Asianet Suvarna News Asianet Suvarna News

ದೇವೇಂದ್ರ ಝಝಾರಿಯಾ ಭಾರತ ಪ್ಯಾರಾಲಿಂಪಿಕ್‌ ಸಮಿತಿಯ ನೂತನ ಅಧ್ಯಕ್ಷ

ಪ್ಯಾರಾಲಿಂಪಿಕ್ಸ್‌ ಪದಕ ವಿಜೇತೆ ದೀಪಾ ಮಲಿಕ್‌ ಅಧ್ಯಕ್ಷೆಯಾಗಿ ತಮ್ಮ ಅವಧಿ ಮುಕ್ತಾಯಗೊಳಿಸಿದ ಬಳಿಕ ಚುನಾವಣೆ ಘೋಷಣೆಯಾಗಿತ್ತು. ಆದರೆ ದೇವೇಂದ್ರ ವಿರುದ್ಧ ಯಾರೂ ಸ್ಪರ್ಧೆ ಮಾಡದ ಹಿನ್ನೆಲೆಯಲ್ಲಿ ಅವರು ಸೇರಿ ಎಲ್ಲಾ ಹುದ್ದೆಗಳಿಗೂ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು

Devendra Jhajharia elected unopposed as PCI president kvn
Author
First Published Mar 10, 2024, 12:18 PM IST

ನವದೆಹಲಿ: 2 ಬಾರಿ ಪ್ಯಾರಾಲಿಂಪಿಕ್ಸ್‌ ಚಿನ್ನ ವಿಜೇತ ಜಾವೆಲಿನ್‌ ಥ್ರೋ ಪಟು ದೇವೇಂದ್ರ ಝಝಾರಿಯಾ ಭಾನುವಾರ ಭಾರತ ಪ್ಯಾರಾಲಿಂಪಿಕ್‌ ಸಮಿತಿ (ಪಿಸಿಐ)ನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಪ್ಯಾರಾಲಿಂಪಿಕ್ಸ್‌ ಪದಕ ವಿಜೇತೆ ದೀಪಾ ಮಲಿಕ್‌ ಅಧ್ಯಕ್ಷೆಯಾಗಿ ತಮ್ಮ ಅವಧಿ ಮುಕ್ತಾಯಗೊಳಿಸಿದ ಬಳಿಕ ಚುನಾವಣೆ ಘೋಷಣೆಯಾಗಿತ್ತು. ಆದರೆ ದೇವೇಂದ್ರ ವಿರುದ್ಧ ಯಾರೂ ಸ್ಪರ್ಧೆ ಮಾಡದ ಹಿನ್ನೆಲೆಯಲ್ಲಿ ಅವರು ಸೇರಿ ಎಲ್ಲಾ ಹುದ್ದೆಗಳಿಗೂ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. ದೇವೇಂದ್ರ 2004ರ ಅಥೆನ್ಸ್‌, 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ, 2021ರ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು. ದೇವೇಂದ್ರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದ ಚುರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ಹಾಲು ಬಿಳುಪಿನ ಬೆಡಗಿ ಸಾರಾ ತೆಂಡುಲ್ಕರ್, ಕ್ರಿಕೆಟ್ ದೇವರ ಮಗಳ ಸೌಂದರ್ಯಕ್ಕೆ ಬೆರಗಾದ ಫ್ಯಾನ್ಸ್‌!

ಫ್ರೆಂಚ್‌ ಓಪನ್‌: ಭಾರತದ ಗಾಯತ್ರಿ-ತ್ರೀಸಾಗೆ ಸೋಲು

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಮಹಿಳಾ ಡಬಲ್ಸ್ ಜೋಡಿ ಗಾಯತ್ರಿ ಗೋಪಿಚಂದ್‌-ತ್ರೀಸಾ ಜಾಲಿ ಅಭಿಯಾನ ಕೊನೆಗೊಂಡಿದೆ. ಶುಕ್ರವಾರ ರಾತ್ರಿ ನಡೆದ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.1, ಚೀನಾದ ಚೆನ್‌ ಕಿಂಗ್‌ ಚೆನ್‌-ಜಿಯಾ ಯಿ ಫಾನ್‌ ವಿರುದ್ಧ 18-21, 7-21 ಅಂತರದಲ್ಲಿ ಸೋಲನುಭವಿಸಿದರು. ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌ ಸೆಮಿಫೈನಲ್‌ ಪ್ರವೇಶಿಸಿದರು.

ಅಥ್ಲೆಟಿಕ್ಸ್‌: ರಾಜ್ಯದ ಉನ್ನತಿಗೆ ಬಂಗಾರ, ನಿಯೋಲ್‌ಗೆ ಬೆಳ್ಳಿ

ಲಖನೌ: ಇಲ್ಲಿ ನಡೆಯುತ್ತಿರುವ 22ನೇ ರಾಷ್ಟ್ರೀಯ ಅಂಡರ್‌-20 ಫೆಡರೇಷನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕಕ್ಕೆ ಮತ್ತೆರಡು ಪದಕಗಳು ಲಭಿಸಿವೆ. ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಉನ್ನತಿ ಅಯ್ಯಪ್ಪ ಅವರು 14.05 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನದ ಪದಕ ಗೆದ್ದರು. 100 ಮೀ. ರೇಸ್‌ನಲ್ಲಿ ರಾಜ್ಯದ ನಿಯೋಲ್‌ ಅನ್ನಾ ಕೊರ್ನೆಲಿಯೊ 12.14 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ರಣಜಿ ಫೈನಲ್‌: 42ನೇ ಟ್ರೋಫಿ ಮೇಲೆ ಕಣ್ಣಿಟ್ಟ ಮುಂಬೈಗೆ ವಿದರ್ಭ ಸವಾಲು

ಒಲಿಂಪಿಕ್ ಅರ್ಹತಾ ಸುತ್ತು: ಹುಸ್ಮುದ್ದಿನ್‌ಗೆ ಸೋಲು

ಇಟಲಿ: ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಭಾರತದ ಮೊಹಮದ್ ಹುಸ್ಮುದ್ದಿನ್, ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಯ ಎರಡನೇ ಸುತ್ತಿನಲ್ಲೇ ಸೋತು ನಿರಾಸೆ ಅನುಭವಿಸಿದ್ದಾರೆ.

ಪುರುಷರ 57 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಹುಸ್ಮುದ್ದಿನ್ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿತು. ಶನಿವಾರ ಎರಡನೇ ಸುತ್ತಿನಲ್ಲಿ ಅವರು ಐರ್ಲೆಂಡ್‌ನ ಜ್ಯೂಡ್‌ ಗಾಲಾಘೆರ್ ವಿರುದ್ದ ಸೋಲುಂಡರು.

Follow Us:
Download App:
  • android
  • ios