Asianet Suvarna News Asianet Suvarna News

ಬ್ಯಾಡ್ಮಿಂಟನ್ ರ‍್ಯಾಂಕಿಂಗ್‌: 2ನೇ ಸ್ಥಾನಕ್ಕೇರಿದ ಸಿಂಧು

ಸಿಂಧು, ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದು, ಚೈನೀಸ್ ತೈಪೆಯ ತೈ ಜು ಯಿಂಗ್‌ರನ್ನು ಹಿಂದಿಕ್ಕಿದ್ದಾರೆ. ಸಿಂಧು, ಕಳೆದ ವರ್ಷ ಏಪ್ರಿಲ್‌ನಲ್ಲಿ 2ನೇ ಸ್ಥಾನಕ್ಕೇರಿದ್ದರು. ಸೈನಾ ನೆಹ್ವಾಲ್, 9ನೇ ಸ್ಥಾನಕ್ಕೇರಿದ್ದಾರೆ. 

Badminton P V Sindhu regains world number 2 spot in BWF ranking
Author
New Delhi, First Published Oct 26, 2018, 12:56 PM IST
  • Facebook
  • Twitter
  • Whatsapp

ನವದೆಹಲಿ(ಅ.26): ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ ಶಿಪ್ ಬೆಳ್ಳಿ ವಿಜೇತೆ ಭಾರತದ ಪಿ.ವಿ.ಸಿಂಧು, ಗುರುವಾರ ಬಿಡುಗಡೆಯಾದ ವಿಶ್ವ ಬ್ಯಾಡ್ಮಿಂಟನ್ ಮಹಿಳಾ ರ‍್ಯಾಂಕಿಂಗ್‌ ಪಟ್ಟಿಯಲ್ಲಿ
2ನೇ ಸ್ಥಾನಕ್ಕೇರಿದ್ದಾರೆ.

ಸಿಂಧು, ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದು, ಚೈನೀಸ್ ತೈಪೆಯ ತೈ ಜು ಯಿಂಗ್‌ರನ್ನು ಹಿಂದಿಕ್ಕಿದ್ದಾರೆ. ಸಿಂಧು, ಕಳೆದ ವರ್ಷ ಏಪ್ರಿಲ್‌ನಲ್ಲಿ 2ನೇ ಸ್ಥಾನಕ್ಕೇರಿದ್ದರು. ಸೈನಾ ನೆಹ್ವಾಲ್, 9ನೇ ಸ್ಥಾನಕ್ಕೇರಿದ್ದಾರೆ. 

ಪುರುಷರ ರ‍್ಯಾಂಕಿಂಗ್‌ನಲ್ಲಿ ಕಿದಂಬಿ ಶ್ರೀಕಾಂತ್ 6ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸಮೀರ್ ವರ್ಮಾ 5 ಸ್ಥಾನ ಏರಿಕೆಯಾಗಿದ್ದು 18ನೇ ಸ್ಥಾನದಲ್ಲಿದ್ದಾರೆ. ಆದರೆ ಎಚ್.ಎಸ್.ಪ್ರಣಯ್ 2 ಸ್ಥಾನ ಕುಸಿದಿದ್ದು 17ನೇ ಸ್ಥಾನಕ್ಕಿಳಿದಿದ್ದಾರೆ. 

Follow Us:
Download App:
  • android
  • ios