Asianet Suvarna News Asianet Suvarna News

ಟಿ20 ಸರಣಿಯಲ್ಲೂ ಟೀಂ ಇಂಡಿಯಾ ಎದುರು ಮಂಡಿಯೂರಿದ ಕೆರಿಬಿಯನ್ನರು..!

ಮೊದಲು ಬ್ಯಾಟಿಂಗ್ ಮಾಡಿದ ಭಾರತ, ರೋಹಿತ್ ಶರ್ಮಾ ಬಾರಿಸಿದ 4ನೇ ದಾಖಲೆಯ ಶತಕದ ನೆರವಿನಿಂದ 195 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ವೆಸ್ಟ್ ಇಂಡೀಸ್ 9 ವಿಕೆಟ್ ಕಳೆದುಕೊಂಡು 124 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 71 ರನ್’ಗಳ ಹೀನಾಯ ಸೋಲು ಕಂಡಿತು.
ಹೀಗಿತ್ತು ನೋಡಿ ಎರಡನೇ ಟಿ20 ಫೈಟ್...

ಬೆಂಗಳೂರು[ನ.07]: ಟೀಂ ಇಂಡಿಯಾ ಎದುರು ಸಾಧಾರಣ ಪ್ರದರ್ಶನ ತೋರುತ್ತಾ ಬಂದಿರುವ ಹಾಲಿ ಟಿ20 ವಿಶ್ವಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಇದೀಗ ಚುಟುಕು ಕ್ರಿಕೆಟ್’ನಲ್ಲೂ ಸರಣಿ ಕೈಚೆಲ್ಲಿದೆ. ಟೆಸ್ಟ್ ಹಾಗೂ ಏಕದಿನ ಸರಣಿ ಸೋತು ಹೈರಾಣಾಗಿದ್ದ ಕೆರಿಬಿಯನ್ನರು ಇದೀಗ ಟಿ20 ಸರಣಿ ಸೋತು ಮುಖಭಂಗ ಅನುಭವಿಸಿದೆ.