Asianet Suvarna News Asianet Suvarna News

ಕ್ರಿಕೆಟ್ ಅಭಿಮಾನಿಗಳ ಮನಗೆದ್ದ ಆಫ್ಘಾನ್ ಬ್ಯಾಟಿಂಗ್

ಟೀಂ ಇಂಡಿಯಾದಂತಹ ಬಲಿಷ್ಠ ತಂಡದೆದುರು ಆಫ್ಘಾನ್ ಕೆಚ್ಚೆದೆಯ ಹೋರಾಟ ನಡೆಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿತು. ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮೊಹಮ್ಮದ್ ಶೆಹಜಾದ್ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು. ಟೀಂ ಇಂಡಿಯಾ ಎದುರಿನ ಆಫ್ಘಾನ್ ಬ್ಯಾಟಿಂಗ್ ಪ್ರದರ್ಶನ ಹೇಗಿತ್ತು ನೀವೇ ನೋಡಿ..

ದುಬೈ[ಸೆ.26]: ಏಷ್ಯಾಕಪ್’ನಲ್ಲಿ ಈ ಬಾರಿ ಆಫ್ಘಾನ್ ಕ್ರಿಕೆಟ್ ತಂಡ ಅಭಿಮಾನಿಗಳ ಮನಗೆಲ್ಲುವಲ್ಲಿ ಸಫಲವಾಗಿದೆ. ಗ್ರೂಪ್ ಹಂತದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ್ದ ಆಫ್ಘಾನ್, ಸೂಪರ್ 4 ಹಂತದ ಮೂರು ಪಂದ್ಯಗಳಲ್ಲೂ ಕೇವಲ ಕೂದಲೆಳೆ ಅಂತರದಲ್ಲಿ ಸೋಲು ಕಂಡಿದೆ.

ಅದರಲ್ಲೂ ಟೀಂ ಇಂಡಿಯಾದಂತಹ ಬಲಿಷ್ಠ ತಂಡದೆದುರು ಆಫ್ಘಾನ್ ಕೆಚ್ಚೆದೆಯ ಹೋರಾಟ ನಡೆಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿತು. ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮೊಹಮ್ಮದ್ ಶೆಹಜಾದ್ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು. ಟೀಂ ಇಂಡಿಯಾ ಎದುರಿನ ಆಫ್ಘಾನ್ ಬ್ಯಾಟಿಂಗ್ ಪ್ರದರ್ಶನ ಹೇಗಿತ್ತು ನೀವೇ ನೋಡಿ..

Video Top Stories