Asianet Suvarna News Asianet Suvarna News

ಏಷ್ಯಾಕಪ್ ಫೈನಲ್’ನಲ್ಲಿ ಟೀಂ ಇಂಡಿಯಾಗೆ ಶಾಕ್ ಕೊಡುತ್ತಾ ಬಾಂಗ್ಲಾ..?

ಬಾಂಗ್ಲಾದೇಶದ ಸಂಘಟಿತ ಪ್ರದರ್ಶನ ಹಾಗೂ ಪಾಕಿಸ್ತಾನ ಬ್ಯಾಟ್ಸ್’ಮನ್’ಗಳ ಬೇಜವ್ದಾರಿಯುತ ಪ್ರದರ್ಶನ ಸೂಪರ್ 4 ಹಂತದ ಕೊನೆಯ ಪಂದ್ಯದ ಹೈಲೈಟ್ಸ್. ನಾಳೆ[ಸೆ.28] ನಡೆಯಲಿರುವ ಏಷ್ಯಾಕಪ್ ಫೈನಲ್’ನಲ್ಲಿ ಹಾಲಿ ಚಾಂಪಿಯನ್ ಭಾರತದೆದುರು ಬಾಂಗ್ಲಾ ಹುಲಿಗಳು ಹೇಗೆ ಪ್ರದರ್ಶನ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ

ದುಬೈ[ಸೆ.27]: ಪಾಕಿಸ್ತಾನ ತಂಡವನ್ನು ಬಗ್ಗುಬಡಿದು ಬಾಂಗ್ಲಾದೇಶ ಮೂರನೇ ಬಾರಿಗೆ ಏಷ್ಯಾಕಪ್’ನಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ಶಾಕ್ ನೀಡಿ ಫೈನಲ್’ಗೆ ಲಗ್ಗೆಯಿಟ್ಟಿರುವ ಮಶ್ರಾಫೆ ಮೊರ್ತಾಜಾ ಪಡೆ ನಾಳೆ ನಡೆಯುವ ಫೈನಲ್’ನಲ್ಲಿ ಅಂತಹದ್ದೇ ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದೆ.

ಬಾಂಗ್ಲಾದೇಶದ ಸಂಘಟಿತ ಪ್ರದರ್ಶನ ಹಾಗೂ ಪಾಕಿಸ್ತಾನ ಬ್ಯಾಟ್ಸ್’ಮನ್’ಗಳ ಬೇಜವ್ದಾರಿಯುತ ಪ್ರದರ್ಶನ ಸೂಪರ್ 4 ಹಂತದ ಕೊನೆಯ ಪಂದ್ಯದ ಹೈಲೈಟ್ಸ್. ನಾಳೆ[ಸೆ.28] ನಡೆಯಲಿರುವ ಏಷ್ಯಾಕಪ್ ಫೈನಲ್’ನಲ್ಲಿ ಹಾಲಿ ಚಾಂಪಿಯನ್ ಭಾರತದೆದುರು ಬಾಂಗ್ಲಾ ಹುಲಿಗಳು ಹೇಗೆ ಪ್ರದರ್ಶನ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
 

Video Top Stories