Asianet Suvarna News Asianet Suvarna News

ಫೈನಲ್‌ಗಾಗಿ ಹೋರಾಟ- ಪಾಕ್‌ಗೆ ಆರಂಭಿಕ ಶಾಕ್ ನೀಡಿದ ಬಾಂಗ್ಲಾ!

ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಿನ ಏಷ್ಯಾಕಪ್ ಸೂಪರ್ 4 ಹಂತದ ಅಂತಿಮ ಪಂದ್ಯ ಭಾರಿ ಕುತೂಹಲ ಕೆರಳಿಸಿದೆ. ಬಾಂಗ್ಲಾ ನೀಡಿರುವ 240 ರನ್ ಟಾರ್ಗೆಟ್ ಚೇಸ್ ಮಾಡುತ್ತಿರುವ ಪಾಕಿಸ್ತಾನ ಪ್ರದರ್ಶನ ಹೇಗಿದೆ? ಇಲ್ಲಿದೆ.

Asia Cup cricket Pakistan lose three early in chase against Bangladesh
Author
Bengaluru, First Published Sep 26, 2018, 10:27 PM IST
  • Facebook
  • Twitter
  • Whatsapp

ದುಬೈ(ಸೆ.26): ಏಷ್ಯಾಕಪ್ ಸೂಪರ್ 4 ಹಂತದ ಅಂತಿಮ ಪಂದ್ಯ ಭಾರಿ ಕುತೂಹಲ ಕೆರಳಿಸಿದೆ.   ಏಷ್ಯಾಕಪ್ ಫೈನಲ್‌ಗೆ ಪ್ರವೇಶಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ಬಾಂಗ್ಲಾದೇಶ ವಿರುದ್ಧ 240 ರನ್ ಟಾರ್ಗೆಟ್ ಪಡೆದಿರುವ ಪಾಕಿಸ್ತಾನ ಆರಂಭದಲ್ಲೇ ಮುಗ್ಗರಿಸಿದೆ. 

ಪಾಕ್ ಆರಂಭಿಕ ಫಕರ್ ಜಮಾನ್ 1 ರನ್ ಸಿಡಿಸಿ ಔಟಾದರೆ, ಬಾಬರ್ ಅಜಮ್ ಕೂಡ ನಿರೀಕ್ಷೆ ತಕ್ಕೆ ಆಟ ಪ್ರದರ್ಶಿಸಲಿಲ್ಲ. ನಾಯಕ ಸರ್ಫರಾಜ್ ಅಹಮ್ಮದ್ 10 ರನ್ ಸಿಡಿಸಿ ಪೆವಿಲಿಯನ್ ಸೇರಿದರು.

ಪಾಕಿಸ್ತಾನ ಸದ್ಯ 3 ವಿಕೆಟ್ ನಷ್ಟಕ್ಕೆ 53 ರನ್ ಸಿಡಿಸಿದೆ. ಗೆಲುವಿಗೆ ಇನ್ನು 187 ರನ್ ಗಳಿಸಬೇಕಿದೆ. ಬಾಂಗ್ಲಾದೇಶ ಪರ ಮುಸ್ತಾಫಿಜುರ್ ರಹೆಮಾನ್ 2 ಹಾಗೂ ಮೆಹದಿ ಹಸನ್ 1 ವಿಕೆಟ್ ಕಬಳಿಸಿದ್ದಾರೆ.

ಇದಕ್ಕೊ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 239 ರನ್‌ಗೆ ಆಲೌಟ್ ಆಯಿತು. ಮುಶ್ಫಿಕರ್ ರಹೀಮ್ 99 ರನ್ ಕಾಣಿಕೆ ನೀಡಿದರೆ, ಮೊಹಮ್ಮದ್ ಮಿಥುನ್ 60 ರನ್ ಸಿಡಿಸಿದರು.

Follow Us:
Download App:
  • android
  • ios