ದಿಂಡುಗಲ್(ಸೆ.04): ವಿಕೆಟ್ ಕೀಪಿಂಗ್‍‌ನಲ್ಲಿ ಎಂ ಎಸ್ ಧೋನಿ ಚುರುಕುತನ ವಿಶ್ವದ ಇತರ ಯಾವುದೇ ವಿಕೆಟ್ ಕೀಪರ್‌ಗಿಲ್ಲ. ಹೀಗಾಗಿಯೇ ಧೋನಿ ಕೀಪಿಂಗ್ ಮಾಡುತ್ತಿದ್ದರೆ, ಬ್ಯಾಟ್ಸ್‌ಮನ್ ಕ್ರೀಸ್ ಬಿಟ್ಟು ಅಲುಗಾಡಲ್ಲ. ಧೋನಿಗೆ ಸ್ಟಂಪ್ ಔಟ್ ಮಾಡಲು ಸೆಕುಂಡ್‌ಗಳು ಬೇಕಿಲ್ಲ.

ರನೌಟ್ ಸಂದರ್ಭದಲ್ಲೂ ಧೋನಿ ವಿಶೇಷ ಕೌಶಲ್ಯದಿಂದ ಬ್ಯಾಟ್ಸ್‌ಮನ್‌ಗಳನ್ನ ರನೌಟ್ ಮಾಡಿ ಗಮನಸೆಳೆದಿದ್ದಾರೆ. ಫೀಲ್ಡರ್ ಎಸೆದ ಚೆಂಡನ್ನ ನೇರವಾಗಿ ವಿಕೆಟ್‌ಗೆ ತಳ್ಳಿ ರನೌಟ್ ಮಾಡಿದ ಊದಾಹರಣೆಗಳು ಸಾಕಷ್ಟಿವೆ.

ಎಂ ಎಸ್ ಧೋನಿ ರೀತಿಯಲ್ಲೇ ಇದೀಗ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ರನೌಟ್ ಮಾಡಲು ಮುಂದಾಗಿದ್ದಾರೆ. ಧೋನಿ ವಿಕೆಟ್ ಕೀಪಿಂಗ್ ಕೌಶಲ್ಯವನ್ನ ಇಶಾನ್ ಕಿಶನ್ ಅನುಕರಿಸಿದ್ದಾರೆ. ಆದರೆ ಅಷ್ಟರೊಳಗೆ ಬ್ಯಾಟ್ಸ್‌ಮನ್ ಕ್ರೀಸ್ ಮುಟ್ಟಿದ್ದರು. 

 

 

ದುಲೀಪ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್ ಧೋನಿ ಶೈಲಿ ಅನುಕರಿಸಿದ್ದಾರೆ. ಈ ಮೂಲಕ ಧೋನಿ ಕೀಪಿಂಗ್ ಶೈಲಿಯನ್ನ ನೆನಪಿಸಿದ್ದಾರೆ.