ಜಕರ್ತಾ(ಆ.19): ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದವರಿದಿದೆ. ಇಂದು ಬೆಳಗ್ಗೆ ಶೂಟಿಂಗ್‌ನಲ್ಲಿ ಭಾರತ ಕಂಚಿನ ಪದಕ ಗೆದ್ದಿತ್ತು. ಇದೀಗ ರೆಸ್ಲಿಂಗ್ ವಿಭಾಗದಲ್ಲಿ ಭಾರತದ  ಬಜರಂಗ್ ಪೂನಿಯಾ ಭಾರತಕ್ಕೆ ಮೊದಲ ಚಿನ್ನ ತಂದಿದ್ದಾರೆ.

65 ಕೆಜೆ ಫ್ರೀ ಸ್ಟೈಲ್ ರೆಸ್ಲಿಂಗ್‌ನ ಫೈನಲ್ ರೌಂಡ್‌ನಲ್ಲಿ ಬಜರಂಗ್, ಜಪಾನ್ ದೇಶದ ತಕಾಟನಿ ದೈಚಿ ವಿರುದ್ಧ 11-8 ಅಂತರದಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

2014ರ ಇಂಚಿಯೋನ್ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಭಜರಂಗ್ ಪೂನಿಯಾ, ಇತ್ತೀಚೆಗೆ ನಡೆದ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದರು. ಇದೀಗ ಭಜರಂಗ್ ಚಿನ್ನ ಗೆಲ್ಲೋ ಮೂಲಕ ಭಾರತ 1ಚಿನ್ನ , 1 ಕಂಚಿನ ಪದಕದೊಂದಿಗೆ ಓಟ್ಟು 2 ಪದಕ ಸಂಪಾದಿಸಿದೆ. ಜೊತೆಗೆ ಪದಕ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ.