Asianet Suvarna News Asianet Suvarna News

ಗಂಭೀರ್-ಒಮರ್ ಅಬ್ದುಲ್ಲಾ ಟ್ವೀಟ್ ಸಮರ-ಕ್ರಿಕೆಟಿಗನ ಬೆಂಬಲಕ್ಕೆ ನಿಂತ ಬಿಜೆಪಿ!

ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಇಬ್ಬರು ಉಗ್ರರನ್ನ ಹೊಡೆದರುಳಿಸಿದ ಸೇನೆ ವಿರುದ್ಧ ಅರಸ್ವರಗಳು ಕೇಳಿ ಬಂದಿತ್ತು. ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಒಮರ್ ಅಬ್ದುಲ್ಲಾಗೆ ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.

BJP backs Gautam Gambhir slams Omar Abdullah for backing terrorists
Author
Bengaluru, First Published Oct 13, 2018, 5:57 PM IST

ನವದೆಹಲಿ(ಅ.13): ದೇಶ ಹಾಗೂ ಸೈನ್ಯಕ್ಕೆ ಅಪಾರ ಗೌರವ ಕೊಡುವ ಕ್ರಿಕೆಟಿಗ ಗೌತಮ್ ಗಂಭೀರ್. ಸೈನಿಕರ ವಿರುದ್ದ ಯಾರೇ ಅಪಸ್ವರ ಎತ್ತಿದರೂ ಗಂಭೀರ್ ತಕ್ಕ ಉತ್ತರ ನೀಡಿದ ಊದಾಹರಣೆಗಳಿವೆ. ಇದೀಗ ಮತ್ತೆ ಗಂಭೀರ್ ಸಿಡಿದೆದ್ದಿದ್ದಾರೆ.

ಕಾಶ್ಮೀರದಲ್ಲಿ  ಹಿಜ್ಬುಲ್ ಮುಜಾಹಿದ್ದೀನ್ ಸಂಘಟೆಯನ್ನ ಗುರುತಿಸಿಕೊಂಡಿದ್ದ ಮನನ್ ವಾನಿ ಹಾಗೂ ಅಶಿಕ್ ಹುಸೈನ್ ಇಬ್ಬರನ್ನ ಭಾರತೀಯ ಸೇನೆ ಗುಂಡಿಟ್ಟು ಕೊಂದಿತ್ತು. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಸೇನೆಯ ಕ್ರಮವನ್ನ ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದರು.

 

 

ಒಮರ್ ಅದ್ಬುಲ್ಲಾ ಹೇಳಿಕೆಗೆ ಕ್ರಿಕೆಟಿಗ ಗೌತಮ್ ಗಂಭೀರ್ ತಿರುಗೇಟು ನೀಡಿದ್ದರು. ಭಾರತೀಯ ಸೇನೆ ಕೊಂದಿದ್ದ ಉಗ್ರರನ್ನ ಎಂದು ಗಂಭೀರ್ ಖಾರವಾಗಿ ಒಮರ್ ಅಬ್ದುಲ್ಲಾಗೆ ಪ್ರತಿಕ್ರಿಯೆ ನೀಡಿದ್ದರು.

 

ಗಂಭೀರ್ ಹಾಗೂ ಒಮರ್ ಟ್ವೀಟ್ ಸಮರ ಇಷ್ಟಕ್ಕೆ ನಿಲ್ಲಲಿಲ್ಲ. ಆದರೆ ಗಂಭೀರ್ ಟ್ವೀಟ್ ಮಾಡುತ್ತಿದ್ದಂತೆ ಬಿಜೆಪಿ ಕ್ರಿಕೆಟಿಗನ ಬೆಂಬಲಕ್ಕೆ ನಿಂತಿದೆ. ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಮುಖ್ಯಸ್ಥ ರವೀಂದ್ರ ರೈನಾ, ಒಮರ್ ಅಬ್ದುಲ್ಲಾ ವಿರುದ್ಧ ಹರಿಹಾಯ್ದಿದ್ದಾರೆ.

 

 

 

Follow Us:
Download App:
  • android
  • ios