Asianet Suvarna News Asianet Suvarna News

ಸಿಎಸ್’ಕೆ ಪರ ಆಡಿದ್ರೆ ಸಾಕು ಟೀಂ ಇಂಡಿಯಾಗೆ ಎಂಟ್ರಿ ಸಿಗೋದು ಪಕ್ಕಾ..!

Jul 7, 2018, 6:16 PM IST

ಬೆಂಗಳೂರು[ಜೂ.07]: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್’ಕಿಂಗ್ಸ್ ತಂಡದಲ್ಲಿ ಆಡಿದವರಿಗೆ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಸಿಗುವುದು ಪಕ್ಕಾ ಎಂಬ ಮಾತು ಮತ್ತೊಮ್ಮೆ ಸಾಭೀತಾಗಿದೆ.

ಈ ವಾದಕ್ಕೆ ಹೊಸ ಸೇರ್ಪಡೆ ಮುಂಬೈ ವೇಗಿ ಶಾರ್ದೂಲ್ ಠಾಕೂರ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವುದು. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಬುಮ್ರಾ ಗಾಯಗೊಂಡಿರುವ ಹಿನ್ನಲೆಯಲ್ಲಿ ಅವರ ಬದಲಿಗೆ ಠಾಕೂರ್’ಗೆ ಅವಕಾಶ ಕಲ್ಪಿಸಲಾಗಿದೆ.

ಶಾರ್ದೂಲ್ ಠಾಕೂರ್ ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್’ನಲ್ಲಿ ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆಡಿದ 13 ಪಂದ್ಯಗಳಲ್ಲಿ 16 ವಿಕೆಟ್ ಪಡೆದು ಗಮನ ಸೆಳೆದಿದ್ದರು.