ಭಾರತದ ಧ್ವಜ ಹಿಡಿದು ಫೋಟೋಗೆ ಪೋಸ್ ಕೊಟ್ಟ ಪಾಕಿಸ್ತಾನ ಚೆಸ್ ತಂಡ: ವೀಡಿಯೋ ವೈರಲ್
ಭಾರತದ ಧ್ವಜ ಹಿಡಿದು ಫೋಟೋಗೆ ಪೋಸ್ ಕೊಟ್ಟ ಪಾಕಿಸ್ತಾನ ಚೆಸ್ ತಂಡದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಾರಿಯ ಚೆಸ್ ಒಲಿಂಪಿಯಾಡ್ ಹಲವು ರೋಚಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯ್ತು, ಭಾರತದ ಮಹಿಳಾ ಹಾಗೂ ಪುರುಷ ಎರಡು ತಂಡಗಳು ಒಟ್ಟೊಟ್ಟಿಗೆ ಮೊದಲ ಬಾರಿಗೆ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ್ದವು. 2024ರ ಈ ಚೆಸ್ ಒಲಿಂಪಿಯಾಡ್ ಮತ್ತೊಂದು ಅಪರೂಪದ ಅನಿರೀಕ್ಷಿತ ಘಟನೆಗೆ ಸಾಕ್ಷಿಯಾಯ್ತು. ಈ ಚೆಸ್ ಒಲಿಂಪಿಯಾಡ್‌ನಲ್ಲಿ ಭಾಗಿಯಾದ ಪಾಕಿಸ್ತಾನದ ಚೆಸ್ ತಂಡ ಭಾರತೀಯ ಧ್ವಜ ಹಿಡಿದು ಫೋಟೋಗೆ ಪೋಸ್ ಕೊಟ್ಟಿತು. ಚೆನ್ ಟೂರ್ನ್‌ಮೆಂಟ್ ನಂತರ ನಡೆದ ಫೋಟೋ ಸೆಷನ್ ವೇಳೆ ಈ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಹಂಗೇರಿಯ ಬೂಡಾಪೆಸ್ಟ್‌ನಲ್ಲಿ ನಡೆದ ಒಲಿಂಪಿಯಾಡ್‌ನ ಸಮಾರೋಪದ ವೇಳೆ ಈ ಘಟನೆ ನಡೆದಿದೆ. ಭಾರತ ತಂಡದ ಜೊತೆ ಪಾಕಿಸ್ತಾನದ ಚೆಸ್ ಆಟಗಾರರು ಭಾರತದ ಧ್ವಜ ಹಿಡಿದು ಪೋಸ್ ನೀಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣದಲ್ಲೇ ವೈರಲ್ ಆಗಿದ್ದು, ಭಾರತದ ಹಾಗೂ ಪಾಕಿಸ್ತಾನದ ಜನ ಈ ವೀಡಿಯೋಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಲ್ಲದೇ ಅನೇಕರು ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಹೇಗೆ ಒಂದು ತಂತ್ರ ಹಾಗೂ ಬುದ್ಧಿವಂತಿಕೆಯ ಆಟ ಚದುರಂಗ ಹೇಗೆ ಎರಡು ರಾಷ್ಟ್ರಗಳ ನಡುವೆ ಶಾಂತಿಯುತ ಸಂಬಂಧವನ್ನು ನಿರ್ಮಿಸುವ ರೂಪಕವಾಗಿದೆ ಎಂಬುದನ್ನು ನೆಟ್ಟಿಗರು ಚರ್ಚೆ ಮಾಡಿದ್ದಾರೆ.
ಪಾಕ್‌ನಲ್ಲಿ ಒತ್ತುವರಿ ತೆರವಿಗೆ ಜನರ ವಿರೋಧ: ಹಿಟಾಚಿ ಡ್ರೈವರ್ ಮಾಡಿದ ಈ ಕೆಲ್ಸಕ್ಕೆ ಇಡೀ ಜಾಗ ಕ್ಷಣದಲ್ಲಿ ಖಾಲಿ !
ಆದರೆ ಇದಕ್ಕೂ ಮೊದಲು ಏಷ್ಯಾ ಚಾಂಪಿಯನ್ ಹಾಕಿ ಟ್ರೋಫಿ ಪಂದ್ಯಾವಳಿಯಲ್ಲಿ ತಮ್ಮ ಕಂಚಿನ ಪದಕದ ಮ್ಯಾಚ್‌ನ ನಂತರ ಪಾಕಿಸ್ತಾನದ ಕ್ರೀಡಾಪಟುಗಳು ಚೀನಾದ ಧ್ವಜವನ್ನು ಹಾಗೂ ಚೀನಾದ ಬ್ಯಾಡ್ಜನ್ನು ತೋರಿಸಿ ಚೀನಾಗೆ ಬೆಂಬಲ ಸೂಚಿಸಿದ್ದರು. ಆದರೆ ಪಾಕಿಸ್ತಾನದ ಬೆಂಬಲದ ಹೊರತಾಗಿಯೂ ಭಾರತದ ಕೈಯಲ್ಲಿ ಚೀನಾ ಸೋಲು ಕಂಡಿತ್ತು.
ಹಜ್ ಯಾತ್ರೆ ಹೆಸರಲ್ಲಿ ಭಿಕ್ಷುಕರ ಕಳಿಸ್ತಿರುವ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ವಾರ್ನಿಂಗ್
ಈಗ ಪಾಕಿಸ್ತಾನ ಭಾರತದ ಧ್ವಜ ಹಿಡಿದಿರುವ ಈ ವೀಡಿಯೋವನ್ನು @ChessbaseIndia ಎಂಬ ಟ್ವಿಟ್ಟರ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಪಾಕಿಸ್ತಾನ ತನ್ನ ಮೂಲವನ್ನು ಗುರುತಿಸಿದಂತಹ ಅಪರೂಪದ ದೃಶ್ಯ ಎಂದು ಈ ವೀಡಿಯೋಗೆ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದನ್ನು ನೋಡುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.