ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಸೆಮೀಸ್’ಗೆ ಲಗ್ಗೆಯಿಟ್ಟ ಭಾರತ

ಬುಧವಾರ ತಡರಾತ್ರಿ ನಡೆದ ಪಂದ್ಯದ ಆರಂಭಿಕ ಕ್ವಾರ್ಟರ್‌ನ 5ನೇ ನಿಮಿಷದಲ್ಲಿಯೇ ಹರ್ಮನ್ ಪ್ರೀತ್, ಭಾರತದ ಗೋಲಿನ ಖಾತೆ ತೆರೆದರು. ಬಳಿಕ 5 ನಿಮಿಷಗಳ ಅಂತರದಲ್ಲಿ ಫೀಲ್ಡ್ ಗೋಲ್ ಬಾರಿಸಿದ ಗುರ್ಜಂತ್ ಸಿಂಗ್, ಅಂತರವನ್ನು 2-0ಗೆ ಹೆಚ್ಚಿಸಿದರು.

Asian Hockey Champions Trophy 2018 Harmanpreet Singh Scores Hat Trick As India Outclass South Korea

ಮಸ್ಕಟ್(ಅ.26]: ಹರ್ಮನ್‌ಪ್ರೀತ್ ಸಿಂಗ್ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಲೀಗ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ದಕ್ಷಿಣ ಕೊರಿಯಾ ವಿರುದ್ಧ 4-1ರಿಂದ ಗೆಲುವು ಸಾಧಿಸಿದೆ. ಈ ಮೂಲಕ ಕೂಟದಲ್ಲಿ ಭಾರತ 5 ಪಂದ್ಯಗಳಿಂದ 13 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿಯೇ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಬುಧವಾರ ತಡರಾತ್ರಿ ನಡೆದ ಪಂದ್ಯದ ಆರಂಭಿಕ ಕ್ವಾರ್ಟರ್‌ನ 5ನೇ ನಿಮಿಷದಲ್ಲಿಯೇ ಹರ್ಮನ್ ಪ್ರೀತ್, ಭಾರತದ ಗೋಲಿನ ಖಾತೆ ತೆರೆದರು. ಬಳಿಕ 5 ನಿಮಿಷಗಳ ಅಂತರದಲ್ಲಿ ಫೀಲ್ಡ್ ಗೋಲ್ ಬಾರಿಸಿದ ಗುರ್ಜಂತ್ ಸಿಂಗ್, ಅಂತರವನ್ನು 2-0ಗೆ ಹೆಚ್ಚಿಸಿದರು. ಅಂತಿಮ ಕ್ವಾರ್ಟರ್‌ನಲ್ಲಿ ಮಿಂಚಿದ ಹರ್ಮನ್‌ಪ್ರೀತ್, 47 ಮತ್ತು 59ನೇ ನಿಮಿಷದಲ್ಲಿ ಗೋಲು ಬಾರಿಸಿ ಗಮನ ಸೆಳೆದರು.

ನಾಳೆಯಿಂದ ಸೆಮಿಫೈನಲ್:

ಚಾಂಪಿಯನ್ ಟ್ರೋಫಿಯ ಲೀಗ್ ಪಂದ್ಯಗಳು ಮುಕ್ತಾಯ ಗೊಂಡಿದ್ದು, ಅ.27ರಿಂದ ಸೆಮಿ ಫೈನಲ್ ನಡೆಯಲಿವೆ. ಭಾರತ, ಪಟ್ಟಿಯಲ್ಲಿ 4೪ನೇ ಸ್ಥಾನ ಪಡೆಯಲಿರುವ ತಂಡದೊಂದಿಗೆ ಸೆಣಸಲಿದೆ.

Latest Videos
Follow Us:
Download App:
  • android
  • ios