Asianet Suvarna News Asianet Suvarna News

ವಿದೇಶಿ ಪ್ರವಾಸದಲ್ಲಿ ಪತ್ನಿಯರ ಉಪಸ್ಥಿತಿ-ವಿರಾಟ್ ಕೊಹ್ಲಿಗೆ ಹಿನ್ನಡೆ!

ವಿದೇಶಿ ಪ್ರವಾಸದಲ್ಲಿ ಪತ್ನಿಯರು ಜೊತೆಗಿರಬೇಕು ಎಂದು ಬಿಸಿಸಿಐಗೆ ಮನವಿ ಮಾಡಿದ್ದ ನಾಯಕ ವಿರಾಟ್ ಕೊಹ್ಲಿಗೆ ಹಿನ್ನೆಡೆಯಾಗಿದೆ. ವಿರಾಟ್ ಕೊಹ್ಲಿ ಮನವಿಗೆ ಬಿಸಿಸಿಐ ನೀಡಿದ ಉತ್ತರವೇನು?

Cricket BCCI rejects Captain Virat Kohli plea
Author
Bengaluru, First Published Oct 8, 2018, 9:48 AM IST

ನವದೆಹಲಿ(ಅ.08): ವಿದೇಶ ಪ್ರವಾಸದ ವೇಳೆ ಪತ್ನಿಯರು ಜೊತೆಗಿರಲು ಅವಕಾಶ ಕಲ್ಪಿಸಬೇಕು ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ಪ್ರಸ್ತಾಪಕ್ಕೆ ಸುಪ್ರೀಂ ನೇಮಿತ ಬಿಸಿಸಿಐ ಆಡ ಳಿತ ಸಮಿತಿ (ಸಿಒಎ) ನಿರಾಕರಿಸಿದೆ. ಈ ಸಂಬಂಧ ತುರ್ತು ನಿರ್ಣ ಯ ತೆಗೆದುಕೊಳ್ಳಲು
ಸಾಧ್ಯವಿಲ್ಲ ಎಂದು ಸಿಒಎ ಹೇಳಿದೆ. ಇದರಿಂದಾಗಿ ಕೊಹ್ಲಿ ಬೇಡಿಕೆಗೆ ಅಲ್ಪ ಹಿನ್ನಡೆಯದಂತಾಗಿದೆ.

ವಿದೇಶ ಪ್ರವಾಸ ಗಳಲ್ಲಿ ಪತ್ನಿಯರ ಸಾನಿಧ್ಯಕ್ಕೆ ಕೊಹ್ಲಿ ಮನವಿ ಸಲ್ಲಿಸಿದ್ದರು. ಆದರೆ ಶೀಘ್ರದಲ್ಲಿ ಇಂತಹ ನಿರ್ಣಯ ಗಳನ್ನು ತೆಗೆದು ಕೊಳ್ಳುವುದು ಅಸಾಧ್ಯವಾಗಿದೆ ಎಂದು ಸಿಒಎ ಅಧಿಕಾ ರಿಯೊಬ್ಬರು ಹೇಳಿದ್ದಾರೆ. ವೆಸ್ಟ್ಇಂಡೀಸ್ ಸರಣಿ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ಸುದೀರ್ಘ ಸರಣಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಜೊತೆ ಅವರ ಪತ್ನಿಯರಿಗೂ ಇರಲು ಅವಕಾಶ ಕಲ್ಪಿಸಬೇಕು ಎಂದು ನಾಯಕ ವಿರಾಟ್ ಕೊಹ್ಲಿ ಮನವಿ ಸಲ್ಲಿಸಿದ್ದರು.

ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಟೀಕೆಗಳು ವ್ಯಕ್ತವಾಗಿತ್ತು. ಇಷ್ಟೇ ಅಲ್ಲ, ಲಂಡನ್‌ನಲ್ಲಿರುವ ಭಾರತೀಯ ಹೈ  ಕಮಿಶನ್ ಕಚೇರಿ ಬೇಟಿ ವೇಳೆ ಟೀಂ ಇಂಡಿಯಾ ಕ್ರಿಕೆಟಿಗರ ಜೊತೆ ಅನುಷ್ಕಾ ಶರ್ಮಾ ಕೂಡ ಹಾಜರಿದ್ದರು. ಇದು ಭಾರಿ ವಿರೋಧಕ್ಕೆ ಕಾರಣವಾಗಿತ್ತು. ಹೀಗಾಗಿ ಬಿಸಿಸಿಐ ಹೊಸ ನೀತಿ ಜಾರಿಗೆ ತಂದಿತ್ತು. ಹಳೇ ನಿಯಮದ ಬದಲು ಹೊಸ ನಿಯಮ ತರಲು ವಿರಾಟ್ ಕೊಹ್ಲಿ ಮನವಿ ಮಾಡಿದ್ದರು.  ಕೊಹ್ಲಿ ಮನವಿಗೆ ಹಿನ್ನಡೆಯಾಗಿದೆ.

Follow Us:
Download App:
  • android
  • ios