ಬೆಂಗಳೂರು ಓಪನ್: ಸುಮಿತ್, ಪ್ರಜ್ಞೇಶ್ ಸೇರಿ ನಾಲ್ವರು ಕ್ವಾರ್ಟರ್’ಗೆ ಲಗ್ಗೆ
ಅಗ್ರ ಶ್ರೇಯಾಂಕಿತನ ವಿರುದ್ಧ ಗೆದ್ದು ಬೀಗಿದ್ದ ಈಜಿಪ್ಟ್‌ನ ಯೂಸುಫ್ ಹೊಸ್ಸಾಮ್ ವಿರುದ್ಧ 6-1, 3-6, 6-1 ಸೆಟ್‌ಗಳಲ್ಲಿ ಗೆದ್ದ ಸಾಕೇತ್ ಮೈನೇನಿ ಅಚ್ಚರಿ ಮೂಡಿಸಿದರು. ಭಾರತದ ಅಗ್ರ ಟೆನಿಸಿಗರಲ್ಲಿ ಒಬ್ಬರಾದ ಪ್ರಜ್ನೇಶ್ ಗುಣೇಶ್ವರನ್ ಜರ್ಮನಿಯ ಸೆಬಾಸ್ಟಿಯನ್ ವಿರುದ್ಧ 4-6, 6-4, 7-5 ಸೆಟ್‌ಗಳಲ್ಲಿ ಗೆದ್ದು ಕ್ವಾರ್ಟರ್ ಪ್ರವೇಶಿಸಿದರು.
ಬೆಂಗಳೂರು(ನ.15): ಹಾಲಿ ಸಿಂಗಲ್ಸ್ ಚಾಂಪಿಯನ್ ಸುಮಿತ್ ನಗಾಲ್ ಸೇರಿ ಭಾರತದ ನಾಲ್ವರು ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ಶಶಿ ಕುಮಾರ್, ಸ್ಲೋವೆನಿಯಾದ ಬ್ಲಾಜ್ ಕವ್ಚಿಚ್ ವಿರುದ್ಧ ಗೆಲುವು ಸಾಧಿಸಿದರೆ, ಸುಮಿತ್ ಗ್ರೇಟ್ ಬ್ರಿಟನ್‌ನ ಜೇಮ್ಸ್ ವಾರ್ಡ್ ವಿರುದ್ಧ 6-3, 7-6 ಸೆಟ್‌ಗಳಲ್ಲಿ ಗೆದ್ದರು.
ಅಗ್ರ ಶ್ರೇಯಾಂಕಿತನ ವಿರುದ್ಧ ಗೆದ್ದು ಬೀಗಿದ್ದ ಈಜಿಪ್ಟ್‌ನ ಯೂಸುಫ್ ಹೊಸ್ಸಾಮ್ ವಿರುದ್ಧ 6-1, 3-6, 6-1 ಸೆಟ್‌ಗಳಲ್ಲಿ ಗೆದ್ದ ಸಾಕೇತ್ ಮೈನೇನಿ ಅಚ್ಚರಿ ಮೂಡಿಸಿದರು. ಭಾರತದ ಅಗ್ರ ಟೆನಿಸಿಗರಲ್ಲಿ ಒಬ್ಬರಾದ ಪ್ರಜ್ನೇಶ್ ಗುಣೇಶ್ವರನ್ ಜರ್ಮನಿಯ ಸೆಬಾಸ್ಟಿಯನ್ ವಿರುದ್ಧ 4-6, 6-4, 7-5 ಸೆಟ್‌ಗಳಲ್ಲಿ ಗೆದ್ದು ಕ್ವಾರ್ಟರ್ ಪ್ರವೇಶಿಸಿದರು.
ಡಬಲ್ಸ್ ವಿಭಾಗದಲ್ಲಿ ಭಾರತದ ಸಾಕೇತ್ ಮೈನೇನಿ ಹಾಗೂ ಅರ್ಜುನ್ ಖಾಡೆ ಜೋಡಿ ತಮ್ಮವರೇ ಆದ ಪ್ರಜ್ವಲ್ ದೇವ್ ಹಾಗೂ ನಿಕಿ ಪೂಣಚ್ಚ ವಿರುದ್ಧ 6-3, 7-6ರಲ್ಲಿ ಗೆದ್ದು ಸೆಮೀಸ್‌ಗೇರಿದರು.