Asianet Suvarna News Asianet Suvarna News

ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆಗಳೇನು?

ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಭರ್ಜರಿ ಗೆಲುವು ಮಾತ್ರವಲ್ಲ, ಹಲವು ದಾಖಲೆಗಳಿಗೂ ಕಾರಣವಾಗಿದೆ. ರಾಜ್‌ಕೋಟ್ ಪಂದ್ಯದ ಗೆಲುವಿನಿಂದ ಟೀಂ ಇಂಡಿಯಾ ನಿರ್ಮಿಸಿದ ದಾಖಲೆ ಏನು? ಇಲ್ಲಿದೆ.

Cricket India vs west Indies Rajkot test stats review
Author
Bengaluru, First Published Oct 7, 2018, 3:16 PM IST

ರಾಜ್‌ಕೋಟ್(ಅ.07): ವೆಸ್ಟ್ಇಂಡೀಸ್ ವಿರುದ್ದದ ಟೆಸ್ಟ್ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 272 ರನ್ ಗೆಲುವು ಸಾಧಿಸಿತು. ಇಷ್ಟೇ ಅಲ್ಲ ಪಂದ್ಯವನ್ನ ಕೇವಲ ಮೂರೇ ದಿನಕ್ಕೆ ಅಂತ್ಯಗೊಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ಪೃಥ್ವಿ ಶಾ ಭರವಸೆ ಮೂಡಿಸಿದರೆ, ಚೇತೇಶ್ವರ್ ಪೂಜಾರ ತವರಿನಲ್ಲಿ ಶತಕ ವಂಚಿತರಾದರು. ರಿಷಬ್ ಪಂತ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. ಸೆಂಚುರಿ ಸಿಡಿಸೋ ಮೂಲಕ  ಶತಕದ  ಸಿಹಿ ಅನುಭವಿಸಿದರು. ಬೌಲರ್‌ಗಳೂ ಕೂಡ ಅದ್ಬುತ ಪ್ರದರ್ಶನ ನೀಡೋ ಮೂಲಕ ಗೆಲುವಿನ ರೂವಾರಿಗಳಾದರು. ಭಾರತ ತಂಡದ ಅದ್ಬುತ ಪ್ರದರ್ಶನದಿಂದ ಹಲವು ದಾಖಲೆಗಳು ನಿರ್ಮಾಣವಾಗಿದೆ. 

ಟೆಸ್ಟ್‌ ಕ್ರಿಕೆಟ್‌ನ ಅತೀ ದೊಡ್ಡ ಗೆಲುವು: 
ರಾಜ್‌ಕೋಟ್ ವಿರುದ್ಧ ಭಾರತ ಇನ್ನಿಂಗ್ಸ್ ಹಾಗೂ 272 ರನ್ ಗೆಲುವು ಸಾಧಿಸಿತ್ತು. ಇದು ಭಾರತ ತಂಡದ ಅತೀ ದೊಡ್ಡ ಗೆಲುವು. ಇದಕ್ಕೂ ಮೊದಲು ಅಫ್ಘಾನಿಸ್ತಾನ ವಿರುದ್ಧದ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 262 ರನ್ ಗೆಲವು ಸಾಧಿಸಿತ್ತು.

ತವರಿನಲ್ಲಿ 100ನೇ ಗೆಲುವು:
ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸೋ ಮೂಲಕ ಭಾರತ ತವರಿನಲ್ಲಿ 100ನೇ ಗೆಲುವು ಸಾಧಿಸಿತು. ಈ ಮೂಲಕ ತವರಿನ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಗೆಲುವು ಸಾಧಿಸಿದ ತಂಡಗಳ ಪೈಕಿ ಭಾರತ 4ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 238 ಗೆಲುವು ಸಾಧಿಸಿದೆ.

ಡೆಬ್ಯೂ ಪಂದ್ಯದಲ್ಲಿ ಪೃಥ್ವಿ ಶಾಗೆ ಪಂದ್ಯಶ್ರೇಷ್ಠ:
ಪೃಥ್ವಿ ಶಾ ಪಾದಾರ್ಪಣಾ ಪಂದ್ಯದಲ್ಲೇ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ 6ನೇ ಭಾರತೀಯ ಟೆಸ್ಟ್ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಪ್ರವೀಣ್ ಆಮ್ರೆ, ಆರ್.ಪಿ.ಸಿಂಗ್, ಆರ್ ಅಶ್ವಿನ್, ಶಿಖರ್ ಧವನ್, ರೋಹಿತ್ ಶರ್ಮಾ ಡೆಬ್ಯೂ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸಿಕ್ಸ್:
ವೆಸ್ಟ್ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಒಟ್ಟು 11 ಸಿಕ್ಸರ್ ಸಿಡಿಸಿತ್ತು. ಇದಕ್ಕೂ ಮೊದಲು ಭಾರತ 2009ರಲ್ಲಿ ಶ್ರೀಲಂಕಾ ವಿರುದ್ದ 15 ಸಿಕ್ಸರ್ ದಾಖಲೆ ಬರೆದಿತ್ತು.

ವಿಂಡೀಸ್ ವಿರುದ್ಧ ಗರಿಷ್ಠ ಮೊತ್ತ:
ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 649 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಈ ಮೂಲಕ ವಿಂಡೀಸ್ ವಿರುದ್ಧ ಗರಿಷ್ಠ ಮೊತ್ತ ದಾಖಲಿಸಿತು. ಇದಕ್ಕೂ ಮೊದಲು 1979 ರಲ್ಲಿ ಕಾನ್ಪುರದಲ್ಲಿ ನಡೆದ ಪಂದ್ಯದಲ್ಲಿ 644 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

Follow Us:
Download App:
  • android
  • ios