ಫ್ರೆಂಚ್‌ ಓಪನ್‌: ರಬೈಕೆನಾ, ಸಬಲೆಂಕಾ ಕ್ವಾರ್ಟರ್‌ ಫೈನಲ್‌ಗೆ ಎಂಟ್ರಿ

ಸೋಮವಾರ ನಡೆದ ಮಹಿಳಾ ಸಿಂಗಲ್ಸ್ 4ನೇ ಸುತ್ತಿನ ಪಂದ್ಯದಲ್ಲಿ 2022ರ ವಿಂಬಲ್ಡನ್‌ ವಿಜೇತ, ಕಜಕಸ್ತಾನದ ರಬೈಕೆನಾ ಅವರು 15ನೇ ಶ್ರೇಯಾಂಕಿತ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ವಿರುದ್ಧ 6-4, 6-3 ಸೆಟ್‌ಗಳಲ್ಲಿ ಸುಲಭ ಗೆಲುವು ಪಡೆದರು. 4ನೇ ಶ್ರೇಯಾಂಕಿತ ರಬೈಕೆನಾಗೆ ಕ್ವಾರ್ಟರ್‌ನಲ್ಲಿ ಇಟಲಿಯ ಜಾಸ್ಮೀನ್‌ ಸವಾಲು ಎದುರಾಗಲಿದೆ.

Aryna Sabalenka powers through to Paris quarter finals kvn

ಪ್ಯಾರಿಸ್‌: ಚೊಚ್ಚಲ ಬಾರಿ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಗೆಲ್ಲುವ ಕಾತರದಲ್ಲಿರುವ ಎಲೆನಾ ರಬೈಕೆನಾ ಹಾಗೂ ಅರೈನಾ ಸಬಲೆಂಕಾ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಸೋಮವಾರ ನಡೆದ ಮಹಿಳಾ ಸಿಂಗಲ್ಸ್ 4ನೇ ಸುತ್ತಿನ ಪಂದ್ಯದಲ್ಲಿ 2022ರ ವಿಂಬಲ್ಡನ್‌ ವಿಜೇತ, ಕಜಕಸ್ತಾನದ ರಬೈಕೆನಾ ಅವರು 15ನೇ ಶ್ರೇಯಾಂಕಿತ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ವಿರುದ್ಧ 6-4, 6-3 ಸೆಟ್‌ಗಳಲ್ಲಿ ಸುಲಭ ಗೆಲುವು ಪಡೆದರು. 4ನೇ ಶ್ರೇಯಾಂಕಿತ ರಬೈಕೆನಾಗೆ ಕ್ವಾರ್ಟರ್‌ನಲ್ಲಿ ಇಟಲಿಯ ಜಾಸ್ಮೀನ್‌ ಸವಾಲು ಎದುರಾಗಲಿದೆ.

ಕಳೆದೆರಡು ಬಾರಿಯ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಸಬಲೆಂಕಾ, 4ನೇ ಸುತ್ತಿನಲ್ಲಿ ಅಮೆರಿಕದ ಎಮ್ಮಾ ನವಾರೊ ವಿರುದ್ಧ 6-2, 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. 8ನೇ ಶ್ರೇಯಾಂಕಿತ, ಟ್ಯುನೀಶಿಯಾದ ಒನ್ಸ್‌ ಜಬುರ್‌ ಕೂಡಾ ಅಂತಿಮ 8ರ ಘಟ್ಟ ಪ್ರವೇಶಿಸಿದರು.

ಮೆಡ್ವೆಡೆವ್‌ಗೆ ಶಾಕ್‌: 2021ರ ಯುಎಸ್‌ ಓಪನ್‌ ಚಾಂಪಿಯನ್‌, 5ನೇ ಶ್ರೇಯಾಂಕಿತ ಡ್ಯಾನಿಲ್ ಮೆಡ್ವೆಡೆವ್‌ ಪುರುಷರ ಸಿಂಗಲ್ಸ್‌ 4ನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್‌ ಡೇ ಮಿನಾರ್‌ ವಿರುದ್ಧ 6-4, 2-6, 1-6, 3-6 ಸೆಟ್‌ಗಳಲ್ಲಿ ಆಘಾತಕಾರಿ ಸೋಲುಂಡರು. ಹಾಲಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌, ಇಟಲಿಯ ಜಾನಿಕ್‌ ಸಿನ್ನರ್‌ ಫ್ರಾನ್ಸ್‌ನ ಶ್ರೇಯಾಂಕ ರಹಿತ ಕೊರೆಂಟಿನ್‌ರನ್ನು 2-6, 6-3, 6-2, 6-1 ಸೆಟ್‌ಗಳಲ್ಲಿ ಸೋಲಿಸಿ ಕ್ವಾರ್ಟರ್‌ ಪ್ರವೇಶಿಸಿದರು.

ಬೋಪಣ್ಣ-ಎಬ್ಡೆನ್‌ ಕ್ವಾರ್ಟರ್‌ಗೆ

ಹಾಲಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಕರ್ನಾಟಕದ ರೋಹನ್‌ ಬೋಪಣ್ಣ-ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಸೋಮವಾರ 3ನೇ ಸುತ್ತಿನ ಪಂದ್ಯದಲ್ಲಿ ಭಾರತದ ಶ್ರೀರಾಮ್‌ ಬಾಲಾಜಿ-ಮೆಕ್ಸಿಕೋದ ವೆರೆಲಾ ಮಾರ್ಟಿನೆಜ್‌ ವಿರುದ್ಧ 6-7(2), 6-3, 7-6(10-8) ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು. ಕ್ವಾರ್ಟರ್‌ನಲ್ಲಿ ಬೆಲ್ಜಿಯಂನ ಸ್ಯಾಂಡರ್‌ ಗಿಲ್ಲೆ-ಜೋರನ್‌ ವಿರುದ್ಧ ಸೆಣಸಾಡಲಿದ್ದಾರೆ. ಆದರೆ ಮಿಶ್ರ ಡಬಲ್ಸ್‌ನಲ್ಲಿ ರಷ್ಯಾದ ವೆರೋನಿಕಾ ಜೊತೆಗೂಡಿ ಕಣಕ್ಕಿಳಿದಿದ್ದ ಬೋಪಣ್ಣ, ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಲ್ಲಿ ಅಭಿಯಾನ ಕೊನೆಗೊಳಿಸಿದರು.

ರೆಸ್ಲರ್‌ ಬಜರಂಗ್‌ ಮೇಲಿನ ಅಮಾನತು ಆದೇಶ ರದ್ದು!

ನವದೆಹಲಿ: ಭಾರತದ ತಾರಾ ಕುಸ್ತಿಪಟು ಬಜರಂಗ್ ಪೂನಿಯಾ ಮೇಲೆ ವಿಧಿಸಲಾಗಿದ್ದ ತಾತ್ಕಾಲಿಕ ಅಮಾನತನ್ನು ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ)ದ ಶಿಸ್ತು ಸಮಿತಿ ಸೋಮವಾರ ಹಿಂಪಡೆದಿದೆ. ಡೋಪ್‌ ಪರೀಕ್ಷೆಗೆ ಮೂತ್ರದ ಮಾದರಿ ನೀಡದ ಕಾರಣಕ್ಕೆ ಏಪ್ರಿಲ್‌ 23ರಂದು ಬಜರಂಗ್‌ರನ್ನು ನಾಡಾ ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಆದರೆ ಇದನ್ನು ನಿರಾಕರಿಸಿದ್ದ ಬಜರಂಗ್‌, ಅವಧಿ ಮುಗಿದ ಪರೀಕ್ಷೆ ಕಿಟ್‌ ನೀಡಿದ್ದಕ್ಕೆ ತಾವು ಮಾದರಿ ನೀಡಿರಲಿಲ್ಲ ಎಂದಿದ್ದರು.

ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಇಂದಿನಿಂದ

ಜಕಾರ್ತ: ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಮಂಗಳವಾರ ಆರಂಭಗೊಳ್ಳಲಿದ್ದು, ಭಾರತದ ತಾರಾ ಪುರುಷ ಡಬಲ್ಸ್‌ ಜೋಡಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಪ್ರಶಸ್ತಿ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಸಾತ್ವಿಕ್‌-ಚಿರಾಗ್ ಈ ಆವೃತ್ತಿಯಲ್ಲಿ 4 ಟೂರ್ನಿಗಳಲ್ಲಿ ಫೈನಲ್‌ಗೇರಿದ್ದು, 2ರಲ್ಲಿ ಚಾಂಪಿಯನ್‌ ಆಗಿದ್ದಾರೆ. ಸದ್ಯ 3ನೇ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್‌, ಲಕ್ಷ್ಯ ಸೇನ್‌, ಕಿದಂಬಿ ಶ್ರೀಕಾಂತ್, ಪ್ರಿಯಾನ್ಶು ರಾಜಾವತ್‌ ಹಾಗೂ ಕಿರಣ್‌ ಜಾರ್ಜ್‌, ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು, ಮಹಿಳಾ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ-ಅಶ್ವಿನಿ ಪೊನ್ನಪ್ಪ, ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂಗ್‌ ಕೂಡಾ ಕಣಕ್ಕಿಳಿಯಲಿದ್ದಾರೆ.
 

Latest Videos
Follow Us:
Download App:
  • android
  • ios