Asianet Suvarna News Asianet Suvarna News

ಆಸ್ಟ್ರೇಲಿಯಾ ಕ್ರಿಕೆಟಿಗ ಮ್ಯಾಥ್ಯೂ ಹೇಡನ್‌ಗೆ ಅಪಘಾತ- ತಲೆಗೆ ಗಂಭೀರ ಗಾಯ!

ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಸರ್ಫಿಂಗ್ ಕ್ರೀಡೆ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಕ್ವೀನ್ಸ್‌ಲೆಂಡ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಹೇಡನ್ ತೆಲೆಗೆ ಪೆಟ್ಟಾಗಿದೆ. ಇಲ್ಲಿದೆ ಹೇಡನ್ ಅಪಘಾತದ ವಿವರ.

Cricket legend Mathew Hyden suffers head injury in accident
Author
Bengaluru, First Published Oct 8, 2018, 10:07 AM IST
  • Facebook
  • Twitter
  • Whatsapp

ಸಿಡ್ನಿ(ಅ.08) : ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಮ್ಯಾಥ್ಯೂ ಹೇಡನ್, ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೇಡನ್, ತಮ್ಮ ತಲೆಗೆ
ಆಗಿರುವ ಗಾಯದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದು ವೈರಲ್ ಆಗಿವೆ. 

 

 

ಕುಟುಂಬ ಸಮೇತ ಹೇಡನ್ ಕ್ವೀನ್ಸ್‌ಲೆಂಡ್‌ಗೆ ತೆರಳಿದ್ದರು. ಸಮುದ್ರದಲ್ಲಿ ಮಗನೊಂದಿಗೆ ಸರ್ಫಿಂಗ್‌ ಕ್ರೀಡೆಯಾಡುತ್ತಿದ್ದ ವೇಳೆ ಹೇಡನ್ ತಲೆಗೆ ಗಂಭೀರ‌ವಾಗಿ ಗಾಯವಾಗಿದೆ. ಅಪಘಾತದ ಬಳಿಕ ಹೇಡನ್‌ರನ್ನು ತಕ್ಷಣವೇ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿದ್ದು, ತಲೆಗೆ ಭಾರಿ ಪ್ರಮಾಣದಲ್ಲಿ ಪೆಟ್ಟು ಬಿದ್ದಿದೆ ಎಂದು ಹೇಳಲಾಗಿದೆ. ‘ಅಪಘಾತವಾದ ವೇಳೆ ಯಲ್ಲಿ ನನ್ನನ್ನು ಶೀಘ್ರ ಆಸ್ಪತ್ರೆಗೆ ತಲುಪಿಸಿ ಸ್ಕ್ಯಾನಿಂಗ್‌ಗೆ ಸಹಕರಿಸಿದ ಬೆನ್ ಸ್ಯೂ ಕೆಲ್ಲಿಗೆ ಹೇಡನ್ ಧನ್ಯವಾದ ತಿಳಿಸಿದ್ದಾರೆ. 

ಆಸ್ಟ್ರೇಲಿಯಾ ಪರ ಮ್ಯಾಥ್ಯೂ ಹೇಡನ್ 103 ಟೆಸ್ಟ್ ಪಂದ್ಯದಿಂದ 8625 ರನ್ ಸಿಡಿಸಿದ್ದಾರೆ. ಇನ್ನು 161 ಏಕದಿನ ಪಂದ್ಯದಿಂದ 6133 ರನ್ ಬಾರಿಸಿದ್ದಾರೆ. 9 ಟಿ20 ಪಂದ್ಯ ಆಡಿರುವ ಹೇಡನ್ 308 ರನ್ ದಾಖಲಿಸಿದ್ದಾರೆ. 
 

Follow Us:
Download App:
  • android
  • ios