Asianet Suvarna News Asianet Suvarna News

ಆಸ್ಟ್ರೇಲಿಯನ್ ಓಪನ್‌ನಲ್ಲಿ ಸುಮಿತ್ ನಗಾಲ್ ದಾಖಲೆ..! ಸಂಕಷ್ಟದಲ್ಲಿದ್ದ ಟೆನಿಸಿಗ ಈಗ ಕೋಟಿ ಒಡೆಯ

26ರ ನಗಾಲ್ 2 ಗಂಟೆ 38 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಮುಖ್ಯ ಸುತ್ತಿನ ಪಂದ್ಯದಲ್ಲಿ 31ನೇ ಶ್ರೇಯಾಂಕಿತ, ವಿಶ್ವ ನಂ.27, ಕಜಕಸ್ತಾನದ ಅಲೆಕ್ಸಾಂಡರ್ ಬಬ್ಲಿಕ್ ವಿರುದ್ಧ 6-4, 6-2,7-6(7-5) ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು.

Australian Open 2024 Sumit Nagal stuns World No 31 Alexander Bublik kvn
Author
First Published Jan 17, 2024, 9:50 AM IST

ಮೆಲ್ಬರ್ನ್(ಜ.17): ಆಸ್ಟ್ರೇಲಿಯನ್ ಓಪನ್ ಅರ್ಹತಾ ಸುತ್ತಿನ ಅಭೂತಪೂರ್ವ ಪ್ರದರ್ಶನದ ಬಳಿಕ ಭಾರತದ ಅಗ್ರ ಟೆನಿಸಿಗ ಸುಮಿತ್ ನಗಾಲ್ ತಮ್ಮ ಗೆಲುವಿನ ಓಟವನ್ನು ಪ್ರಧಾನ ಸುತ್ತಿನಲ್ಲೂ ಮುಂದುವರಿಸಿದ್ದು, ಹೊಸ ದಾಖಲೆ ಬರೆದಿದ್ದಾರೆ. 

26ರ ನಗಾಲ್ 2 ಗಂಟೆ 38 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಮುಖ್ಯ ಸುತ್ತಿನ ಪಂದ್ಯದಲ್ಲಿ 31ನೇ ಶ್ರೇಯಾಂಕಿತ, ವಿಶ್ವ ನಂ.27, ಕಜಕಸ್ತಾನದ ಅಲೆಕ್ಸಾಂಡರ್ ಬಬ್ಲಿಕ್ ವಿರುದ್ಧ 6-4, 6-2,7-6(7-5) ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು. ಈ ಮೂಲಕ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಕಳೆದ 35 ವರ್ಷಗಳಲ್ಲಿ ಶ್ರೇಯಾಂಕಿತ ಆಟಗಾರನ ವಿರುದ್ಧ ಗೆಲುವು ಸಾಧಿಸಿದ ಭಾರತದ ಮೊದಲ ಟೆನಿಸಿಗ ಎಂಬ ಖ್ಯಾತಿ ಗಳಿಸಿದರು. 1989ರಲ್ಲಿ ರಮೇಶ್ ಕೃಷ್ಣನ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಗಿನ ವಿಶ್ವ ನಂ.1, ಹಾಲಿ ಚಾಂಪಿಯನ್ ಮ್ಯಾಟ್‌ಸ್ ವಿಲಾಂಡೆರ್‌ರನ್ನು ಸೋಲಿಸಿದ್ದರು. 

ಇನ್ನು, ವಿಶ್ವ ರ್ಯಾಂಕಿಂಗ್‌ನಲ್ಲಿ 137ನೇ ಸ್ಥಾನದಲ್ಲಿರುವ ನಗಾಲ್ 2ನೇ ಬಾರಿ ಗ್ರ್ಯಾನ್‌ಸ್ಲಾಂನ 2ನೇ ಸುತ್ತಿಗೇರಿದರು. ಈ ಮೊದಲು 2020ರ ಯುಎಸ್ ಓಪನ್ ನಲ್ಲಿ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದರು. ನಗಾಲ್ ಈ ಬಾರಿ ಟೂರ್ನಿಯಲ್ಲಿ 3 ಅರ್ಹತಾ ಸುತ್ತು ಸೇರಿ 4 ಪಂದ್ಯಗಳನ್ನಾಡಿದ್ದು, ಒಂದೂ ಸೆಟ್ ಸೋತಿಲ್ಲ

ಧೋನಿ ಬಳಿಕ ವಿರುಷ್ಕಾ ಜೋಡಿಗೆ ರಾಮಮಂದಿರ ಪ್ರಾಣ ಪ್ರತಿಷ್ಠೆ ಆಹ್ವಾನ, ಇನ್ವಿಟೇಶನ್ ಪಡೆದ ಕ್ರಿಕೆಟಿಗರ ಲಿಸ್ಟ್!

ಸಂಕಷ್ಟದಲ್ಲಿದ್ದ ನಗಾಲ್ ಈಗ ಕೋಟಿ ಒಡೆಯ!

ಭಾರತದ ಅಗ್ರ ಶ್ರೇಯಾಂಕಿತ ಟೆನಿಸಿಗನಾಗಿದ್ದರೂ ಸುಮಿತ್ ನಗಾಲ್ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಕಳೆದ ವರ್ಷ ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಬೇಸರ ತೋಡಿಕೊಂಡಿದ್ದ ಅವರು, ತಮ್ಮ ಬ್ಯಾಂಕ್ ಖಾತೆಯಲ್ಲಿ ಕೇವಲ ₹80 ಸಾವಿರ ಇದೆ. ಇದರಿಂದ ಜಾಗತಿಕ ಮಟ್ಟದ ದೊಡ್ಡ ದೊಡ್ಡ ಟೂರ್ನಿಗಳಲ್ಲಿ ಆಡಲು ಸಾಧ್ಯವಿಲ್ಲ ಎಂದಿದ್ದರು. ಸದ್ಯ ಆಸ್ಟ್ರೇಲಿಯನ್ ಓಪನ್ ಮೊದಲ ಸುತ್ತಲ್ಲಿ ಗೆದ್ದಿದ್ದರಿಂದ ಅವರಿಗೆ ಅಂದಾಜು ₹65 ಲಕ್ಷ ರು. ಸಿಗಲಿದೆ. ಈಗಾಗಲೇ ಅರ್ಹತಾ ಸುತ್ತಿನ 3 ಪಂದ್ಯ ಗೆದ್ದಿರುವುದರಿಂದ ಅದರಿಂದಲೂ ಒಟ್ಟು ₹35 ಲಕ್ಷ ನಗಾಲ್ ಖಾತೆ ಸೇರಲಿದೆ. ಈ ಗೆಲುವು ಆರ್ಥಿಕ ನೆರವು ಒದಗಿಸುವುದರ ಜೊತೆಗೆ ಈ ವರ್ಷದ ಇನ್ನುಳಿದ 3 ಗ್ರ್ಯಾನ್‌ಸ್ಲಾಂ ಟೂರ್ನಿಗೂ ಮುನ್ನ ನಗಾಲ್‌ರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.

ಸ್ವಿಯಾಟೆಕ್, ಆಲ್ಕರಜ್ 2ನೇ ಸುತ್ತಿಗೆ ಪ್ರವೇಶ

ಮೆಲ್ಬರ್ನ್: ವಿಶ್ವ ನಂ.1 ಇಗಾ ಸ್ವಿಯಾಟೆಕ್, ಯುವ ಸ್ಟಾರ್ ಕಾರ್ಲೊಸ್ ಆಲ್ಕರಜ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಇಗಾ, ಮಾಜಿ ಚಾಂಪಿಯನ್, ಅಮೆರಿಕದ ಸೋಫಿಯಾ ಕೆನಿನ್ ವಿರುದ್ಧ ಗೆದ್ದರೆ, ಪುರುಷರ ಸಿಂಗಲ್‌ಸ್ನಲ್ಲಿ 20ರ ಆಲ್ಕರಜ್ ಫ್ರಾನ್‌ಸ್ನ ರಿಚರ್ಡ್ ಗ್ಯಾಸ್ಕೆಟ್ ರನ್ನು ಸೋಲಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ರಬೈಕೆನಾ, ರಾಡುಕಾನು, ಪೆಗುಲಾ, ವಿಕ್ಟೋರಿಯಾ ಅಜರೆಂಕಾ, ಪುರುಷರ ಸಿಂಗಲ್ಸ್‌ನಲ್ಲಿ ಜ್ವೆರೆವ್, ಹೋಲ್ಗರ್ ರ್ಯುನೆ, ರುಡ್ 2ನೇ ಸುತ್ತಿಗೇರಿದರು.

ಸಚಿನ್ ಮಗಳು ಸಾರಾ ಆನ್ಲೈನ್ ಗೇಮ್ ಆ್ಯಪ್ ಮೂಲಕ ದಿನಕ್ಕೆ 18 ಲಕ್ಷ ರೂ. ಗಳಿಸುತ್ತಾಳೆಂಬ ವಿಡಿಯೋ ನಿಜವೋ ಫೇಕೋ?

ಯೂಕಿಗೆ ಸೋಲು

ಪುರುಷರ ಡಬಲ್‌ಸ್ ನಲ್ಲಿ ಭಾರತದ ಯೂಕಿ ಬ್ಹಾಂಬ್ರಿ-ನೆದರ್‌ಲೆಂಡ್‌ಸ್ನ ರಾಬಿನ್ ಹಾಸ್ ಮೊದಲ ಸುತ್ತಲ್ಲೇ ಸೋತರು. ಈ ಜೋಡಿ ಕೊಲಂಬಿಯಾದ ನಿಕೋಲಸ್ ಬ್ರೆಜಿಲ್‌ನ ರಾಫೆಲ್ ಮಾಟೊಸ್ ವಿರುದ್ಧ ಸೋಲು ಕಂಡಿತು.
 

Follow Us:
Download App:
  • android
  • ios