ನವದೆಹಲಿ(ಸೆ.12]: ಭಾರತೀಯ ಬಾಕ್ಸಿಂಗ್ ಫೆಡರೇಷನ್(ಬಿಎಫ್‌ಐ), ಏಷ್ಯನ್ ಗೇಮ್ಸ್ ಚಿನ್ನ ವಿಜೇತ ಬಾಕ್ಸರ್ ಅಮಿತ್ ಫಂಗಲ್ ಹೆಸರನ್ನು ಪ್ರಸಕ್ತ ಸಾಲಿನ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ಬಾಕ್ಸರ್‌ಗಳಾದ ಸೋನಿಯಾ ಲಾಥರ್ ಮತ್ತು ಗೌರವ್ ಬಿಧುರಿ, ಈಗಾಗಲೇ ಪ್ರಶಸ್ತಿ ರೇಸ್‌ನಲ್ಲಿದ್ದು, ಈ ಸಾಲಿಗೆ ಅಮಿತ್ ಕೂಡ ಸೇರಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯನ್ ಗೇಮ್ಸ್’ನಲ್ಲಿ ಅಮಿತ್, ಪುರುಷರ ಫ್ಲೈವೇಟ್ (49)ನಲ್ಲಿ ಒಲಿಂಪಿಕ್ ಚಾಂಪಿಯನ್ ಉಜ್ಬೇಕಿಸ್ತಾನದ ಹಸನ್‌ಬಾಯ್ ದುಸ್ಮತೋವ್‌ರನ್ನು ಸೋಲಿಸಿ ಚಿನ್ನ ಗೆದ್ದಿದ್ದರು. 

ಇದನ್ನು ಓದಿ: ಏಷ್ಯನ್ ಗೇಮ್ಸ್ 2018: ಬಾಕ್ಸಿಂಗ್’ನಲ್ಲಿ ಬಂಗಾರ ಗೆದ್ದ ಅಮಿತ್

‘ಅರ್ಜುನ ಪ್ರಶಸ್ತಿಗೆ ನನ್ನ ಹೆಸರನ್ನು ಶಿಫಾರಸು ಮಾಡಿದ್ದಕ್ಕೆ ಬಹಳ ಸಂತಸವಾಗಿದೆ. ಏಷ್ಯನ್ ಗೇಮ್ಸ್ ಚಿನ್ನ ನನ್ನ ಹೆಸರು ಶಿಫಾರಸುಗೊಳ್ಳಲು ಕಾರಣ’ ಎಂದು ಅಮಿತ್ ಹರ್ಷ ವ್ಯಕ್ತಪಡಿಸಿದ್ದಾರೆ.