Asianet Suvarna News Asianet Suvarna News

ಕನ್ನಡಿಗನ ಕುಂಬ್ಳೆ ಹುದ್ದೆಗೆ ಮತ್ತೊಬ್ಬ ಕನ್ನಡಿಗನ ಅರ್ಜಿ!: ಈತ ಕೋಚ್ ಆದ್ರೆ ರವಿಶಾಸ್ತ್ರಿ ಗತಿ ಏನು.?

ಸದ್ಯ ಖಾಲಿ ಇರುವ ಟೀಂ ಇಂಡಿಯಾದ ಮುಖ್ಯ ಕೋಚ್​​​ ಸ್ಥಾನಕ್ಕೆ ರವಿಶಾಸ್ತ್ರಿ ಹೆಸರು ಮುಂಚೂಣಿಯಲ್ಲಿದ್ದಾರೆ. ಅವರೇ ಟೀಂ ಇಂಡಿಯಾದ ಚುಕ್ಕಾಣಿ ಹಿಡಿಯುವುದು ಎಂಬ ಮಾತುಗಳು ಕೇಳಿಬರ್ತಿವೆ. ಆದರೆ ಈ ಅಂತರದಲ್ಲಿ ಕನ್ನಡಿಗನ್ನೊಬ್ಬ ಟೀಂ ಇಂಡಿಯಾ ಕೋಚಿಂಗ್​​ ಸ್ಟಾಫ್'​​ಗೆ ಸೇರಿಕೊಳ್ಳಲು ತಯಾರಾಗುತ್ತಿದ್ದಾರೆ. ಕನ್ನಡಿಗ ಅನಿಲ್​ ಕುಂಬ್ಳೆ ಜಾಗ ಖಾಲಿ ಮಾಡಿದ ಮೇಲೆ ಮತ್ತೊಬ್ಬ ಕನ್ನಡಿಗ ಆ ಜಾಗವನ್ನ ಆಕ್ರಮಿಸಲು ತಯಾರಿ ನಡೆಸಿದ್ದಾರೆ.

Another Cricketer From Karnataka Applied For Team Indias Coach Place
Author
First Published Jun 30, 2017, 9:14 AM IST
  • Facebook
  • Twitter
  • Whatsapp

ಸದ್ಯ ಖಾಲಿ ಇರುವ ಟೀಂ ಇಂಡಿಯಾದ ಮುಖ್ಯ ಕೋಚ್​​​ ಸ್ಥಾನಕ್ಕೆ ರವಿಶಾಸ್ತ್ರಿ ಹೆಸರು ಮುಂಚೂಣಿಯಲ್ಲಿದ್ದಾರೆ. ಅವರೇ ಟೀಂ ಇಂಡಿಯಾದ ಚುಕ್ಕಾಣಿ ಹಿಡಿಯುವುದು ಎಂಬ ಮಾತುಗಳು ಕೇಳಿಬರ್ತಿವೆ. ಆದರೆ ಈ ಅಂತರದಲ್ಲಿ ಕನ್ನಡಿಗನ್ನೊಬ್ಬ ಟೀಂ ಇಂಡಿಯಾ ಕೋಚಿಂಗ್​​ ಸ್ಟಾಫ್'​​ಗೆ ಸೇರಿಕೊಳ್ಳಲು ತಯಾರಾಗುತ್ತಿದ್ದಾರೆ. ಕನ್ನಡಿಗ ಅನಿಲ್​ ಕುಂಬ್ಳೆ ಜಾಗ ಖಾಲಿ ಮಾಡಿದ ಮೇಲೆ ಮತ್ತೊಬ್ಬ ಕನ್ನಡಿಗ ಆ ಜಾಗವನ್ನ ಆಕ್ರಮಿಸಲು ತಯಾರಿ ನಡೆಸಿದ್ದಾರೆ.

ಟೀಂ ಇಂಡಿಯಾ ಕೋಚ್​​​ ಸ್ಥಾನಕ್ಕೆ ಅನಿಲ್​​ ಕುಂಬ್ಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಯಾರಿಗೆ ಬೇಸರವಾಯಿತೋ ಇಲ್ಲವೋ ತಿಳಿದಿಲ್ಲ, ಆದರೆ ಕರ್ನಾಟಕದ ಪ್ರತೀ ಕ್ರಿಕೆಟ್​​ ಅಭಿಮಾನಿಯೂ ತುಂಬಾ​​​ ಬೇಜಾರಾಗಿದ್ದರು. ಕಾರಣ ಟೀಂ ಇಂಡಿಯಾ ಚುಕ್ಕಾಣಿ ಹಿಡಿದಿದ್ದ ನಮ್ಮ ಕನ್ನಡಿಗನೊಬ್ಬ ಸ್ಥಾನ ಕಳೆದುಕೊಂಡನಲ್ಲಾ ಅಂತ. ಆದ್ರೆ ನಿನ್ನೆ ನಡೆದ ಮತ್ತೊಂದು ಬೆಳವಣಿಗೆ ಕನ್ನಡದ ಮಕ್ಕಳಿಗೆ ಥ್ರಿಲ್​​ ಆಗುವಂತೆ ಮಾಡಿದೆ. ಕುಂಬ್ಳೆಯ ನಂತರ ಮತ್ತೊಬ್ಬ ಕನ್ನಡಿಗ ಟೀಂ ಇಂಡಿಯಾಗೆ ಸೇರಿಕೊಳ್ಳೋ ಸನಿಹದಲ್ಲಿದ್ದಾನೆ.

ಕೋಚ್​​ ಆಗ್ತಾರೆ ವೆಂಕಟೇಶ್​​ ಪ್ರಸಾದ್​​​: ಬಿಸಿಸಿಐಗೆ ಅರ್ಜಿ ಗುಜರಾಯಿಸಿದ ಪ್ರಸಾದ್​​​

ಹೌದು, ಟೀಂ ಇಂಡಿಯಾದ ಮಾಜಿ ವೇಗಿ, ಕನ್ನಡಿಗ ವೆಂಕಟೇಶ್​​ ಪ್ರಸಾದ್​​​ ನಿನ್ನೆ ತಾನೆ ಬಿಸಿಸಿಐಗೆ ಕೋಚ್​​​ ಅರ್ಜಿಯನ್ನ ಸಲ್ಲಿಸಿದ್ದಾರೆ. ಇದರೊಂದಿಗೆ ಕನ್ನಡಿಗ ಅನಿಲ್​​​ ಕುಂಬ್ಳೆ ಸ್ಥಾನ ತುಂಬಲು ಮತ್ತೊಬ್ಬ ಕನ್ನಡಿಗ ವೆಂಕಟೇಶ್​​​ ಪ್ರಸಾದ್​​​​​ ಸಿದ್ಧನಾಗ್ತಿದ್ದಾನೆ. ಇದರೊಂದಿಗೆ 7 ಕೋಟಿ ಕನ್ನಡಿಗರ ಮನಗೆಲ್ಲಲು ರೆಡಿಯಾಗುತ್ತಿದ್ದಾರೆ.

Another Cricketer From Karnataka Applied For Team Indias Coach Place

ಪ್ರಸಾದ್​​​ ಕೋಚ್​​ ಆದ್ರೆ ರವಿಶಾಸ್ತ್ರಿ ಗತಿ ಏನು.?: ರವಿಶಾಸ್ತ್ರಿ ಈಗಾಗಲೇ ಕೋಚ್​​ ಆಗೋದು ಕನ್ಫರ್ಮ್​ ಆಗಿದೆಯಲ್ಲಾ.?

ಖಂಡಿತ ಇದೊಂದು ಅನುಮಾನ ನಿಮಗೆ ಮೂಡಿರುತ್ತೆ. ಈಗಾಗಲೇ ರವಿಶಾಸ್ತ್ರಿ ಕೋಚ್​​ ಆಗೋದು ಕನ್ಫರ್ಮ್​ ಆಗಿದೆ. ವೆಂಕಟೇಶ್​​ ಪ್ರಸಾದ್​​ ಎಲ್ಲಿಂದ ಬಂದ್ರು ಅಂತ. ಇಲ್ಲೇ ಇರುವುದು ನೋಡಿ ಟ್ವಿಸ್ಟ್​​​. ಕನ್ನಡಿಗ ವೆಂಕಟೇಶ್​​ ಪ್ರಸಾದ್​​​​ ಅರ್ಜಿ ಸಲ್ಲಿಸಿರೋದು ಮುಖ್ಯ ಕೋಚ್​​​ ಸ್ಥಾನಕ್ಕಲ್ಲ ಬದಲಿಗೆ ಅನಿಲ್​​ ಕುಂಬ್ಳೆಯಿಂದ ತೆರವಾಗಿರುವ ಬೌಲಿಂಗ್​​ ಕೋಚ್​​​ ಸ್ಥಾನಕ್ಕೆ.

ರವಿ ಆದರೇನು..? ವೀರೂ ಆದರೇನು..?: ಯಾರ ಅಡಿಯಲ್ಲೂ ಕೆಲಸ ಮಾಡಲು ಸಿದ್ಧ ಅಂದ ವೆಂಕಿ

ಮುಖ್ಯ ಕೋಚ್​​ ಯಾರು ಎಂಬುದೇ ಇನ್ನೂ ಸ್ಪಷ್ಟವಾಗಿಲ್ಲ. ಆಗಲೇ ವೆಂಕಟೇಶ್ ಪ್ರಸಾದ್​​​ ಬೌಲಿಂಗ್ ಕೋಚ್​​ ಸ್ಥಾನಕ್ಕೆ ಅರ್ಜಿ ಸಲ್ಲಿಸಿಬಿಟ್ಟಿದ್ದಾರೆ. ಮುಖ್ಯ ಕೊಚ್​​ ಆಗಿ ರವಿ ಶಾಸ್ತ್ರಿಯಾಗಲಿ, ವಿರೇಂದ್ರ ಸೆಹ್ವಾಗ್​​ ಆದ್ರೂ ಆಗಲಿ ನಾನು ಯಾರ ಅಡಿಯಲ್ಲಾದ್ರೂ ಕೆಲಸ ಮಾಡಲು ಸಿದ್ಧ. ನನ್ನ ಕೆಲಸದ ಮೇಲೆ ನನಗೆ ನಂಬಿಕೆ ಇದೆ ಎಂದು ಪ್ರಸಾದ್​​​ ಹೇಳಿಕೊಂಡಿದ್ದಾರೆ.

ಎರಡನೇ ಬಾರಿಗೂ ಬೌಲಿಂಗ್​​ ಕೋಚ್​​ ಆಗಿ ಕ್ಲಿಕ್​ ಆಗ್ತಾರಾ.?: 2007ರ ವಿಶ್ವಕಪ್​​ ರಿಪೀಟ್​​ ಮಾಡಿಸುತ್ತಾರಾ ಪ್ರಸಾದ್​​​..?

ವೆಂಕಿ ಬೌಲಿಂಗ್​​ ಕೋಚ್​​​ ಆಗ್ತಿರೋದು ಇದೇ ಮೊದಲಲ್ಲ, ಈ ಹಿಂದೆ ಅಂದ್ರೆ 2007ರಿಂದ 2009ರ ವರೆಗೆ ಟೀಂ ಇಂಡಿಯಾ ಬೌಲಿಂಗ್​ ಕೋಚ್​​​ ಆಗಿದ್ರು. ಈ ಅವಧಿಯಲ್ಲೇ ಟೀಂ ಇಂಡಿಯಾ ಮೊದಲ ಟಿ20 ವಿಶ್ವಕಪ್​​ ಗೆದ್ದಿದ್ದು. ಆ ಎರಡು ವರ್ಷದ ಅವಧಿಯಲ್ಲಿ ಟೀಂ ಇಂಡಿಯಾದ ಬೌಲಿಂಗ್​ ಸಾಕಷ್ಟು ಸುಧಾರಿಸಿತ್ತು. ಈಗ ಮತ್ತೆ ವೆಂಕಿ ಬೌಲಿಂಗ್​ ಕೋಚ್​​ ಆದ್ರೆ 2019ರ ವಿಶ್ವಕಪ್​​ ಮತ್ತೆ ಭಾರತದ ಪಾಲಾಗೋದು ಕನ್​ಫರ್ಮ್​.

ವೆಂಕಿಗೂ ಇದ್ದಾರೆ ದುಷ್ಮನ್​ಗಳು: ಬೌಲಿಂಗ್​ ಕೋಚ್​​​ ರೇಸ್​ನಲ್ಲಿದ್ದಾರೆ ಜ್ಯಾಕ್​​

ವೆಂಕಟೇಶ್​​​ ಪ್ರಸಾದ್ ​​ಸದ್ಯ ಅರ್ಜಿ ಹಾಕಿದ್ದಾರೆ. ಹಾಗಂದ ಮಾತ್ರಕ್ಕೆ ಅವರು ಬೌಲಿಂಗ್​​ ಕೋಚ್​​ ಆಗೋದು ಅಷ್ಟು ಸುಲಭವಲ್ಲ. ಕಾರಣ ಅವರಿಗೆ ಟೀಂ ಇಂಡಿಯಾದ ಮತ್ತೊಬ್ಬ ವೇಗಿ ಜಹೀರ್​​ ಖಾನ್​​ ಫೈಟ್​​ ನೀಡ್ತಿದ್ದಾರೆ. ಜಹೀರ್​​ ಖಾನ್​ ಕೂಡ ಟೀಂ ಇಂಡಿಯಾದ ಬೌಲಿಂಗ್​​ ಕೋಚ್​​​ ಆಗೋ ಮನಸ್ಸು ಮಾಡಿದ್ದಾರೆ.

ಒಟ್ಟಿನಲ್ಲಿ ಎಲ್ಲಾ ಅಂದುಕೊಂಡಂತೆ ಆದ್ರೆ, 7 ಕೋಟಿ ಕನ್ನಡಿಗರ ಹಾರೈಕೆ ಇದ್ರೆ ವೆಂಕಿ ಕೆಲವೇ ದಿನಗಳಲ್ಲಿ ಟೀಂ ಇಂಡಿಯಾದ ಮೇಷ್ಟ್ರಾಗಲಿದ್ದಾರೆ. ಇದರೊಂದಿಗೆ ಅನಿಲ್​ ಕುಂಬ್ಳೆ ಬಿಟ್ಟ ಸ್ಥಾನವನ್ನ ಮತ್ತೊಬ್ಬ ಕನ್ನಡಿಗ ತುಂಬುವ ಮೂಲಕ ಕನ್ನಡಿಗರ ಖುಷಿಗೆ ಕಾರಣವಾಗಲಿದ್ದಾರೆ. ಆಲ್​ ದ ಬೆಸ್ಟ್​​ ವೆಂಕಿ.

Follow Us:
Download App:
  • android
  • ios