ಎಡ್ಜ್‌ಬಾಸ್ಟನ್ ಶತಕ ಕೊಹ್ಲಿ ಫೇವರಿಟ್ ಸೆಂಚುರಿಯಲ್ಲ!

First Published 3, Aug 2018, 3:41 PM IST
Edgbaston knock is not Virat Kohli favorite century
Highlights

ಇಂಗ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ಸಿಡಿಸಿದ ಸೆಂಚುರಿ ಇದೀಗ ಅತ್ಯುತ್ತಮ ಟೆಸ್ಟ್ ಶತಕ ಎಂದೇ ಬಿಂಬಿತವಾಗುತ್ತಿದೆ. ಆದರೆ ನಾಯಕ ವಿರಾಟ್ ಕೊಹ್ಲಿಗೆ ಈ ಸೆಂಚುರಿಗಿಂತ 2014ರಲ್ಲಿ ಸಿಡಿಸಿದ ಸೆಂಚುರಿಯೇ ಬೆಸ್ಟ್? ಹಾಗಾದರೆ ಕೊಹ್ಲಿ ಬೆಸ್ಟ್ ಶತಕ ಯಾವುದು? ಇಲ್ಲಿದೆ.

ಎಡ್ಜ್‌ಬಾಸ್ಟನ್(ಆ.03):ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಡಿಸಿದ ಸೆಂಚುರಿಗೆ ಇಡೀ ವಿಶ್ವವೇ ತಲೆಬಾಗಿದೆ. ಟೀಂ ಇಂಡಿಯಾದ ಎಲ್ಲಾ ಬ್ಯಾಟ್ಸ್‌ಮನ್‌ಗಳು ನಮ್ಮಿಂದ ಸಾಧ್ಯವಿಲ್ಲ ಎಂದು ಪೆವಿಲಿಯನ್ ಸೇರಿದ್ದರು. ಆದರೆ ಕೊಹ್ಲಿ ಮಾತ್ರ ಏಕಾಂಗಿಯಾಗಿ ಹೋರಾಟ ನೀಡಿ ಸೆಂಚುರಿ ಬಾರಿಸಿದ್ದರು.

ವಿರಾಟ್ ಕೊಹ್ಲಿ ಶತಕದಿಂದ ಟೀಂ ಇಂಡಿಯಾ ಭಾರಿ ಹಿನ್ನಡೆಯನ್ನ ತಪ್ಪಿಸಿಕೊಂಡಿತು. ಇಷ್ಟೇ ಅಲ್ಲ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿತು. 9 ವಿಕೆಟ್ ಕಳೆದುಕೊಂಡರೂ, ಕೆಚ್ಚೆದೆಯ ಹೋರಾಟ ನೀಡಿದ ವಿರಾಟ್ 149 ರನ್ ಸಿಡಿಸಿದ್ದರು. ಇದು ವಿರಾಟ್ ಕೊಹ್ಲಿಯಿಂದ ಮೂಡಿ ಬಂದ ಅತ್ಯುತ್ತಮ ಇನ್ನಿಂಗ್ಸ್ ಎಂದು ಹಾಲಿ, ಮಾಜಿ ಕ್ರಿಕೆಟಿಗರು , ಅಭಿಮಾನಿಗಳು ಹೇಳಿದ್ದಾರೆ.  

ಇಡೀ ವಿಶ್ವವೇ ಕೊಹ್ಲಿಯ ಎಡ್ಜ್‌ಬಾಸ್ಟನ್ ಶತಕ ಬೆಸ್ಟ್ ಎಂದಿದ್ದರೆ, ಸ್ವತಃ ವಿರಾಟ್ ಕೊಹ್ಲಿಗೆ ಮಾತ್ರ ಇದು ಎರಡನೇ ಬೆಸ್ಟ್ ಶತಕ. ಕೊಹ್ಲಿಯ ಬೆಸ್ಟ್ ಶತಕ 2014ರಲ್ಲಿ ಆಡಿಲೇಡ್‌ನಲ್ಲಿ ಸಿಡಿಸಿದ 141 ರನ್ ಕೊಹ್ಲಿಯ ಬೆಸ್ಟ್ ಇನ್ನಿಂಗ್ಸ್.

 

 

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 364 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ, ಪಂದ್ಯವನ್ನ ಗೆಲ್ಲಲೇಬೇಕೆಂಬ ಛಲದಲ್ಲಿ ಹೋರಾಡಿತ್ತು. ಆದರೆ ಮುರಳಿ ವಿಜಯ್ 99 ರನ್ ಕಾಣಿಕೆ ಹೊರತು ಪಡಿಸಿದರೆ, ತಂಡಕ್ಕೆ ಆಸರೆಯಾಗಿದ್ದ ವಿರಾಟ್ ಕೊಹ್ಲಿ. ಒಂದೆಡೆ ವಿಕೆಟ್ ಬೀಳುತ್ತಿದ್ದರೂ, ಕೊಹ್ಲಿ ಮಾತ್ರ ಗೆಲುವಿಗಾಗಿ ಹೋರಾಟ ಮಾಡಿದರು. ಎಲ್ಲೂ ಕೂಡ ಡ್ರಾ ಮಾಡಿಕೊಳ್ಳೋ ಯೋಚನೆಗೂ ಕೊಹ್ಲಿ ಯತ್ನಿಸಲಿಲ್ಲ.  ಕೊಹ್ಲಿ ವಿಕೆಟ್ ಪತನದಿಂದ ಈ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಈ ಇನ್ನಿಂಗ್ಸ್ ಕೊಹ್ಲಿಯ ಫೇವರಿಟ್ ಇನ್ನಿಂಗ್ಸ್ ಎಂದು ಬಿಸಿಸಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 
ಇದನ್ನು ಓದಿ: ಸಂಭ್ರಮಾಚರಣೆಯಲ್ಲಿ ಕಾಂಬ್ಳಿ ನೆನಪಿಸಿದ ವಿರಾಟ್ ಕೊಹ್ಲಿ

ಇದನ್ನು ಓದಿ: ವಿರಾಟ್ ಕೊಹ್ಲಿ ಸೆಂಚುರಿಗೆ ಶೋಯಿಬ್ ಅಕ್ತರ್ ಕ್ಲೀನ್ ಬೋಲ್ಡ್!

loader