Asianet Suvarna News Asianet Suvarna News

ಏಷ್ಯನ್ ಗೇಮ್ಸ್ 2018: ಮಹಿಳಾ ರೆಸ್ಲಿಂಗ್‌ನಲ್ಲಿ ವಿನೇಶ್ ಪೋಗತ್‌ಗೆ ಚಿನ್ನ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ನಿರೀಕ್ಷೆ ತಕ್ಕ ಪ್ರದರ್ಶನ ನೀಡುತ್ತಿದ್ದಾರೆ. ಇದೀಗ ಭಾರತ 2ನೇ ಚಿನ್ನದ ಪದಕ ಗೆದ್ದುಕೊಂಡಿದೆ. ಇಲ್ಲಿದೆ ಎರಡನೇ ದಿನದ ಅಪ್‌ಡೇಟ್ಸ್

Asian Games 2018: Vinesh Phogat wins gold in 50kg free style wrestling
Author
Bengaluru, First Published Aug 20, 2018, 6:13 PM IST

ಜಕರ್ತ(ಆ.20): ಏಷ್ಯನ್ ಗೇಮ್ಸ್ ಕ್ರೀಡಾಕೂಟದ 2ನೇ ದಿನವೂ ಭಾರತದ ಪದಕ ಬೇಟೆ ಮುಂದುವರಿದಿದೆ. ಇದೀಗ ಮಹಿಳಾ 50 ಕೆಜಿ ಫ್ರೀ ಸ್ಟೈಲ್ ರಸ್ಲಿಂಗ್ ವಿಭಾಗದಲ್ಲಿ ಭಾರತದ ವಿನೇಶ್ ಪೋಗತ್ ಚಿನ್ನ ಗೆದ್ದಿದ್ದಾರೆ.

ಅಂತಿ ಸುತ್ತಿನ ಹೋರಾಟದಲ್ಲಿ ವಿನೇಶ್ ಪೋಗತ್, ಜಪಾನ್ ದೇಶದ ಇರಿ ಯುಕಿ ವಿರುದ್ಧ 602 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದರು. ಈ ಮೂಲಕ ಭಾರತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 2 ಚಿನ್ನ ಸಂಪಾದಿಸಿದೆ. ವಿಶೇಷ ಅಂದರೆ ಎರಡೂ ಚಿನ್ನದ ಪದಕಗಳು ರೆಸ್ಲಿಂಗ್‌ನಲ್ಲೇ ಬಂದಿದೆ.

2014ರ ಇಂಚಿಯೋನ್ ಏಷ್ಯನ್ ಗೇಮ್ಸ್‌ನಲ್ಲಿ ವಿನೇಶ್ ಪೋಗತ್ 48 ಕೆಜಿ ಫ್ರೀ ಸ್ಟೈಲ್ ರೆಸ್ಲಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಬಾರಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ 2 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ ಓಟ್ಟು 5 ಪದಕ ಸಂಪಾದಿಸಿದೆ. ಈ ಮೂಲಕ ಪದಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಚೀನಾ 14 ಚಿನ್ನ, 7 ಬೆಳ್ಳಿ ಹಾಗೂ 8 ಕಂಚು ಸೇರಿದಂತೆ ಓಟ್ಟು 29 ಪದಕ ಗೆದ್ದುಕೊಂಡಿದೆ.

Follow Us:
Download App:
  • android
  • ios