ಪ್ಯಾರಿಸ್ ಒಲಿಂಪಿಕ್ಸ್ ಡಬಲ್ ಪದಕ ವಿಜೇತೆ ಮನು ಭಾಕರ್ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದಿದ್ದ ಭಾರತದ ತಾರಾ ಶೂಟರ್ ಮನು ಭಾಕರ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಶನಿವಾರ ತಮ್ಮ 'ಎಕ್ಸ್' ಖಾತೆಯಲ್ಲಿ 'ನಾನು ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಅರ್ಹಳೇ? ನೀವೇ ಹೇಳಿ' ಎಂದು ಟ್ವಿಟ್ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಈ ಟ್ವಿಟ್ ವೈರಲ್ ಆಗಿದೆ.
ಕೆಲವರು ಮನು ಭಾಕರ್ ಎಕ್ಸ್ ಖಾತೆ ಹ್ಯಾಕ್ ಆಗಿದೆ ಎಂದು ಹೇಳಿದ್ದರೆ, ಇನ್ನೂ ಕೆಲವರು ಇದು ಮನು ಅವರ ಖಾತೆ ನಿರ್ವಾಹಕರು ಮಾಡಿದ ಟ್ವಿಟ್ ಎಂದು ವಾದಿಸಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದ್ದಂತೆಯೇ ಮನು ಅವರ ಖಾತೆಯಿಂದ ಟ್ವಿಟ್ ಅಳಿಸಿ ಹಾಕಲಾಗಿದೆ. ಇತ್ತೀಚೆಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಮಹಿಳೆಯರ 10 ಮೀ. ಏರ್‌ಪಿಸ್ತೂಲ್ ವೈಯಕ್ತಿಕ ಹಾಗೂ ಮಿಶ್ರ ತಂಡ ವಿಭಾಗಳಲ್ಲಿ ಕಂಚಿನ ಪದಕ ಗೆದ್ದಿದ್ದರು.
ಭಾರತದ ಬಾಸ್ಕೆಟ್‌ಬಾಲ್ ಆಟಗಾರರಿಗಿನ್ನು ತಿಂಗಳಿಗೆ ₹75 ಸಾವಿರ ಸಂಭಾವನೆ!
ನವದೆಹಲಿ: ದೇಶದಲ್ಲಿ ಬಾಸ್ಕೆಟ್‌ಬಾಲ್ ಉತ್ತೇಜನಕ್ಕೆ ಭಾರತೀಯ ಬಾಸ್ಕೆಟ್‌ಬಾಲ್ ಸಂಸ್ಥೆ(ಬಿಎಫ್‌ಐ) ಮಹತ್ವದ ಹೆಜ್ಜೆ ಇಟ್ಟಿದ್ದು, ಇನ್ನು ಮುಂದೆ ಪ್ರತಿ ತಿಂಗಳು ‘ಎ’ ವಿಭಾಗದ ಆಟಗಾರರಿಗೆ ತಲಾ ₹75 ಸಾವಿರ ಸಂಭಾವನೆ ನೀಡಲು ನಿರ್ಧರಿಸಿದೆ.
ಕಳೆದ 4 ವರ್ಷಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ತಲಾ 20 ಮಂದಿಗೆ ಬಿಎಫ್‌ಐ ಸಂಭಾವನೆ ನೀಡಲಿದೆ. ಸದ್ಯ ‘ಎ’ ವಿಭಾಗದ ಆಟಗಾರರಿಗೆ ಸಂಭಾವನೆ ನೀಡಲು ನಿರ್ಧರಿಸಲಾಗಿದ್ದು, ಮುಂದೆ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಅವರನ್ನು ‘ಎ’, ‘ಬಿ’, ‘ಸಿ’ ವಿಭಾಗಗಳನ್ನಾಗಿ ವಿಂಗಡಿಸಲು ಸಮಿತಿ ರಚಿಸಲಾಗಿದೆ.
ಆಸೀಸ್ ಸರಣಿ ಮುನ್ನ ಟೀಂ ಇಂಡಿಯಾಗೆ ಎಚ್ಚರಿಕೆಯ ಕರೆಗಂಟೆ: ಒತ್ತಡದಲ್ಲಿ ಭಾರತದ ಪ್ರಮುಖ ಬ್ಯಾಟರ್ಸ್
ಶನಿವಾರ ಬಿಎಫ್‌ಐ ಪ್ರಕಟಿಸಿರುವ ಪಟ್ಟಿಯಲ್ಲಿ ಕರ್ನಾಟಕ ಇಬ್ಬರು ಆಟಗಾರರಿದ್ದಾರೆ. ಪುರುಷರ ವಿಭಾಗದಲ್ಲಿ ಪ್ರತ್ಯಾನ್ಶು ಥೋಮರ್, ಮಹಿಳಾ ವಿಭಾಗದಲ್ಲಿ ಸಂಜನಾ ರಮೇಶ್ ಸಂಭಾವನೆ ಪಡೆಯಲಿದ್ದಾರೆ.
ಜೋಹರ್ ಕಪ್ ಹಾಕಿ: ಭಾರತಕ್ಕೆ ಕಂಚಿನ ಪದಕ
ಜೋಹರ್ ಬಹು (ಮಲೇಷ್ಯಾ): ಸುಲ್ತಾನ್ ಆಫ್ ಜೋಹರ್ ಕಪ್ ಕಿರಿಯರ ಹಾಕಿ ಟೂರ್ನಿಯಲ್ಲಿ ಭಾರತ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಶನಿವಾರ 3 ಮತ್ತು 4ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಶೂಟೌಟ್‌ನಲ್ಲಿ 3 -2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.
ನಿಗದಿತ ಅವಧಿ ಮುಕ್ತಾಯಕ್ಕೆ ಇತ್ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿದವು. ಬಳಿಕ ಫಲಿತಾಂಶ ನಿರ್ಧರಿಸಲು ಶೂಟೌಟ್ ಮೊರೆ ಹೋಗಲಾಯಿತು. 2013, 2014 ಹಾಗೂ 2022ರ ಚಾಂಪಿಯನ್ ಭಾರತ, ಸತತ 2ನೇ ಬಾರಿ ಕಂಚು ತನ್ನದಾಗಿಸಿಕೊಂಡಿತು. ಭಾರತ 4 ಬಾರಿ ರನ್ನರ್-ಅಪ್ ಆಗಿದೆ. ಇನ್ನು, ಶನಿವಾರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 3-2ರಲ್ಲಿ ಗೆದ್ದ ಗ್ರೇಟ್ ಬ್ರಿಟನ್ ಚಾಂಪಿಯನ್ ಆಗಿ ಹೊರಹೊಮ್ಮಿತು.
