ಸೈಂಟ್ ಲೂಸಿಯಾ(ಆ.19): ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟಿಗರ ಸಂಭ್ರಮಾಚರಣೆ ತುಂಬಾ ಡಿಫ್ರೆಂಟ್. ಪಂಜಾಬಿ ಬಾಂಗ್ಡಾದಿಂದ ಹಿಡಿದು ಗಂಗ್ನಮ್ ಸ್ಟೈಲ್ ಕೂಡ ಕ್ರಿಕೆಟ್ ಮೈದಾನದಲ್ಲಿ ಮೇಳೈಸಿದೆ. ಇದೀಗ ಅಫ್ಘಾನಿಸ್ತಾನ ಸ್ಪಿನ್ನರ್ ವಿಶಿಷ್ಠ ಸಂಭ್ರಮಾಚರಣೆ ಮಾಡೋ ಮೂಲಕ ಗಮನಸೆಳೆದಿದ್ದಾರೆ.

ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸೈಂಟ್ ಲೂಸಿಯಾ ಹಾಗೂ ಬಾರ್ಬಡೋಸ್ ನಡುವಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಸ್ಪಿನ್ನರ್ ಕ್ವೈಸ್ ಅಹಮ್ಮದ್ ವಿಶಿಷ್ಠ ರೀತಿಯಲ್ಲಿ ಸೆಲೆಬ್ರೇಷನ್ ಮಾಡಿದ್ದಾರೆ.

 

 

ಸೈಂಟ್ ಲೂಸಿಯಾ ತಂಡದ ಅಹಮ್ಮದ್, ಬಾರ್ಬಡೋಸ್ ತಂಡದ ಕೀ ಪ್ಲೇಯರ್ ಡ್ವೇನ್ ಸ್ಮಿತ್ ವಿಕೆಟ್ ಪಡೆದು ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಈ ವಿಕೆಟ್ ಸಂಭ್ರಮವನ್ನ ಫ್ರಂಟ್ ಫ್ಲಿಪ್ ಜಂಪ್ ಮೂಲಕ ಆಚರಿಸಿದರು.

ಫುಟ್ಬಾಲ್ ಮೈದಾನದಲ್ಲಿ ಫ್ರಂಟ್ ಹಾಗೂ ಬ್ಯಾಕ್ ಫ್ಲಿಪ್ ಜಂಪ್ ಸಂಭ್ರಮಾಚರಣೆ ಹೆಚ್ಚಾಗಿದೆ. ಆದರೆ ಜಂಪ್ ಮಾಡಿ ಲ್ಯಾಂಡಿಂಗ್‌ನಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪ್ರಾಣಕ್ಕೆ ಅಪಾಯವಿದೆ. ಆದರೆ ಅಹಮ್ಮದ್ ಈ ಫ್ರಂಟ್ ಫ್ಲಿಪ್ ಜಂಪ್ ಸಲೀಸಾಗಿ ಮಾಡಿ ಸಂಭ್ರಮಿಸಿದರು.