Asianet Suvarna News Asianet Suvarna News

ಆರ್ಚರಿ ವಿಶ್ವಕಪ್ 2018: ಪದಕ ಗೆದ್ದ ದೀಪಿಕಾ ಕುಮಾರಿ

ಆರ್ಚರಿ ವಿಶ್ವಕಪ್ ಕ್ರೀಡಾಕೂಟದಲ್ಲಿ ಭಾರತದ ದೀಪಿಕಾ ಕುಮಾರಿ ಪದಕ ಸಾಧನೆ ಮಾಡಿದ್ದಾರೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ನಿರಾಸೆ ಮೂಡಿಸಿದ್ದ ದೀಪಿಕಾ ಇದೀಗ ಪದಕ ಗೆಲ್ಲೋ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.

Archery World 2018 Deepika Kumari wins bronze
Author
Bengaluru, First Published Sep 30, 2018, 9:21 PM IST
  • Facebook
  • Twitter
  • Whatsapp

ಟರ್ಕಿ(ಸೆ.30): ಆರ್ಚರಿ ವಿಶ್ವಕಪ್ ಕ್ರೀಡಾಕೂಟದಲ್ಲಿ ಭಾರತ 2 ಪದಕ ಗೆದ್ದುಕೊಂಡಿದೆ. ವೈಯುಕ್ತಿಕ ವಿಭಾಗದಲ್ಲಿ ದೀಪಿಕಾ ಕುಮಾರಿ ಕಂಚಿನ ಪದಕ ಗೆದ್ದುಕೊಂಡರೆ, ಮಿಶ್ರ ತಂಡ ವಿಭಾಗದಲ್ಲಿ ಭಾರತ ಬೆಳ್ಳಿ ಪದಕ ಗೆದ್ದುಕೊಂಡಿದೆ.

ಜರ್ಮನಿಯ ಲಿಸಾ ಅನ್‌ರುಹ್ ವಿರುದ್ಧದ ಹೋರಾಡಿದ ದೀಪಿಕಾ 5-5 ಅಂಕಗಳಲ್ಲಿ ಪಂದ್ಯ ಸಮಬಲಗೊಂಡಿತು. ಫಲಿತಾಂಶ ನಿರ್ಧಾರಕ್ಕಾಗಿ ಶೂಟೌಟ್ ಮೊರೆ ಹೋಗಲಾಯಿತು. ಅದ್ಬುತ  ಪ್ರದರ್ಶನ ನೀಡೋ ಮೂಲಕ ದೀಪಿಕಾ ಕಂಚಿನ ಪದಕ ಗೆದ್ದುಕೊಂಡರು.

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ನಿರಾಸೆ ಮೂಡಿಸಿದ ದೀಪಿಕಾ ಇದೀಗ ಕಂಚಿನ ಪದಕ ಗೆಲ್ಲೋ ಮೂಲಕ ಮತ್ತೆ ಪದಕ ಬೇಟೆ ಮುಂದುವರಿಸಿದ್ದಾರೆ. ಇನ್ನು ಟರ್ಕಿ ವಿರುದ್ಧ ಮುಗ್ಗರಿಸಿದ ಭಾರತದ ಕಪೌಂಡ್ ಮಿಕ್ಸ್‌ಡ್ ಟೀಂ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.  
 

Follow Us:
Download App:
  • android
  • ios