ಕೊಹ್ಲಿ ಕಟ್ಟಿಹಾಕಲು ಮಾಸ್ಟರ್ ಪ್ಲಾನ್ ಮಾಡಿದ ಇಂಗ್ಲೆಂಡ್!

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 19, Jul 2018, 3:08 PM IST
ECB wants to include a retired player in the Test squad to tackle Virat Kohli
Highlights

ಏಕದಿನ ಸರಣಿ ಗೆದ್ದಿರುವ ಇಂಗ್ಲೆಂಡ್ ತಂಡಕ್ಕೆ ಇದೀಗ ಟೆಸ್ಟ್ ಸರಣಿ ಚಿಂತೆ ಶುರುವಾಗಿದೆ. ನಾಯಕ ವಿರಾಟ್ ಕೊಹ್ಲಿಯನ್ನ ಕಟ್ಟಿಹಾಕೋದು ಆಂಗ್ಲರಿಗೆ ತಲೆನೋವಿನ ವಿಚಾರ. ಹೀಗಾಗಿ ಇದೀಗ ಕೊಹ್ಲಿಯನ್ನ ಕಟ್ಟಿಹಾಕಲು ಮಾಜಿ ಕ್ರಿಕೆಟಿಗನನ್ನ ಇಂಗ್ಲೆಂಡ್ ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದೆ. ಆತ ಯಾರು? ಇಲ್ಲಿದೆ ವಿವರ.

ಲಂಡನ್(ಜು.19): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಎದುರಾಳಿಗಳ ಲೆಕ್ಕಾಚಾರವನ್ನೇ ಬಡುಮೇಲು ಮಾಡಬಲ್ಲ ಕ್ರಿಕೆಟಿಗ. ಪ್ರತಿ ಪಂದ್ಯದಲ್ಲಿ ಕೊಹ್ಲಿ ಸ್ಥಿರ ಪ್ರದರ್ಶನ ನೀಡೋ ಮೂಲಕ ಇದೀಗ ಇಂಗ್ಲೆಂಡ್ ತಂಡದ ಚಿಂತೆಗೆ ಕಾರಣವಾಗಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ಸರಣಿಯಲ್ಲಿ ಕೊಹ್ಲಿ, 75, 41, ಹಾಗೂ 71 ರನ್ ಸಿಡಿಸೋ ಮೂಲಕ 191 ರನ್ ದಾಖಲಿಸಿದ್ದಾರೆ. ಹೀಗಾಗಿ ಕೊಹ್ಲಿ ಫಾರ್ಮ್ ಮುಂಬರುವ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡೋದರಲ್ಲಿ ಯಾವುದೇ ಅನುಮಾನವಿಲ್ಲ.

ಕೊಹ್ಲಿ ಅಪಾಯವನ್ನ ಮನಗಂಡಿರುವ ಇಂಗ್ಲೆಂಡ್ ತಂಡ ಇದೀಗ ಮಾಜಿ ಕ್ರಿಕೆಟಿಗನನ್ನ ತಂಡಕ್ಕೆ ಸೇರಿಸಿಕೊಳ್ಳೋ ಚಿಂತನೆಯಲ್ಲಿದೆ. ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಇಂಗ್ಲೆಂಡ್‌ನ ಆದಿಲ್ ರಶೀದ್‌ಗೆ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಲು ಆಯ್ಕೆ ಸಮಿತಿ ಚಿಂತನೆ ನಡೆಸಿದೆ.

ಏಕದಿನದ 2 ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಆದಿಲ್ ರಶೀದ್ ಸ್ಪಿನ್ ಮೋಡಿಗೆ ಬಲಿಯಾಗಿದ್ದಾರೆ. ಇಷ್ಟೇ ಅಲ್ಲ, ಟೀಂ ಇಂಡಿಯಾದ ಇತರ ಬ್ಯಾಟ್ಸ್‌ಮನ್‌ಗಳು ಕೂಡ ಆದಿಲ್ ರಶೀದ್ ಎದುರಿಸಲು ಪರದಾಡಿದ್ದಾರೆ. ಹೀಗಾಗಿ ಈಗಾಗಲೇ ಟೆಸ್ಟ್ ಮಾದರಿಯಿಂದ ನಿವೃತ್ತಿ ಪಡೆದಿರುವ ಆದಿಲ್ ರಶೀದ್‌ಗೆ ಸ್ಥಾನ ನೀಡಲು ಇಂಗ್ಲೆಂಡ್ ಗಂಭೀರ ಚಿಂತನೆ ನಡೆಸಿದೆ.

ಇಂಗ್ಲೆಂಡ್ ಪರ 10 ಟೆಸ್ಟ್ ಪಂದ್ಯ ಆಡಿರುವ ರಶೀದ್ 38 ವಿಕೆಟ್ ಕಬಳಿಸಿದ್ದಾರೆ. ಬಳಿಕ ನಿಗಧಿತ ಓವರ್ ಹಾಗೂ ದೇಶಿಯ ಟೂರ್ನಿಗಳಲ್ಲಿ ಸಕ್ರೀಯರಾಗಿದ್ದಾರೆ. ಏಕದಿನ ಕ್ರಿಕೆಟ್ ಸರಣಿಯ ಅದ್ಬುತ ಪ್ರದರ್ಶನದಿಂದ ರಶೀದ್ ಮತ್ತೆ ಟೆಸ್ಟ್ ಪಂದ್ಯಕ್ಕೆ ಮರಳೋ ಸಾಧ್ಯತೆ ಇದೆ. 
 

loader