ಮುಂಬೈ(ಜ.03): ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾಗೆ 2018ನೇ ವರ್ಷ ಅತ್ಯಂತ ಸ್ಮರಣೀಯವಾಗಿತ್ತು. ಒಂದೆಡೆ 11 ತಿಂಗಳ ಬಳಿಕ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದರೆ, ವರ್ಷದ ಕೊನೆಯಲ್ಲಿ ರೋಹಿತ್ ತಂದೆಯಾಗಿ ಬಡ್ತಿ ಪಡೆದರು. ಡಿಸೆಂಬರ್ 30 ರಂದು ರೋಹಿತ್ ಪತ್ನಿ ರಿತಿಕಾ ಸಜ್ದೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಇದನ್ನೂ ಓದಿ: ಭಾರತದ ಸರ್ವ ಶ್ರೇಷ್ಠ ಟೆಸ್ಟ್ ತಂಡ ಪ್ರಕಟಿಸಿದ ಅನಿಲ್ ಕುಂಬ್ಳೆ!

ಪ್ರಮೋಶನ್ ಪಡೆದ ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್ ಪಂದ್ಯ ಮಿಸ್ ಮಾಡಿಕೊಂಡು ಭಾರತಕ್ಕೆ ಆಗಮಿಸಿದರು. ಇದೀಗ ನಾಲ್ಕು ದಿನಗಳ ಬಳಿಕ ರೋಹಿತ್ ಶರ್ಮಾ ಮುದ್ದು ಮಗಳ ಫೋಟೋ ಬಹಿರಂಗ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಫೋಟೋ ಶೇರ್ ಮಾಡಿದ್ದಾರೆ.

 

 

ಇದನ್ನೂ ಓದಿ: ತಂಡ ಬದಲಿಸದೇ ಐಪಿಎಲ್ ಆಡಿದ ಐವರುಆಟಗಾರರು ಇವರು!

ಜನವರಿ 8 ರಂದು ರೋಹಿತ್ ಶರ್ಮಾ ಟೀಂ ಇಂಡಿಯಾವನ್ನ ಸೇರಿಕೊಳ್ಳಲಿದ್ದಾರೆ. ಜನವರಿ 12 ರಿಂದ ಆಸ್ಟ್ರೇಲಿಯಾ ವಿರುದ್ಧದ  3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಮೂಲಕ ಹೊಸ ವರ್ಷದಲ್ಲಿ ಶುಭಾರಂಭ ಮಾಡೋ ವಿಶ್ವಾಸದಲ್ಲಿದ್ದಾರೆ.