ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್‌ಗೆ ಬಿಗ್ ಶಾಕ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Aug 2018, 6:01 PM IST
Arjun Tendulkar ignored for Mumbai off-season camp
Highlights

ತಂಡಕ್ಕೆ ಆಯ್ಕೆಯಾಗೋ ಮೂಲಕ ಹಲವು ಹುಬ್ಬೇರಿಸಿದ್ದರು. ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಅಂತಾರಾಷ್ಟ್ರೀಯ ವಿಕೆಟ್ ಸಂಭ್ರಮ ಆಚರಿಸಿದ್ದರು. ಆದರೆ ಇದೀಗ ಅರ್ಜುನ್ ತೆಂಡೂಲ್ಕರ್‌ಗೆ ಮುಂಬೈ ಕ್ರಿಕೆಟ್ ಸಂಸ್ಥೆ ಬಿಗ್ ಶಾಕ್ ನೀಡಿದೆ.

ಮುಂಬೈ(ಆ.07): ಭಾರತ ಅಂಡರ್ 19 ತಂಡದಲ್ಲಿ ಸಾಧಾರಣ ಪ್ರದರ್ಶನ ನೀಡಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್‌ಗೆ ಇದೀಗ  ಮುಂಬೈ ಕ್ರಿಕೆಟ್ ಸಂಸ್ಥೆ ಶಾಕ್ ನೀಡಿದೆ. ಮುಂಬೈ ಕ್ರಿಕೆಟ್ ಸಂಸ್ಥೆ ಆಯೋಜಿಸುವ ತರಬೇತಿ ಶಿಬಿರದಿಂದ ಅರ್ಜುನ್ ತೆಂಡೂಲ್ಕರ್‌ನ್ನ ಕೈಬಿಡಲಾಗಿದೆ. ಶ್ರೀಲಂಕಾ ವಿರುದ್ಧದ ಸರಣಿಯ 4 ಇನ್ನಿಂಗ್ಸ್‌ಗಳಲ್ಲಿ ಕೇವಲ 3 ವಿಕೆಟ್ ಕಬಳಿಸಿದ್ದರು. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಡಕೌಟ್ ಆದರೆ, ದ್ವಿತೀಯ ಇನ್ನಿಂಗ್ಸ್‌ನಲ್ಲಿ 14 ರನ್ ಸಿಡಿಸಿದ್ದರು. 

ಮುಂಬೈ ತರಬೇತಿ ಶಿಬಿರದಲ್ಲಿ ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಶಾರ್ದೂಲ್ ಠಾಕೂರ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಈ ಬಾರಿ ಶಶಾಂಕ್ ಸಿಂಗ್, ಶುಭಂ ರಂಜಾನೆ,  ಅಲ್ಪೇಶ್ ರಂಜಾನಿ, ಅಂಕಿತ್ ಸೋನಿ, ಆದಿತ್ಯ ದುಮಾಲ್, ಪರಿಕ್ಷಿತ್ ವಲ್ಸಿಂಗ್ಕರ್ ಹಾಗೂ ಪ್ರಸಾದ್ ಪವರ್ ಹೊಸದಾಗಿ ಕ್ಯಾಂಪ್‌ಗೆ ಆಯ್ಕೆಯಾಗಿದ್ದಾರೆ. 

 ನೆಟ್ ಪ್ರಾಕ್ಟೀಸ್‌ನಲ್ಲಿ ಅಪಾರ ಅನುಭವ ಹೊಂದಿರುವ ಅರ್ಜುನ್ ತೆಂಡೂಲ್ಕರ್, ಇಂಗ್ಲೆಂಡ್, ನ್ಯೂಜಿಲೆಂಡ್ ಕ್ರಿಕೆಟಿಗರಿಗೂ ಬೌಲಿಂಗ್ ಮಾಡಿದ್ದಾರೆ. ಭಾರತ ಅಂಡರ್ 19 ತಂಡಕ್ಕೂ ಆಯ್ಕೆಯಾಗೋ ಮೂಲಕ ಸಚಿನ್ ಹಾದಿಯಲ್ಲೇ ಸಾಗಿದ್ದರು. ಆದರೆ ಇದೀಗ ಕ್ಯಾಂಪ್‌ನಿಂದ ಡ್ರಾಪ್ ಆಗೋ ಮೂಲಕ ಹಿನ್ನಡೆ ಅನುಭವಿಸಿದ್ದಾರೆ.

loader