ದುಬೈ(ಸೆ.14): ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ನಾಳೆಯಿಂದ(ಸೆ.15)ಆರಂಭಗೊಳ್ಳಲಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕ ಹೋರಾಟ ನಡೆಸಲಿದೆ.

ಟೂರ್ನಿ ಆರಂಭಕ್ಕೂ ಮೊದಲು 6 ತಂಡಗಳ ನಾಯಕರು ಸುದ್ದಗೋಷ್ಠಿ ನಡೆಸಿದರು. ವಿಶೇಷ ಅಂದರೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್ ಸೇರಿದಂತೆ 6 ತಂಡದ ನಾಯಕರು ಜಂಟಿಯಾಗಿ ಸುದ್ಧಿಗೋಷ್ಠಿ ನಡೆಸಿದರು.

ಸುದ್ದಿಗೋಷ್ಠಿ ಬಳಿಕ ನಾಯಕರು ಏಷ್ಯಾಕಪ್ ಟ್ರೋಫಿ ಜೊತೆ ಫೋಟೋಗೆ ಫೋಸ್ ನೀಡಿದರು. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಆಫ್ಘಾನಿಸ್ತಾನ ಹಾಗೂ ಹಾಂಕ್ ಕಾಂಗ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.

ಭಾರತ ತನ್ನ ಮೊದಲ ಪಂದ್ಯವನ್ನ ಸೆಪ್ಟೆಂಬರ್ 18 ರಂದು ಹಾಂಕ್ ಕಾಂಗ್ ವಿರುದ್ಧ ಆಡಲಿದೆ. ಬಳಿಕ ಸೆಪ್ಟೆಂಬರ್ 19 ರಂದು ಪಾಕಿಸ್ತಾನ ವಿರುದ್ಧ 2ನೇ ಪಂದ್ಯ ಆಡಲಿದೆ. ಇದಕ್ಕಾಗಿ ಟೀಂ ಇಂಡಿಯಾ ತಯಾರಿ ಆರಂಭಿಸಿದೆ.