ತೆರಿಗೆ ವಂಚನೆ: ದಂಡ ಪಾವತಿಗೆ ಒಪ್ಪಿದ ರೊನಾಲ್ಡೊ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 28, Jul 2018, 4:13 PM IST
Cristiano Ronaldo Settles Tax Dispute With Spain
Highlights

ಮ್ಯಾಡ್ರಿಡ್ ನ್ಯಾಯಾಲಯ ರೊನಾಲ್ಡೋಗೆ ದಂಡದ ಜತೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಸ್ಪೇನ್‌ನ ನಿಯಮದ ಪ್ರಕಾರ, ಮೊದಲ ಬಾರಿಗೆ ತಪ್ಪು ಮಾಡುವವರಿಗೆ 2 ಅಥವಾ ಅದಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ಜಾರಿಯಾದರೆ, ಜೈಲಿಗೆ ಹೋಗುವ ಅವಶ್ಯಕತೆ ಇಲ್ಲ. 

ಮ್ಯಾಡ್ರಿಡ್(ಜು.28]: ತೆರಿಗೆ ವಂಚನೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡಿದ್ದ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ದಂಡ ಪಾವತಿಸಲು ಸ್ಪೇನ್‌ನ ತೆರಿಗೆ ಇಲಾಖೆ ಸಮ್ಮತಿ ಸೂಚಿಸಿದೆ. ರೊನಾಲ್ಡೋ ಸುಮಾರು 19 ಮಿಲಿಯನ್ ಯುರೋ (ಅಂದಾಜು ₹151.7 ಕೋಟಿ) ದಂಡ ಕಟ್ಟಲಿದ್ದಾರೆ. 

ಮ್ಯಾಡ್ರಿಡ್ ನ್ಯಾಯಾಲಯ ರೊನಾಲ್ಡೋಗೆ ದಂಡದ ಜತೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಸ್ಪೇನ್‌ನ ನಿಯಮದ ಪ್ರಕಾರ, ಮೊದಲ ಬಾರಿಗೆ ತಪ್ಪು ಮಾಡುವವರಿಗೆ 2 ಅಥವಾ ಅದಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ಜಾರಿಯಾದರೆ, ಜೈಲಿಗೆ ಹೋಗುವ ಅವಶ್ಯಕತೆ ಇಲ್ಲ. 

ಇದನ್ನು ಓದಿ: ಜೈಲು ಶಿಕ್ಷೆಯಿಂದ ಪಾರಾದ ರೋನಾಲ್ಡೋಗೆ 150 ಕೋಟಿ ದಂಡ

ಒಂದೊಮ್ಮೆ ರೊನಾಲ್ಡೋ ತಪ್ಪೊಪ್ಪಿಕೊಂಡಿರದಿದ್ದರೆ ಅವರಿಗೆ ಇನ್ನೂ ಹೆಚ್ಚಿನ ದಂಡ ಹಾಗೂ ಕನಿಷ್ಠ ಮೂರುವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು.

loader