ಬೆಂಗಳೂರು ಓಪನ್: ಹಾಲಿ ಚಾಂಪಿಯನ್’ಗೆ ಶಾಕ್ ಕೊಟ್ಟ ಸಾಕೇತ್
ಗುರುವಾರ ನಡೆದ ಸಿಂಗಲ್ಸ್ ಪಂದ್ಯದಲ್ಲಿ ಸಾಕೇತ್ ಮೈನೇನಿ, ಸುಮಿತ್ ವಿರುದ್ಧ 6-4, 6-4 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು. ಗಾಯದ ಸಮಸ್ಯೆಯಿಂದಾಗಿ ಶಶಿ ಕುಮಾರ್ ಹಿಂದೆ ಸರಿದಿದ್ದರಿಂದ ಪ್ರಜ್ನೇಶ್ ಕೂಡ ಸೆಮೀಸ್‌ಗೇರಿದರು.
ಬೆಂಗಳೂರು(ನ.16): ಹಾಲಿ ಚಾಂಪಿಯನ್ ಸುಮಿತ್ ನಗಾಲ್, ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ.
ಗುರುವಾರ ನಡೆದ ಸಿಂಗಲ್ಸ್ ಪಂದ್ಯದಲ್ಲಿ ಸಾಕೇತ್ ಮೈನೇನಿ, ಸುಮಿತ್ ವಿರುದ್ಧ 6-4, 6-4 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು. ಗಾಯದ ಸಮಸ್ಯೆಯಿಂದಾಗಿ ಶಶಿ ಕುಮಾರ್ ಹಿಂದೆ ಸರಿದಿದ್ದರಿಂದ ಪ್ರಜ್ನೇಶ್ ಕೂಡ ಸೆಮೀಸ್‌ಗೇರಿದರು.
ಪುರುಷರ ಡಬಲ್ಸ್ ಸೆಮೀಸ್‌ನಲ್ಲಿ ಭಾರತದ ಪೂರವ್ ರಾಜಾ ಹಾಗೂ ಕ್ರೊವೇಷಿಯಾದ ಆಂಟೋನಿಯೊ ಸ್ಯಾನ್ಸಿಕ್ ಜೋಡಿ, ಭಾರತದ ಸಾಕೇತ್ ಹಾಗೂ ಅರ್ಜುನ್ ಖಾಡೆ ಜೋಡಿ ವಿರುದ್ಧ 3-6, 6-2, 10-8 ಸೆಟ್‌ಗಳಲ್ಲಿ ಗೆಲುವು ಪಡೆದು ಫೈನಲ್ ಪ್ರವೇಶಿಸಿತು.