ನವದೆಹಲಿ(ಜ.16): ಬಿಸಿಸಿಐನ ಮಹಿಳಾ ಲೀಗ್‌ ಮತ್ತು ನಾಕೌಟ್‌ ಅಂಡರ್‌-23 ಟಿ20 ಪಂದ್ಯಾವಳಿಯಲ್ಲಿ ಅರುಣಾಚಲ ಪ್ರದೇಶ ತಂಡ 14 ರನ್‌ಗಳಿಗೆ ಆಲೌಟ್‌ ಆಗಿದೆ. ಮಂಗಳವಾರ ನಡೆದ ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಅರುಣಾಚಲ 11 ಓವರ್‌ಗಳಲ್ಲಿ 14 ರನ್‌ಗಳಿಸಿತು. 

ಇದನ್ನೂ ಓದಿ: ರಾಮನ್‌ರಿಂದ ಬದಲಾವಣೆ ನಿರೀಕ್ಷೆ: ಮಿಥಾಲಿ ರಾಜ್‌

ತಂಡದ 7 ಆಟಗಾರ್ತಿಯರು ಶೂನ್ಯಕ್ಕೆ ಔಟಾದರು. 15 ರನ್‌ ಗುರಿ ಬೆನ್ನಟ್ಟಿದ ಹಿಮಾಚಲ ಕೇವಲ 1.2 ಓವರ್‌ಗಳಲ್ಲಿ ಜಯದ ನಗೆ ಬೀರಿತು. ಇದು ಭಾರತೀಯ ಕ್ರಿಕೆಟ್‌ನಲ್ಲಿ ದಾಖಲಾದ ಅತ್ಯಲ್ಪ ಮೊತ್ತ  ಅನ್ನೋ ಕುಖ್ಯಾತಿಗೆ ಪಾತ್ರವಾಗಿದೆ. 

ಇದನ್ನೂ ಓದಿ: ಬಾಕ್ಸಿಂಗ್: ಭಾರತದ ಮೇರಿ ಕೋಮ್ ನಂ.1

ಕಾಕತಾಳಿಯ ಎಂಬಂತೆ ಸೋಮವಾರವಷ್ಟೇ ಚೀನಾ ಮಹಿಳಾ ತಂಡ ಸಹ ಟಿ20 ಪಂದ್ಯದಲ್ಲಿ 14 ರನ್‌ಗೆ ಆಲೌಟ್‌ ಆಗಿತ್ತು. ಇದೀಗ ಅತ್ಯಂತ ಬಲಿಷ್ಠ ಕ್ರಿಕೆಟ್ ಅಡಿಪಾಯ ಹೊಂದಿರುವ ಭಾರತದಲ್ಲೂ ಇದೇ ರೀತಿ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಿರುವುದು ದುರಂತ.