ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್: ಸಿಂಧುಗೆ ಜಯ, ಲಕ್ಷ್ಯ, ಶ್ರೀಕಾಂತ್ ಹೊರಕ್ಕೆ..!
ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಸಿಂಧು, ವಿಶ್ವನಂ.33 ಮಲೇಷ್ಯಾದ ಗೊ ಜಿನ್ ವೀ ವಿರುದ್ಧ 18-21, 21-14, 21-19ರಲ್ಲಿ ಜಯಿಸಿ ದರು. ಚೀನಾದ ಶೀ ಯು ಕಿ ವಿರುದ್ದ ಲಕ್ಷ, ಇಂಡೋನೇಷ್ಯಾದ ಆಂಟೋನಿ ಜಿಂಟಿಂಗ್ ವಿರುದ್ಧ ಶ್ರೀಕಾಂತ್ ಸೋಲುಂಡರು.
ನಿಂಗೊ (ಚೀನಾ): ಇಲ್ಲಿ ಬುಧವಾರ ಆರಂಭಗೊಂಡ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪಿ.ವಿ.ಸಿಂಧು, ಎಚ್.ಎಸ್.ಪ್ರಣಯ್ 2ನೇ ಸುತ್ತು ಪ್ರವೇಶಿಸಿದರೆ, ಲಕ್ಷ್ಯ ಸೇನ್ ಹಾಗೂ ಕಿದಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.
ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಸಿಂಧು, ವಿಶ್ವನಂ.33 ಮಲೇಷ್ಯಾದ ಗೊ ಜಿನ್ ವೀ ವಿರುದ್ಧ 18-21, 21-14, 21-19ರಲ್ಲಿ ಜಯಿಸಿ ದರು. ಚೀನಾದ ಶೀ ಯು ಕಿ ವಿರುದ್ದ ಲಕ್ಷ, ಇಂಡೋನೇಷ್ಯಾದ ಆಂಟೋನಿ ಜಿಂಟಿಂಗ್ ವಿರುದ್ಧ ಶ್ರೀಕಾಂತ್ ಸೋಲುಂಡರು.
ಕ್ಯಾಂಡಿಡೇಟ್ಸ್: ಗುಕೇಶ್‌ಗೆ ಜಯ
ಟೊರೊಂಟೊ: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ 5ನೇ ಸುತ್ತಿನಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಡಿ.ಗುಕೇಶ್ ಅಜರ್‌ಬೈಜಾನ್‌ನ ನಿಜಾತ್ ಅಬಸೊವ್ ವಿರುದ್ಧ ಗೆದ್ದು ಜಂಟಿ ಮೊದಲ ಸ್ಥಾನಕ್ಕೇರಿದ್ದಾರೆ. ಭಾರೀ ರೋಚಕತೆಯಿಂದ ಕೂಡಿದ್ದ 5ನೇ ಸುತ್ತಿನಲ್ಲಿ ಗುಕೇಶ್, ಬರೋಬ್ಬರಿ 6 ಗಂಟೆಗಳ ಕಾಲ ಸೆಣಸಾಡಿದರು. 3.5 ಅಂಕಗಳೊಂದಿಗೆ ರಷ್ಯಾದ ಇಯಾನ್ ನೆಪೊಮ್ನಿಯಾಚಿ ಜೊತೆ ಭಾರತದ 17ರ ಗುಕೇಶ್ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಇನ್ನೂ 9 ಸುತ್ತುಗಳು ಬಾಕಿ ಇದೆ.
IPL 2024 ರಾಜಸ್ಥಾನ ರಾಯಲ್‌ಗೆ ಮೊದಲ ಸೋಲಿನ ಶಾಕ್!
ಇದೇ ವೇಳೆ 5ನೇ ಸುತ್ತಿನಲ್ಲಿ ಭಾರತದ ಮತ್ತೊಬ್ಬ ತಾರಾ ಆಟಗಾರ ಆರ್.ಪ್ರಜ್ಞಾನಂದ, ನೆಪೊಮ್ನಿಯಾಚಿ ವಿರುದ್ಧ ಡ್ರಾ ಸಾಧಿಸಿದರು. ಸದ್ಯ ಪ್ರಜ್ಞಾನಂದ 2.5 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಇನ್ನು ವಿದಿತ್, ಅಮೆರಿಕದ ಫ್ಯಾಬಿಯೋ ಕರುನ ವಿರುದ್ಧ ಡ್ರಾ ಸಾಧಿಸಿ, 6ನೇ ಸ್ಥಾನ ಪಡೆದಿದ್ದಾರೆ. ಮಹಿಳೆಯರ ವಿಭಾಗದಲ್ಲಿ ವೈಶಾಲಿ ಹಾಗೂ ಕೊನೆರು ಹಂಪಿ ಇಬ್ಬರಿಗೂ 5ನೇ ಸುತ್ತಿನಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ.
ಹಾಕಿ: ಭಾರತಕ್ಕೆ 1-2 ಸೋಲು
ಪರ್ತ್: ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡ 1-2 ಗೋಲುಗಳ ವೀರೋಚಿತ ಸೋಲು ಅನುಭವಿಸಿತು. ಮೊದಲೆರಡು ಪಂದ್ಯಗಳಿಗಿಂತ ಸುಧಾರಿತ ಪ್ರದರ್ಶನ ತೋರಿದರೂ, ಭಾರತ 5 ಪಂದ್ಯಗಳ ಸರಣಿಯನ್ನು 0-3ರಲ್ಲಿ ಕೈಚೆಲ್ಲಿತು. ಮೊದಲ ಪಂದ್ಯದಲ್ಲಿ 1-5, 2ನೇ ಪಂದ್ಯದಲ್ಲಿ 2-4 ಗೋಲುಗಳ ಸೋಲುಂಡಿತ್ತು.