ನೇಪಾಳ ಜೊತೆ ಕ್ರಿಕೆಟ್ ಸರಣಿ-ಆಹ್ವಾನ ನೀಡಿದ ಬಿಸಿಸಿಐ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Aug 2018, 4:57 PM IST
Bcci sends invitation to Nepal cricket for under19 series
Highlights

ಸೆಪ್ಟೆಂಬರ್‌ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಬಿಡುವಿಲ್ಲದ ಸರಣಿ ಆಡಲಿದ್ದಾರೆ. ಅಂಡರ್ 19 ತಂಡಕ್ಕಾಗಿ ಬಿಸಿಸಿಐ, ಭಾರತ ಅಫ್ಘಾನಿಸ್ತಾನ, ಎನ್‌ಸಿಎ ತಂಡಗಳ ಜೊತೆ ಸರಣಿ ಆಯೋಜಿಸಿದೆ. ಇದೀಗ  ನೇಪಾಳ ತಂಡವನ್ನೂ ಸರಣಿಗೆ ಆಹ್ವಾನಿಸಿದೆ.
 

ಮುಂಬೈ(ಆ.09): ನೇಪಾಳ ಜೊತೆ ಅಂಡರ್ 19 ಏಕದಿನ ಸರಣಿಗಾಗಿ ಬಿಸಿಸಿಐ ಸಜ್ಜಾಗಿದೆ. ಇದೇ ಸೆಪ್ಟೆಂಬರ್ 9  ರಿಂದ 20 ರವರಗೆ ಸರಣಿ ಆಯೋಜಿಸಲು ಬಿಸಿಸಿಐ, ನೇಪಾಳ ಕ್ರಿಕೆಟ್ ಸಂಸ್ಥೆಗೆ ಆಹ್ವಾನ ನೀಡಿದೆ. 

ಭಾರತ,  ಅಫ್ಘಾನಿಸ್ತಾನ ಹಾಗೂ ನೇಪಾಳ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ತಂಡಗಳ ಏಕದಿನ ಸರಣಿ ಆಯೋಜನೆಗೆ ಬಿಸಿಸಿಐ ಮುಂದಾಗಿದೆ. ಸೆ.9 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಭಾರತ , ಆಫ್ಘಾನಿಸ್ತಾನವನ್ನ ಎದುರಿಸಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಪಂದ್ಯ ಆಯೋಜಿಸಲಾಗಿದೆ. 

ವಿಶೇಷ ಆಹ್ವಾನಿತ ನೇಪಾಳ ತಂಡ, ಭಾರತದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ತಂಡದ ಜೊತೆಗೆ ಪಂದ್ಯ ಆಡಲಿದೆ. ಸೆ.16 ರಂದು ಎನ್‌ಸಿಎ ತಂಡ ಭಾರತ ತಂಡವನ್ನ ಎದುರಿಸಲಿದೆ. ಸೆಪ್ಟೆಂಬರ್ 16 ರಂದು ಅಫ್ಘಾನಿಸ್ತಾನ ಹಾಗೂ ನೇಪಾಳ ತಂಡ ಹೋರಾಟ ನಡೆಸಲಿದೆ. ಬಿಸಿಸಿಐ ಆಹ್ವಾನ ಸ್ವೀಕರಿಸಿರುವ ನೇಪಾಳ ಕ್ರಿಕೆಟ್ ಸಂಸ್ಥೆ, ಇದೀಗ ಐಸಿಸಿ ಅನುಮತಿಗಾಗಿ ಕಾಯುತ್ತಿದೆ.

loader