Asianet Suvarna News Asianet Suvarna News

ಬಂದಿದೆ, ಸಚಿನ್ ಕ್ಯಾಶ್ ಕ್ವಿಜ್: ಉತ್ತರ ಹೇಳಿ, ನಗದು ಗೆಲ್ಲಿ..!

ಸಚಿನ್, ಈ ಕ್ವಿಜ್ ಗೇಮ್ ಆ್ಯಪ್ ಅನ್ನು ಜನಪ್ರಿಯಗೊಳಿಸಲು ಸಾಮಾಜಿಕ ತಾಣಗಳಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ‘ಕ್ಯಾಶ್ ಕ್ವಿಜ್ ಆ್ಯಪ್ ಅನ್ನು ಬಳಸಿ ಕ್ವಿಜ್‌ನಲ್ಲಿ ಪಾಲ್ಗೊಳ್ಳಿ ಮತ್ತು ₹10,000 ನಗದು ಬಹುಮಾನ ಗೆಲ್ಲಿ’ ಎಂದು ಹೇಳಿದ್ದಾರೆ.

Cricket Legend Sachin Tendulkar 100MB launches Live sports quiz
Author
New Delhi, First Published Oct 26, 2018, 1:14 PM IST

ನವದೆಹಲಿ: ಭಾರತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ‘100 ಎಂಬಿ ಕ್ಯಾಶ್ ಕ್ವಿಜ್’ ಗೇಮ್ ಅನ್ನು ಗುರುವಾರ ಬಿಡುಗಡೆಗೊಳಿಸಿದ್ದಾರೆ. ಜೆಟ್ ಸಿಂಥೆಸಿಸ್ ಹಾಗೂ ಸಚಿನ್ ತೆಂಡುಲ್ಕರ್
ಸಹಯೋಗದಲ್ಲಿ ಜಂಟಿಯಾಗಿ ಈ ಗೇಮ್ ಆ್ಯಪ್ ಅನ್ನು ನಿರ್ಮಿಸಲಾಗಿದೆ.

ಸಚಿನ್, ಈ ಕ್ವಿಜ್ ಗೇಮ್ ಆ್ಯಪ್ ಅನ್ನು ಜನಪ್ರಿಯಗೊಳಿಸಲು ಸಾಮಾಜಿಕ ತಾಣಗಳಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ‘ಕ್ಯಾಶ್ ಕ್ವಿಜ್ ಆ್ಯಪ್ ಅನ್ನು ಬಳಸಿ ಕ್ವಿಜ್‌ನಲ್ಲಿ ಪಾಲ್ಗೊಳ್ಳಿ ಮತ್ತು ₹10,000 ನಗದು ಬಹುಮಾನ ಗೆಲ್ಲಿ’ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿನ್ ತೆಂಡುಲ್ಕರ್ ‘ಆ್ಯಪ್‌ನ ಮುಖ್ಯ ಉದ್ದೇಶವೆಂದರೆ ಡಿಜಿಟಲ್ ಮತ್ತು ಕ್ರೀಡೆಯ ನೆರವಿನಿಂದ ವಿಶ್ವದ ಕ್ರೀಡಾಭಿಮಾನಿಗಳನ್ನು ಒಂದೇ ವೇದಿಕೆ ಮತ್ತು ಒಂದೇ ಸ್ಥಳಕ್ಕೆ ಕರೆತರುವುದಾಗಿದೆ. ಪ್ರತಿ ಕ್ರೀಡಾಭಿಮಾನಿ ಕೂಡ ಆ್ಯಪ್ ಬಳಸಿ ತಮ್ಮ ಕ್ರೀಡಾ ಜ್ಞಾನವನ್ನು ಪರೀಕ್ಷಿಸಿಕೊಳ್ಳುತ್ತಾರೆ ಮತ್ತು ಒಬ್ಬರಿಗೊಬ್ಬರು ಸ್ಪರ್ಧೆ ನೀಡುತ್ತಾರೆ’ ಎಂದು ಸಚಿನ್ ತಿಳಿಸಿದ್ದಾರೆ.

Follow Us:
Download App:
  • android
  • ios