ಕೂಲ್ ಧೋನಿ ಮುಂದೆ ಬ್ರಾವೋ ಹಾಟ್ ಡ್ಯಾನ್ಸ್

First Published 24, May 2018, 11:06 AM IST
Dhoni Gets Dance Tribute From Dwayne Bravo
Highlights

ಪ್ರಸಕ್ತ ಐಪಿಎಲ್ 2018 ಟೂರ್ನಿಯಲ್ಲಿ ಎಂ.ಎಸ್. ಧೋನಿ ನೇತೃತ್ವದ ಚೆನೈ ಸೂಪರ್ ಕಿಂಗ್ಸ್ ಫೈನಲ್ ತಲುಪಿದೆ. ಹೀಗಾಗಿ ತಂಡದ ಆಟಗಾರರು ತುಂಬ ಖುಷಿಯಲ್ಲಿದ್ದಾರೆ. ಅದರಂತೆ ಎಸ್ ಆರ್ ಹೆಚ್ ತಂಡದ ವಿರುದ್ದ ಗೆಲುವು ಸಾಧಿಸಿದ ನಂತರ ಆಟಗಾರರೆಲ್ಲಾ ಸಖತ್ ಜಾಲಿ ಮೂಡ್ ನಲ್ಲಿದ್ದರು.

ಅದರಂತೆ ಡಿಜೆ ಬ್ರಾವೋ ಖ್ಯಾತಿಯ ಡ್ವೇನ್ ಬ್ರಾವೋ ಪಂದ್ಯದ ಬಳಿಕ, ಡ್ರೆಸ್ಸಿಂಗ್ ರೂಂನಲ್ಲಿ ಧೋನಿ ಮುಂದೆ ಡ್ಯಾನ್ಸ್ ಮಾಡಿರುವುದು ವೈರಲ್ ಆಗಿದೆ. ಸಿಎಸ್ ಕೆ ತಂಡದ ಅಧಿಕೃತ ಟ್ವಿಟರ್ ನಲ್ಲಿ ಬ್ರಾವೋ ಅವರು ಧೋನಿ ಮುಂದೆ ಸ್ಟೆಪ್ಸ್ ಹಾಕುತ್ತಿರುವ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಸಹ ಆಟಗಾರರಾದ ಹರ್ಭಜನ್ ಸಿಂಗ್ ಮತ್ತು ರವೀಂದ್ರ ಜಡೇಜಾ ಕೂಡ ಇದ್ದಾರೆ.

ಬ್ರಾವೋ ಅವರ ಈ ವಿಶೇಷ ಡ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ನಾಳೆ ಕೆಕೆಆರ್ ಮತ್ತು ಎಸ್ ಆರ್ ಹೆಚ್ ನಡುವಿನ ಕ್ವಾಲಿಫೈಯರ್ ಪಂದ್ಯದ ಬಳಿಕ, ಗೆದ್ದ ತಂಡದೊಂದಿಗೆ ಸಿಎಸ್ ಕೆ ಫೈನಲ್ ಆಡಲಿದೆ.  

loader