ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ಶರ್ಮಾ ಟ್ರೋಲ್-ಕೊಹ್ಲಿ ಗರಂ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 21, Aug 2018, 9:11 PM IST
Anushka sharma trolled after virat kohli century
Highlights

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸದರೂ ಅಥವ ಕಳಪೆ ಪ್ರದರ್ಶನ ನೀಡಿದರೂ ಪತ್ನಿ ಅನುಷ್ಕಾ ಶರ್ಮಾ ಮಾತ್ರ ಟೀಕೆಗೆ ಒಳಗಾಗುತ್ತಲೇ ಇದ್ದಾರೆ. ಇದೀಗ ಅನುಷ್ಕಾ ಮತ್ತೆ ಟ್ವಿಟರಿಗರ ಟ್ರೋಲ್‌ಗೆ ತುತ್ತಾಗಿದ್ದಾರೆ

ನಾಟಿಂಗ್‌ಹ್ಯಾಮ್(ಆ.21): ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗಿದೆ. ಇತ್ತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನಾಟಿಂಗ್‌ಹ್ಯಾಮ್‌ನಲ್ಲಿ ಪತ್ನಿ ಅನುಷ್ಕಾ ಶರ್ಮಾ ಸಾಥ್ ನೀಡಿದ್ದಾರೆ. ಪ್ರತಿ ಬಾರಿ ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಟೀಕೆಗೆ ಗುರಿಯಾಗುತ್ತಿದ್ದ ಅನುಷ್ಕಾ ಶರ್ಮಾ ಇದೀಗ ಕೊಹ್ಲಿ ಸೆಂಚುರಿ ಸಿಡಿಸಿದಾಗಲೂ ಟ್ರೋಲ್ ಆಗಿದ್ದಾರೆ.

ಟ್ರೆಂಟ್‌ಬ್ರಿಡ್ಜ್ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಸೆಂಚುರಿ ಸಿಡಿಸಿ ಗ್ಯಾಲರಿಯಲ್ಲಿದ್ದ ಪತ್ನಿ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ನೀಡಿದ್ದರು. ಕೊಹ್ಲಿ ಶತಕದ ಬಳಿಕ ಅನುಷ್ಕಾ ಶರ್ಮಾ ಟ್ರೋಲ್ ಆಗಿದ್ದಾರೆ.

ಸೆಪ್ಟೆಂಬರ್ 28ರಂದು ಬಿಡುಗಡೆಯಾಗಲಿರುವ ಅನುಷ್ಕಾ ಶರ್ಮಾ ಬಾಲಿವುಡ್ ಚಿತ್ರ ಸುಯಿ ದಾಗ್ ಚಿತ್ರದ ಸೀನ್ ಒಂದರ ಫೋಟೋ ಇದೀಗ ಟೀಂ ಇಂಡಿಯಾ ಕ್ರಿಕೆಟಿಗರು ಹಾಗೂ ಇತರ ಕ್ರೀಡಾಪಟುಗಳು ಜೊತೆಗೆ ಎಡಿಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ಅನುಷ್ಕಾ ಶರ್ಮಾ ಟ್ರೋಲ್ ಟ್ವೀಟ್

 

 

 

 

 

 

 

 

loader