Asianet Suvarna News Asianet Suvarna News

ಇಂದು ಡಿಕೆ-ರಾಹುಲ್ ಇಬ್ಬರಲ್ಲಿ ಯಾರಿಗೆ ಚಾನ್ಸ್..?

ಇದುವರೆಗೆ ನಾಲ್ಕನೇ ಕ್ರಮಾಂಕದಲ್ಲಿ ಡಜನ್’ಗಟ್ಟಲೇ ಆಟಗಾರರಿಗೆ ಅವಕಾಶ ನೀಡಿದರೂ, ಯಾವೊಬ್ಬ ಆಟಗಾರರು ಭರವಸೆ ಮೂಡಿಸಿಲ್ಲ. ಆರಂಭಿಕರಾಗಿ ಧವನ್-ರೋಹಿತ್ ಮಿಂಚಿದರೆ, ಮೂರನೇ ಕ್ರಮಾಂಕದಲ್ಲಿ ಅಂಬಟಿ ರಾಯುಡು ಕೂಡಾ ಯಶಸ್ವಿಯಾಗಿದ್ದಾರೆ. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಧೋನಿ-ಕಾರ್ತಿಕ್ ಎರಡೆರಡು ಬಾರಿ ಕಣಕ್ಕಿಳಿದರೂ ಗಮನಾರ್ಹ ಪ್ರದರ್ಶನ ತೋರಲು ವಿಫಲವಾಗಿದ್ದಾರೆ.

ದುಬೈ[ಸೆ.28]: ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಭರ್ಜರಿ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾಗೆ ನಂ.4 ಕ್ರಮಾಂಕ ಮಾತ್ರ ಬಿಡಿಸಲಾರದ ಕಗ್ಗಂಟಾಗಿಯೇ ಉಳಿದಿದೆ. ಈ ಸಮಸ್ಯೆಗೆ ಏಷ್ಯಾಕಪ್ ಟೂರ್ನಿಯಲ್ಲೂ ಉತ್ತರ ಸಿಕ್ಕಿಲ್ಲ.

ಇದುವರೆಗೆ ನಾಲ್ಕನೇ ಕ್ರಮಾಂಕದಲ್ಲಿ ಡಜನ್’ಗಟ್ಟಲೇ ಆಟಗಾರರಿಗೆ ಅವಕಾಶ ನೀಡಿದರೂ, ಯಾವೊಬ್ಬ ಆಟಗಾರರು ಭರವಸೆ ಮೂಡಿಸಿಲ್ಲ. ಆರಂಭಿಕರಾಗಿ ಧವನ್-ರೋಹಿತ್ ಮಿಂಚಿದರೆ, ಮೂರನೇ ಕ್ರಮಾಂಕದಲ್ಲಿ ಅಂಬಟಿ ರಾಯುಡು ಕೂಡಾ ಯಶಸ್ವಿಯಾಗಿದ್ದಾರೆ. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಧೋನಿ-ಕಾರ್ತಿಕ್ ಎರಡೆರಡು ಬಾರಿ ಕಣಕ್ಕಿಳಿದರೂ ಗಮನಾರ್ಹ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. ಇನ್ನು ಆಫ್ಘನ್ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಕೆ.ಎಲ್ ರಾಹುಲ್ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲಿ ರಾಹುಲ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ನಿದಾಸ್ ಟ್ರೋಫಿ ಹೀರೋ ದಿನೇಶ್ ಕಾರ್ತಿಕ್’ಗೆ ಮತ್ತೊಂದು ಅವಕಾಶ ನೀಡಿದರೂ ಅಚ್ಚರಿ ಪಡಬೇಕಿಲ್ಲ.