Asianet Suvarna News Asianet Suvarna News

ಬರಿಗೈಯಲ್ಲಿ ಬಂದ ಅಭಿಮಾನಿಗೆ ನಿರಾಸೆ ಮಾಡಲಿಲ್ಲ ಕೊಹ್ಲಿ!

ವಿರಾಟ್ ಕೊಹ್ಲಿ ಅಟೋಗ್ರಾಫ್ ಪಡೆಯಲು ಬಂದ ಅಭಿಮಾನಿಗೆ ನಾಯಕ ನಿರಾಸೆ ಮಾಡಲಿಲ್ಲ. ಹಾಗಾದರೆ ಅಭಿಮಾನಿಗೆ ಕೊಹ್ಲಿ ನೀಡಿದ ಗಿಫ್ಟ್ ಏನು? ಇಲ್ಲಿದೆ ವಿವರ.
 

Captain Virat Kohli didnt let a fan return empty handed
Author
Bengaluru, First Published Nov 28, 2018, 5:07 PM IST

ಸಿಡ್ನಿ(ನ.28): ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿ ಮುಗಿಸಿರುವ ಟೀಂ ಇಂಡಿಯಾ ಇದೀಗ ಅಭ್ಯಾಸ ಪಂದ್ಯಕ್ಕೆ ಸಜ್ಜಾಗಿದೆ. ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿದೆ. ಆದರೆ ಕಳೆದೆರಡು ದಿನದಿಂದ ಅಭ್ಯಾಸ ಮಾಡುತ್ತಿದ್ದ ವಿರಾಟ್ ಕೊಹ್ಲಿ, ಅಭಿಮಾನಿಯೊರ್ವನಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.

ಅಭ್ಯಾಸ ಮಾಡುತ್ತಿದ್ದ ಟೀಂ ಇಂಡಿಯಾ ಕ್ರಿಕೆಟಿಗರ ಆಟೋಗ್ರಾಫ್ ಪಡೆಯಲು ಹಲವು ಅಭಿಮಾನಿಗಳು ಸಿಡ್ನಿ ಮೈದಾನಕ್ಕೆ ಆಗಮಿಸಿದ್ದರು. ಈ ವೇಳೆ ಅಭ್ಯಾಸ ಮುಗಿಸಿ ಪೆವೆಲಿಯನ್‌ಗೆ ಆಗಮಿಸಿದ ವಿರಾಟ್ ಕೊಹ್ಲಿ ಆಟೋಗ್ರಾಫ್ ಪಡೆಯಲು ಮುಂದಾಗಿದ್ದಾನೆ. ಆದರೆ ಆತನ ಬಳಿ ಪೆನ್ನಾಗಲಿ ಅಥವಾ ಪೇಪರ್ ಆಗಲಿ ಇರ್ಲಿಲ್ಲ.

 

 
 
 
 
 
 
 
 
 
 
 
 
 

@virat.kohli giving an autograph to a fan! 💕 @anushkasharma #virat #kohli #viratkohli #cricket #australia

A post shared by © Virat Kohli (@official_viratian18) on Nov 27, 2018 at 7:46pm PST

 

ಈ ವೇಳೆ ಕೊಹ್ಲಿ ಆತನನಲ್ಲಿ ಟಿಶರ್ಟ್ ಎಳೆದು ಹಿಡಿಯುವಂತೆ ಹೇಳಿ ಆದರ ಮೇಲೆ ಕೊಹ್ಲಿ ಸಹಿ ಹಾಕಿದ್ದಾರೆ. ಈ ಮೂಲಕ ಬರಿಗೈಯಲ್ಲಿ ಬಂದ ಅಭಿಮಾನಿ ಟಿ ಶರ್ಟ್ ಮೇಲೆ ಸಹಿ ಹಾಕಿಸಿಕೊಂಡು ಹಿಂತಿರುಗಿದ್ದಾನೆ

Follow Us:
Download App:
  • android
  • ios