BAI disqualifies KBA ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಮಾನ್ಯತೆ ರದ್ದು..!
ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಮಾನ್ಯತೆ ರದ್ದುಪಡಿಸಿದ ಬಿಎಐ
ಕೆಬಿಎ ನಿಯಮಗಳಲ್ಲಿ ಕೆಲ ತಿದ್ದುಪಡಿ ಮಾಡಲು ಕೆಲ ಸಮಯ ನಿಗದಿಯಾಗಿತ್ತು
ಕೆಬಿಎ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಮಾನ್ಯತೆ ನವೀಕರಿಸಬಹುದು
ನವದೆಹಲಿ(ಜು.14): ನಿಯಮಗಳ ತಿದ್ದುಪಡಿಗೆ ನೀಡಿದ್ದ ಅವಧಿ ಮೀರಿದ ಕಾರಣ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ(ಕೆಬಿಎ)ಯ ಮಾನ್ಯತೆಯನ್ನು ರದ್ದುಗೊಳಿಸಿರುವುದಾಗಿ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ) ಬುಧವಾರ ಮಾಹಿತಿ ನೀಡಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿದ ಬಿಎಐ, ‘ಕೆಬಿಎ ನಿಯಮಗಳಲ್ಲಿ ಕೆಲ ತಿದ್ದುಪಡಿ ಮಾಡಲು ಮಾರ್ಚ್ ತಿಂಗಳಲ್ಲಿ ಸೂಚಿಸಿ 4 ತಿಂಗಳ ಅವಧಿ ನೀಡಲಾಗಿತ್ತು. ಆದರೆ ಇದರ ಬದಲಾಗಿ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಹೆಸರಲ್ಲೇ ಮತ್ತೊಂದು ಸಂಸ್ಥೆ ರಚಿಸುವುದಾಗಿ ಕೆಬಿಎ ತಿಳಿಸಿದೆ. ಇದು ಬಿಎಐ ನಿಯಮಗಳಿಗೆ ವಿರುದ್ಧವಾಗಿದ್ದರಿಂದ ಕೆಬಿಎ ಮಾನ್ಯತೆಯನ್ನು ರದ್ದುಗೊಳಿಸಲಾಗಿದೆ. ಮತ್ತೊಮ್ಮೆ ಅರ್ಜಿ ಸಲ್ಲಿಸಿ ಮಾನ್ಯತೆ ನವೀಕರಿಸಬಹುದು’ ಎಂದು ಬಿಎಐ ಸೂಚಿಸಿದೆ.
ಶೂಟಿಂಗ್ ವಿಶ್ವಕಪ್: ಚಿನ್ನ ಗೆದ್ದ ಮೆಹುಲಿ-ತುಷಾರ್
ಚಾಂಗ್‌ವೊನ್: ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತ 2ನೇ ಚಿನ್ನದ ಪದಕ ಗೆದ್ದುಕೊಂಡಿದೆ. ಬುಧವಾರ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಮೆಹುಲಿ ಘೋಷ್ ಮತ್ತು ಶಾಹು ತುಷಾರ್ ಮಾನೆ ಹಂಗೇರಿಯ ಜೋಡಿಯನ್ನು 17-13 ಅಂತರದಲ್ಲಿ ಸೋಲಿಸಿ ಬಂಗಾರದ ಪದಕ ತನ್ನದಾಗಿಸಿಕೊಂಡಿತು. ತುಷಾರ್‌ಗೆ ಇದು ಚೊಚ್ಚಲ ಚಿನ್ನವಾಗಿದ್ದರೆ, 2019ರಲ್ಲಿ ಬಂಗಾರ ಪಡೆದಿದ್ದ ಮೆಹುಲಿಗೆ ಇದು 2ನೇ ಪದಕ. ಇನ್ನು, 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಶಿವ ನರ್ವಾಲ್ ಮತ್ತು ಪಾಲಕ್ ಕಂಚಿನ ಪದಕ ಗೆದ್ದುಕೊಂಡರು. ಭಾರತ ಒಟ್ಟು 3 ಪದಕಗಳೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ.
ಫಿಫಾ ಅಂಡರ್-17 ವಿಶ್ವಕಪ್ ಟೂರ್ನಿಗೆ ಸಹಕಾರ: ಠಾಕೂರ್
ನವದೆಹಲಿ: ಇದೇ ವರ್ಷ ಅಕ್ಟೋಬರ್ 11ರಿಂದ 30ರ ವರೆಗೂ ಭಾರತದಲ್ಲಿ ನಡೆಯಲಿರುವ ಫಿಫಾ ಮಹಿಳೆಯರ ಅಂಡರ್-17 ಫುಟ್ಬಾಲ್ ವಿಶ್ವಕಪ್‌ಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಬುಧವಾರ ಫಿಫಾ ಟೂರ್ನಿಗಳ ನಿರ್ದೇಶಕ ಜ್ಯಾಮಿ ಯಾರ್ಜ ಅವರು ಅನುರಾಗ್‌ರನ್ನು ಭೇಟಿ ಮಾಡಿ ಟೂರ್ನಿ ಆಯೋಜನೆ ಬಗ್ಗೆ ಚರ್ಚೆ ನಡೆಸಿದರು. 16 ತಂಡಗಳು ಸ್ಪರ್ಧಿಸುವ ಟೂರ್ನಿಗೆ ಭುವನೇಶ್ವರ್, ಮಾರ್ಗೊ ಮತ್ತು ನವಿ ಮುಂಬೈ ಆತಿಥ್ಯ ವಹಿಸಲಿವೆ.
FIFA World Cup ವೇಳೆ ಸೆಕ್ಸ್ ಮಾಡಿದ್ರೆ ಹುಷಾರ್, 7 ವರ್ಷ ಜೈಲು..!
ಇದೊಂದು ಫಲಪ್ರದವಾದ ಭೇಟಿಯಾಗಿತ್ತು. ಈ ಟೂರ್ನಿ ಯಶಸ್ವಿಯಾಗಲು ಭಾರತ ಸರ್ಕಾರವು ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ ಎಂದು ಅಕಿಲ ಭಾರತ ಫುಟ್ಬಾಲ್ ಫೆಡರೇಷನ್ ಅಧ್ಯಕ್ಷ ಸುನಂದೊ ಧಾರ್ ತಿಳಿಸಿದ್ದಾರೆ. ನಾವು 2017ರ ಅಂಡರ್ 17 ಫುಟ್ಬಾಲ್ ವಿಶ್ವಕಪ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದಂತೆಯೇ ಈ ಬಾರಿಯು ಯಶಸ್ವಿ ಟೂರ್ನಿ ನಡೆಸಲು ಎದುರು ನೋಡುತ್ತಿದ್ದೇವೆ. ನಮಗೆ ಪೂರ್ಣ ರೀತಿಯ ಸಹಕಾರ ಹಾಗೂ ಮಾರ್ಗದರ್ಶನ ನೀಡುತ್ತಿರುವ ಫಿಫಾ ಹಾಗೂ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಸುನಂದೊ ಧಾರ್ ತಿಳಿಸಿದ್ದಾರೆ.