ಫ್ರೆಂಚ್ ಓಪನ್ ಗೆದ್ದ ಕಾರ್ಲೋಸ್ ಆಲ್ಕರಜ್..! ಜ್ವೆರೆವ್ ಗ್ರ್ಯಾನ್‌ಸ್ಲಾಂ ಕನಸು ನುಚ್ಚುನೂರು

ಇದೇ ಮೊದಲ ಬಾರಿಗೆ ಅಲೆಕ್ಸಾಂಡರ್ ಜ್ವೆರೆವ್ ಹಾಗೂ ಕಾರ್ಲೋಸ್ ಆಲ್ಕರಜ್ ಫ್ರೆಂಚ್ ಓಪನ್ ಗ್ಯಾನ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ ಪ್ರವೇಶಿಸಿದ್ದರು. ಇದೀಗ ಕಾರ್ಲೋಸ್ ಆಲ್ಕರಜ್ ಮೂರು ವಿವಿಧ ಗ್ರ್ಯಾನ್‌ಸ್ಲಾಂ ಜಯಿಸಿದ ಅತಿ ಕಿರಿಯ ಟೆನಿಸಿಗ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

Carlos Alcaraz beats Alexander Zverev in five sets to win his first French Open kvn

ಪ್ಯಾರಿಸ್: 2024ರ ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾನ್‌ಸ್ಲಾಂನಲ್ಲಿ 21 ವರ್ಷದ ಕಾರ್ಲೋಸ್ ಆಲ್ಕರಜ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಎದುರು ಭರ್ಜರಿ ಪೈಪೋಟಿ ನೀಡಿದ ಆಲ್ಕರಜ್ ಕೊನೆಗೂ ಫ್ರೆಂಚ್ ಓಪನ್‌ನಲ್ಲಿ ಮೊದಲ ಹಾಗೂ ಒಟ್ಟಾರೆ ಮೂರನೇ ಗ್ರ್ಯಾನ್‌ಸ್ಲಾಂಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾದರು. ಆದರೆ ಚೊಚ್ಚಲ ಗ್ರ್ಯಾನ್‌ಸ್ಲಾಂಗೆ ಮುತ್ತಿಕ್ಕುವ ಜ್ವೆರೆವ್ ಕನಸು ಮತ್ತೊಮ್ಮೆ ಭಗ್ನವಾಯಿತು.

ಇದೇ ಮೊದಲ ಬಾರಿಗೆ ಅಲೆಕ್ಸಾಂಡರ್ ಜ್ವೆರೆವ್ ಹಾಗೂ ಕಾರ್ಲೋಸ್ ಆಲ್ಕರಜ್ ಫ್ರೆಂಚ್ ಓಪನ್ ಗ್ಯಾನ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ ಪ್ರವೇಶಿಸಿದ್ದರು. ಇದೀಗ ಕಾರ್ಲೋಸ್ ಆಲ್ಕರಜ್ ಮೂರು ವಿವಿಧ ಗ್ರ್ಯಾನ್‌ಸ್ಲಾಂ ಜಯಿಸಿದ ಅತಿ ಕಿರಿಯ ಟೆನಿಸಿಗ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಫೈನಲ್‌ನಲ್ಲಿ ಕಾರ್ಲೋಸ್ ಆಲ್ಕರಜ್ 6-3, 2-6, 7-5, 6-1, 6-2 ಸೆಟ್‌ಗಳಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.

ಸ್ಪೇನ್‌ನ ಯುವ ಪ್ರತಿಭೆ ಕಾರ್ಲೋಸ್ ಆಲ್ಕರಜ್ 2022ರಲ್ಲಿ ಯುಎಸ್ ಓಪನ್, 2023ರಲ್ಲಿ ವಿಂಬಲ್ಡನ್ ಚಾಂಪಿಯನ್ ಆಗಿದ್ದರು. ಇದೀಗ ಕಾರ್ಲೋಸ್ ಆಲ್ಕರಜ್ ಸಾಧನೆಯ ಕಿರೀಟಕ್ಕೆ ಫ್ರೆಂಚ್ ಓಪನ್ ಗ್ರ್ಯಾನ್‌ ಸ್ಲಾಂ ಗರಿ ಸೇರ್ಪಡೆಯಾಗಿದೆ. 

ಜ್ವೆರೆವ್‌ಗೆ ಮತ್ತೆ ನಿರಾಸೆ: 2020ರ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ಚೊಚ್ಚಲ ಗ್ರ್ಯಾನ್‌ಸ್ಲಾಂಗೆ ಮುತ್ತಿಕ್ಕುವ ಕನಸು ಕಂಡಿದ್ದ ಜ್ವರೆಲ್, ಫೈನಲ್‌ನಲ್ಲಿ ಡೊಮಿನಿಕ್ ಥಿಮ್ ಎದುರು ಸೋಲುಂಡು ನಿರಾಸೆ ಅನುಭವಿಸಿದ್ದರು. ಇನ್ನು ಕಳೆದ ಆವೃತ್ತಿಯ ಫ್ರೆಂಚ್ ಓಪನ್‌ನಲ್ಲಿ ಸೆಮೀಸ್‌ನಲ್ಲಿ ಪಾದದ ಗಾಯಕ್ಕೆ ಒಳಗಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. 
 

Latest Videos
Follow Us:
Download App:
  • android
  • ios