರಾಷ್ಟ್ರೀಯ ಪಂದ್ಯಗಳ ಅವಕಾಶ ಪಡೆದವರಿದ್ದಾರೆ. ಆದರೆ ಸ್ಟಾರ್ ಕ್ರಿಕೆಟಿಗನಿಗೆ ಇದೀಗ ಐಪಿಎಲ್ ಟೂರ್ನಿ ಆಡದಂತೆ ನಿರ್ಬಂಧ ವಿಧಿಸಲಾಗಿದೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗ? ಇಲ್ಲಿದೆ ಸಂಪೂರ್ಣ ವಿವರ.

England cricket board restrict joe root to play IPL
Author
Bengaluru, First Published Aug 24, 2018, 7:34 PM IST

ಲಂಡನ್(ಆ.23): ಭಾರತ ಸೇರಿದಂತೆ ಇತರ ಯಾವುದೇ ದೇಶದ ಕ್ರಿಕೆಟಿಗನಿಗೆ ಪ್ರತಿಷ್ಠಿತ ಲೀಗ್ ಟೂರ್ನಿ ಐಪಿಎಲ್ ಆಡಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ತಮ್ಮ ಪ್ರತಿಭೆಗೆ ತಕ್ಕ ವೇದಿಕೆ, ಹಣ, ಹೆಸರು ಹೀಗೆ ಎಲ್ಲವೂ ಐಪಿಎಲ್‌ನಲ್ಲಿದೆ. ಹೀಗಾಗಿಯೇ ಐಪಿಎಲ್ ಆಡಲು ಆಟಗಾರರು ಮುಗಿಬೀಳುತ್ತಾರೆ.

ಹಲವರು ಐಪಿಎಲ್ ಆಡಲು ರೆಡಿಯಿದ್ದರು ಅವಕಾಶ ಸಿಗುವುದಿಲ್ಲ. ಆದರೆ ಇಂಗ್ಲೆಂಡ್ ನಾಯಕ ಜೋ ರೂಟ್ ಕತೆ ಸ್ವಲ್ಪ ವಿಭಿನ್ನ. ಜೋ ರೂಟ್ 2019ರ ಐಪಿಎಲ್ ಆಡೋ ಇಚ್ಚೆ ವ್ಯಕ್ತಪಡಿಸಿದ್ದರು. ಆದರೆ ರೂಟ್‌ಗೆ ಐಪಿಎಲ್ ಟೂರ್ನಿ ಆಡದಂತೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ನಿರ್ಬಂಧ ಹೇರಿದೆ.

2019ರ ಐಪಿಎಲ್ ಟೂರ್ನಿ ಬೆನ್ನಲ್ಲೇ ವಿಶ್ವಕಪ್ ಟೂರ್ನಿ ನಡೆಯಲಿದೆ. ಬಳಿಕ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಆಶ್ಯಸ್ ಟೂರ್ನಿ ಆರಂಭಗೊಳ್ಳಲಿದೆ. ಸತತ ಕ್ರಿಕೆಟ್‌ನಿಂದ ರೂಟ್ ಬಳಲಲಿದ್ದಾರೆ. ಹೀಗಾಗಿ ಐಪಿಎಲ್ ಟೂರ್ನಿ ಆಡದಂತೆ ನಿರ್ಬಂಧಿಸಲಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೇಳಿದ್ದಾರೆ.

ಜೋ ರೂಟ್‌ಗೆ ಐಪಿಎಲ್ ಆಡದಂತೆ ನಿರ್ಬಂಧ ವಿಧಿಸಿರೋ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಟೂರ್ನಿ ಆಡಲು ಅವಕಾಶ ನೀಡಿದೆ. ಸಿಡ್ನಿ ಥಂಡರ್ ಜೊತೆ  ರೂಟ್ ಒಪ್ಪಂದ ಮಾಡಿಕೊಂಡಿದ್ದಾರೆ.

Follow Us:
Download App:
  • android
  • ios