Bengaluru Open: ಎರಡನೇ ಸುತ್ತಿಗೆ ಸೆಂಗ್ ಚುನ್-ಸಿನ್, ಲುಕಾ ನಾರ್ಡಿ
ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟ ಸೆಂಗ್ ಚುನ್-ಸಿನ್, ಲುಕಾ ನಾರ್ಡಿ
ಸೋಮವಾರ ಆರಂಭಗೊಂಡ ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ಶುಭಾರಂಭ
ಡಬಲ್ಸ್‌ನಲ್ಲಿ ಭಾರತದ 10 ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ
ಬೆಂಗಳೂರು(ಫೆ.21): 5ನೇ ಆವೃತ್ತಿಯ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ 2ನೇ ಸುತ್ತಿಗೆ ಅಗ್ರ ಶ್ರೇಯಾಂಕಿತೆ ಚೈನೀಸ್ ತೈಪೆಯ ಸೆಂಗ್ ಚುನ್-ಸಿನ್, 5ನೇ ಶ್ರೇಯಾಂಕಿತ ಇಟಲಿಯ ಲುಕಾ ನಾರ್ಡಿ ಪ್ರವೇಶಿಸಿದ್ದಾರೆ.
ಸೋಮವಾರ ಆರಂಭಗೊಂಡ ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ಸೆಂಗ್, ಪೋರ್ಚುಗಲ್‌ನ ಫ್ರೆಡ್ರಿಕೋ ಸಿಲ್ವಾ ವಿರುದ್ಧ 6-4, 6-4 ಸೆಟ್‌ಗಳಲ್ಲಿ ಗೆದ್ದರು. ಸರ್ಬಿಯಾದ ಮಿಲಾನ್ ಜೆಕಿಚ್‌ರನ್ನು ಲಾರ್ಡಿ 6-4, 6-4ರಲ್ಲಿ ಸೋಲಿಸಿ 2ನೇ ಸುತ್ತಿಗೇರಿದರು. ಇನ್ನು ಆಸ್ಪ್ರೇಲಿಯಾದ ಮಾರ್ಕ್ ಪೊಲ್ಮನ್ಸ್ 6ನೇ ಶ್ರೇಯಾಂಕಿತ ಮಾಸ್ಟರ್ಲಿ ವಿರುದ್ಧ 6-1, 6-2 ಸೆಟ್‌ಗಳಲ್ಲಿ ಜಯಿಸಿದರು. ಭಾರತದ ಪ್ರಜ್ನೇಶ್ ಗುಣೇಶ್ವರನ್, ಪ್ರಜ್ವಲ್ ದೇವ್, ಸುಮಿತ್ ನಗಾಲ್ ಸಿಂಗಲ್ಸ್‌ನಲ್ಲಿ ಸ್ಪರ್ಧಿಸಲಿದ್ದು, ಡಬಲ್ಸ್‌ನಲ್ಲಿ ಭಾರತದ 10 ಆಟಗಾರರಿದ್ದಾರೆ.
ರಾಷ್ಟ್ರೀಯ ಮಹಿಳಾ ಹಾಕಿ: ಕ್ವಾರ್ಟರ್ಗೆ ರಾಜ್ಯ ತಂಡ
ಕಾಕೀನಾಡ(ಆಂಧ್ರ ಪ್ರದೇಶ): 13ನೇ ಆವೃತ್ತಿಯ ರಾಷ್ಟ್ರೀಯ ಮಹಿಳಾ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸತತ 2 ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಶನಿವಾರ ಗೋವಾ ವಿರುದ್ಧ 10-0 ಭರ್ಜರಿ ಗೆಲುವು ಸಾಧಿಸಿದ್ದ ರಾಜ್ಯ ತಂಡ, ಭಾನುವಾರ ಚಂಡೀಗಢ ವಿರುದ್ಧ 2-1 ಗೋಲುಗಳಿಂದ ಜಯಗಳಿಸಿತು. ಇದರೊಂದಿಗೆ ‘ಬಿ’ ಗುಂಪಿನಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆಯಿತು. ಫೆ.23ಕ್ಕೆ ಕ್ವಾರ್ಟರ್ ಫೈನಲ್ ನಡೆಯಲಿದೆ.
ಚೆಸ್ ಗ್ರ್ಯಾಂಡ್‌ಮಾಸ್ಟರ್ ಆದ ಚೆನ್ನೈನ ಸಹೋದರರು: ದಾಖಲೆ!
ಚೆನ್ನೈ: ಭಾರತದ ಚೆಸ್ ಆಟಗಾರ ವಿಜ್ಞೇಶ್ ಎನ್.ಆರ್. ದೇಶದ 80ನೇ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ಜರ್ಮನಿಯಲ್ಲಿ ನಡೆದ 24ನೇ ನಾರ್ಡ್‌ವೆಸ್ಟ್ ಕಪ್ ಟೂರ್ನಿಯಲ್ಲಿ ಜಯಗಳಿಸುವ ಮೂಲಕ 2500 ರೇಟಿಂಗ್ ಅಂಕ ತಲುಪಿದ ಚೆನ್ನೈನ ಹುಡುಗ ಗ್ರ್ಯಾಂಡ್‌ಮಾಸ್ಟರ್ ಆಗಿ ಬಡ್ತಿ ಪಡೆದರು.
ಡಫಾನ್ಯೂಸ್ ಬೆಂಗಳೂರು ಓಪನ್: ಶಶಿಕುಮಾರ್, ಪ್ರಜ್ಞೇಶ್‌ಗೆ ಜಯ
ವಿಶೇಷ ಎಂದರೆ 2019ರಲ್ಲಿ ವಿಜ್ಞೇಶ್‌ರ ಸಹೋದರ ವಿಶಾಖ್ ಎನ್.ಆರ್. ಭಾರತದ 59ನೇ ಗ್ರ್ಯಾಂಡ್ ಮಾಸ್ಟರ್ ಆಗಿದ್ದರು. ಇದೀಗ ವಿಜ್ಞೇಶ್ ಹಾಗೂ ವಿಶಾಖ್ ಭಾರತದ ಮೊದಲ ಗ್ರ್ಯಾಂಡ್‌ಮಾಸ್ಟರ್ ಸಹೋದರರು ಎನ್ನುವ ದಾಖಲೆ ಬರೆದಿದ್ದಾರೆ.
ಈಜಿಪ್‌್ಟಟೂರ್ನಿಗೂ ಭಾರತದ ತಾರಾ ಕುಸ್ತಿಪಟುಗಳು ಗೈರು
ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸಿದ್ದ ಭಾರತದ ತಾರಾ ಕುಸ್ತಿಪಟುಗಳಾದ ವಿನೇಶ್ ಫೋಗಾಟ್, ಭಜರಂಗ್ ಪೂನಿಯಾ ಸೇರಿ ಇನ್ನೂ ಕೆಲವರು ಈ ವರ್ಷದ 2ನೇ ಅಂತಾರಾಷ್ಟ್ರೀಯ ಟೂರ್ನಿಗೂ ಗೈರಾಗಲು ನಿರ್ಧರಿಸಿದ್ದಾರೆ.
ಫೆಬ್ರವರಿ 23ರಿಂದ 26ರ ವರೆಗೂ ಈಜಿಪ್‌್ಟನ ಅಲೆಕ್ಸಾಂಡ್ರಿಯಾದಲ್ಲಿ ನಡೆಯಲಿರುವ ಇಬ್ರಾಹಿಂ-ಮುಸ್ತಾಫಾ ರ‍್ಯಾಂಕಿಂಗ್ ಪಂದ್ಯಾವಳಿಗೆ ಗೈರಾಗಲಿದ್ದಾರೆ. ಕಳೆದ ತಿಂಗಳು ಜಾಗ್ರೆಬ್ ಓಪನ್‌ನಲ್ಲೂ ಅಗ್ರ ಕುಸ್ತಿಪಟುಗಳು ಪಾಲ್ಗೊಂಡಿರಲಿಲ್ಲ. ಈ ವರ್ಷದ ಏಷ್ಯನ್ ಚಾಂಪಿಯನ್‌ಶಿಪ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಶ್ರೇಯಾಂಕ ಪಡೆಯಲು ಈ ರ‍್ಯಾಂಕಿಂಗ್ ಟೂರ್ನಿಗಳು ಮಹತ್ವದೆನಿಸಿವೆ.